ಕೊರೋನಾ ವಾರಿಯರ್ಸ್‌ ಮೇಲೆ ಹಲ್ಲೆ ಮಾಡಿದ್ರೆ ಸೀದಾ ಜೈಲು, ನೋ ಬೇಲ್!

By Suvarna News  |  First Published Sep 22, 2020, 4:17 PM IST

ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡುವವರಿಗೆ ಏಳು ವರ್ಷ ಜೈಲು/ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ರೆ  ಹುಷಾರ್/ ಸಂಸತ್‌ನಲ್ಲಿ ಮಹತ್ವದ ಮಸೂದೆ ಪಾಸ್/ ಆರೋಗ್ಯ ಸಿಬ್ಬಂದಿ ಹಿತ ಕಾಪಾಡಲು  ಕ್ರಮ


ನವದೆಹಲಿ(ಸೆ. 22)  ಲೋಕಸಭೆ ಮಹತ್ವದ ಮಸೂದೆಯೊಂದನ್ನು ಪಾಸ್ ಮಾಡಿದೆ. ಕೊರೋನಾ ವಾರಿಯರ್ಸ್ ಸೇರಿದಂತೆ ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುವವವರು ಸೀದಾ ಜೈಲಿಗೆ ಹೋಗಬೇಕಾಗುತ್ತದೆ. 

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಸೂದೆ ಪಾಸ್ ಆಗಿದ್ದು ಅಧಿಕೃತ ಶಾಸನವಾಗಲಿದೆ.  ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದರೆ ಏಳು ವರ್ಷ ಜೈಲು ಶೀಕ್ಷೆ ಅನುಭವಿಸಬೇಕಾಗುತ್ತದೆ.

Latest Videos

undefined

ಸಾಂಕ್ರಾಮಿಕ ಕಾಯಿಲೆಗಳ ಬಿಲ್ 1987 ಕ್ಕೆ ಮಹತ್ವದ ತಿದ್ದುಪಡಿ ಮಾಡಲಾಗಿದೆ.  ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುವುದು ಜಾಮೀನು ರಹಿತ ಅಪರಾಧ ಆಗಲಿದ್ದು ದಂಡ ಮತ್ತು ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

'ಪ್ರಾಣ ತ್ಯಾಗ ಮಾಡಿದ ಕೊರೋನಾ ವಾರಿಯರ್ಸ್ ಗೆ ಯಾಕಿಂಥ ಅಪಮಾನ'

ಘಟನೆಯನ್ನು ಆಧರಿಸಿ ಮೂರು ತಿಂಗಳಿನಿಂದ ಐದು ವರ್ಷ ಜೈಲು, 50ಸಾವಿರ ರೂ. ನಿಂದ 2ಲಕ್ಷ ರೂ. ವರೆಗೆ ದಂಡ ವಿಧಿಸಬಹುದಾಗಿದೆ. ಗಂಭೀರ ಗಾಯ ಮಾಡಿದರೆ ಆರು ತಿಂಗಳಿನಿಂದ ಏಳು ವರ್ಷ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. 1.5 ಲಕ್ಷ ರೂ. ದಂಡ ಕಟ್ಟಬೇಕಾಗುತ್ತದೆ.

ರಾಜ್ಯಗಳಿಗೂ ಈ ಕಾನೂನಿನ ಬಗ್ಗೆ ನಿರ್ದೇಶನ ನೀಡಲಾಗುವುದು. ಕೊರೋನಾ ವಿರುದ್ಧ ಹೋರಾಟ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆದ ಅನೇಕ ಘಟನೆಗಳು ನಡೆದಿದ್ದು ಕೇಂದ್ರ  ಕ್ರಮ ತೆಗೆದುಕೊಂಡಿದೆ ಎಂದು ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ  ನೀಡಿರುವ ಕಾಂಗ್ರೆಸ್ ಮಸೂದೆಯನ್ನು ಸಂಪುಟ ಸಮಿತಿ ಮುಂದೆ ಇಡಬೇಕಾಗಿತ್ತು. ಕೆಲವು ಅಂಶಗಳು ಸ್ಪಷ್ಟವಾಗಿಲ್ಲ ಎಂದು ಹೇಳಿದೆ. 

click me!