ಮಾಲ್ ಇದ್ಯಾ ಪ್ಲೀಸ್ ಎಂದ ದೀಪಿಕಾ, ಭಾರಿ ಮಳೆ ಭೀತಿಯಲ್ಲಿ ಕರ್ನಾಟಕ: ಸೆ.22ರ ಟಾಪ್ 10 ಸುದ್ದಿ!

By Suvarna News  |  First Published Sep 22, 2020, 4:56 PM IST

ಭಾರಿ ಮಳೆಗೆ ಕರ್ನಾಟಕದ ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ  5 ಜಿಲ್ಲೆಗಳಲ್ಲಿ ಇನ್ನೂ ಮಳೆಯಬ್ಬರ ಇದೆ ಎಂಬ ಸೂಚನೆ ಸಿಕ್ಕಿದೆ. ಐಪಿಎಲ್ ಟೂರ್ನಿಯಲ್ಲಿಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗಿದೆ. ಕಂಗನಾ ರಣಾವತ್ ಅಭಿನಯದ ಮಣಿಕರ್ಣಿಕಾ ಸಿನಿಮಾದಿಂದ ನಟ ಸೋನು ಸೂದ್ ಹೊರಬಂದ ಕಾರಣ ಹೇಳಿದ್ದಾರೆ. ಬ್ಯಾಂಕ್‌ಗಳಿಂದ 66,000 ಕೋಟಿ ಶಂಕಾಸ್ಪದ ವ್ಯವಹಾರ, ಮಾಲ್ ಇದ್ಯಾ ಪ್ಲೀಸ್ ಎಂದ ದೀಪಿಕಾ ಸೇರಿದಂತೆ ಸೆಪ್ಟೆಂಬರ್ 22ರ ಟಾಪ್ 10 ಸದ್ದಿ ವಿವರ.


ಲಡಾಖ್ ಗಡಿ ಸಂಘರ್ಷಕ್ಕೆ 3 ವರ್ಷಗಳ ಹಿಂದೆ ಚೀನಾ ಪ್ಲಾನ್!...

Tap to resize

Latest Videos

ಭಾರತ-ಚೀನಾ ಗಡಿ ಸಮಸ್ಯೆಗೆ ಕಳೆದ ಕೆಲ ತಿಂಗಳುಗಳಿಂದ ನಡೆಯುತ್ತಿದೆ. ಆದರೆ ಇದಕ್ಕಾಗಿ ಚೀನಾ ಬರೋಬ್ಬರಿ 3 ವರ್ಷಗಳ ಹಿಂದೆ ಪ್ಲಾನ್ ಮಾಡಿತ್ತು. 2017ರಲ್ಲಿ ಡೋಕ್ಲಾಂ ಬಿಕ್ಕಟ್ಟಿನ ಬೆನ್ನಲ್ಲೇ ಚೀನಾ ರಹಸ್ಯ ಪ್ಲಾನ್ ರೆಡಿ ಮಾಡಿಕೊಂಡಿದೆ. ಇದಕ್ಕಾಗಿ ಚೀನಾ ಸೇನೆ ತಮ್ಮ ನೆಲೆಗಳನ್ನು ದ್ವಿಗುಣಗೊಳಿಸಿದೆ. ಇದೇ ಇಂದಿನ ಬಿಕ್ಕಟ್ಟಿಗೆ ಕಾರಣವಾಗಿದೆ.

ಯುದ್ಧನೌಕೆಗೆ ಮಹಿಳಾ ಪ್ರವೇಶ, ಇತಿಹಾಸದಲ್ಲೇ ಮೊದಲ ಬಾರಿಗೆ ಹುದ್ದೆ!...

ದೇಶದ ರಕ್ಷಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿ ಇಬ್ಬರು ಮಹಿಳಾ ಅಧಿಕಾರಿಗಳನ್ನು ಯುದ್ಧ ನೌಕೆಯಲ್ಲಿನ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಸಬ್‌ ಲೆಫ್ಟಿನೆಂಟ್‌ ಕುಮುದಿನಿ ತ್ಯಾಗಿ ಮತ್ತು ಸಬ್‌ ಲೆಫ್ಟಿನೆಂಟ್‌ ರಿತಿ ಸಿಂಗ್‌ ಅವರೇ ಆ ಅಧಿಕಾರಿಗಳು. ಇವರು ಯುದ್ಧನೌಕೆಯಿಂದ ಕಾರ್ಯಾಚರಣೆ ನಡೆಸುವ ಹೆಲಿಕಾಪ್ಟರ್‌ಗಳಲ್ಲಿ ‘ಅಬ್ಸರ್ವರ್‌’ ಕೆಲಸ ಮಾಡಲಿದ್ದಾರೆ.

5 ಜಿಲ್ಲೆಗಳಲ್ಲಿ ಇನ್ನೂ ಮಳೆಯಬ್ಬರ!...

ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಾದ ಉಡುಪಿ, ದಕ್ಷಿಣಕನ್ನಡ, ಕೊಡಗು, ಚಿಕ್ಕಮಗಳೂರಲ್ಲಿ ಮಳೆ ಇಳಿಮುಖವಾಗಿದ್ದರೂ ರಾಜ್ಯದ ಐದು ಜಿಲ್ಲೆಗಳಲ್ಲಿ ಸೋಮವಾರವೂ ಮಳೆಯಬ್ಬರ ಮುಂದುವರಿದಿದೆ.

IPL 2020: ಚೆನ್ನೈ ಅಬ್ಬರಕ್ಕೆ ರಾಜಸ್ಥಾನ ರಾಯಲ್ಸ್ ಬ್ರೇಕ್ ಹಾಕುತ್ತಾ..?...

ಮೇಲ್ನೋಟಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬಲಿಷ್ಠವಾಗಿ ಕಂಡು ಬಂದರೂ, ರಾಜಸ್ಥಾನ ಕೂಡಾ ಸಂಘಟಿತ ಪ್ರದರ್ಶನ ತೋರಿದರೆ, ಸಿಎಸ್‌ಕೆಗೆ ಸೋಲುಣಿಸಬಹುದು. ಜೋಸ್‌ ಬಟ್ಲರ್ ಹಾಗೂ ಬೆನ್‌ ಸ್ಟೋಕ್ಸ್ ಅನುಪಸ್ಥಿತಿ ರಾಜಸ್ಥಾನ ರಾಯಲ್ಸ್ ತಂಡವನ್ನು ಕಾಡುವ ಸಾಧ್ಯತೆಯಿದೆ.

ಬಿಸಿಸಿಐ ಬಾಸ್ ಸೌರವ್ ಗಂಗೂಲಿ ಮನಗೆದ್ದ ದೇವದತ್ ಪಡಿಕ್ಕಲ್ ಬ್ಯಾಟಿಂಗ್..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯುವ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ತಾವಾಡಿದ ಮೊದಲ ಪಂದ್ಯದಲ್ಲೇ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ. ದೇವದತ್ ಬ್ಯಾಟಿಂಗೆ ಬಿಸಿಸಿಐ ಬಾಸ್ ಸೌರವ್ ಗಂಗೂಲಿ ಶಹಬ್ಬಾಸ್ ಎಂದಿದ್ದಾರೆ

ಕಂಗನಾ ಅಭಿನಯದ ಮಣಿಕರ್ಣಿಕಾದಿಂದ ಹೊರಕ್ಕೆ: ಕಾರಣ ಹೇಳಿದ ಸೋನು...

ಕಂಗನಾ ರಣಾವತ್ ಅಭಿನಯದ ಮಣಿಕರ್ಣಿಕಾ ಸಿನಿಮಾದಿಂದ ನಟ ಸೋನು ಸೂದ್ ಹೊರ ಬಂದಿದ್ದರು. ಈ ಬಗ್ಗೆ ನಟ ಸೋನು ಸೂದ್ ಇತ್ತೀಚಿನ ಇಂಟರ್‌ವ್ಯೂನಲ್ಲಿ ಮಾತನಾಡಿದ್ದಾರೆ.

ಮಾಲ್ ಇದ್ಯಾ ಪ್ಲೀಸ್ ಎಂದ ದೀಪಿಕಾ: ಇಲ್ಲಿದೆ ನಟಿಯ ಡ್ರಗ್ಸ್ ಚಾಟ್...

ಈ ಹಿಂದೆಯೇ ದೀಪಿಕಾ ಬಗ್ಗೆ ಸಣ್ಣದಾಗಿ ಚರ್ಚೆಯಾಗಿದ್ದರೂ, ಡ್ರಗ್ಸ್ ವಿಚಾರದಲ್ಲಿ ಪದ್ಮಾವತ್ ನಟಿ ಈಗ ಭಾರೀ ಚರ್ಚೆಗೊಳಗಾಗಿದ್ದಾರೆ. ನೆಟ್ಟಿಗರಂತೂ ನಟಿಯನ್ನು ಡ್ರಗ್ಸ್ ವಿಚಾರವಾಗಿ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ. ಇಲ್ಲಿದೆ ನಟಿ ಮಾಲ್‌ಗಾಗಿ ನಡೆಸಿದ ಸಂಭಾಷಣೆ

ತುಮಕೂರಿಗೆ ಕೇಂದ್ರದಿಂದ ಭರ್ಜರಿ ಕೊಡುಗೆ : ಸೃಷ್ಟಿಯಾಗಲಿದೆ ಸಾವಿರಾರು ಉದ್ಯೋಗ...

ತುಮಕೂರಿನಲ್ಲಿ ಶೀಘ್ರವೇ ಕೈಗಾರಿಕಾ ವಲಯ ತಲೆ ಎತ್ತಲಿದ್ದು, ಈ ಬಗ್ಗೆ ಕೇಂದ್ರ ವಾಣಿಜ್ಯ ಸಚಿವಾಲಯವು ಸಂಪುಟದ ಅನುಮತಿ ಕೋರಲಿದೆ.

ಬ್ಯಾಂಕ್‌ಗಳಿಂದ 66,000 ಕೋಟಿ ಶಂಕಾಸ್ಪದ ವ್ಯವಹಾರ!...

ಭಾರತದ ಬಹುತೇಕ ಎಲ್ಲ ಬ್ಯಾಂಕುಗಳು 2010 ಹಾಗೂ 2017ರ ನಡುವಿನ ಅವಧಿಯಲ್ಲಿ ಸುಮಾರು 66,000 ಕೋಟಿ ರು. ಮೊತ್ತದ ಅನುಮಾನಾಸ್ಪದ ಹಣಕಾಸು ವ್ಯವಹಾರ ನಡೆಸಿರುವುದನ್ನು ಅಮೆರಿಕದ ತನಿಖಾ ಸಂಸ್ಥೆಯೊಂದು ಪತ್ತೆಹಚ್ಚಿದೆ. ಈ ಹಣ ಭಯೋತ್ಪಾದನೆ, ಡ್ರಗ್ಸ್‌ ವ್ಯವಹಾರ ಹಾಗೂ ಆರ್ಥಿಕ ವಂಚನೆಗಳಿಗೆ ಬಳಕೆಯಾಗಿರುವ ಸಾಧ್ಯತೆಯಿದೆ.

TVS ಅಪಾಚೆ RTR 200 4V ಬೈಕ್ ಬಿಡುಗಡೆ!...

TVS ಮೋಟಾರ್ ಕಂಪನಿಯ ಜನಪ್ರಿಯ ಬೈಕ್ TVS ಅಪಾಚೆ  RTR 200 4V ಬೈಕ್ ಬಿಡುಗಡೆಯಾಗಿದೆ. ಸೂಪರ್ ಮೊಟೋ ABS ತಂತ್ರಜ್ಞಾನ ಹಾಗೂ ಅತ್ಯಾಕರ್ಷಕ 2 ಬಣ್ಣಗಳಲ್ಲಿ ನೂತನ ಬೈಕ್ ಲಭ್ಯವಿದೆ. ಈ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ

click me!