ದೀಪಿಕಾ ಹೇಳಿದ ದಾಂಪತ್ಯ ಜೀವನದ ಗುಟ್ಟು, ಏನಾಯ್ತು ಲಡಾಖ್ ಬಿಕ್ಕಟ್ಟು? ಮೇ.31ರ ಟಾಪ್ 10 ಸುದ್ದಿ!

By Suvarna NewsFirst Published May 31, 2020, 4:54 PM IST
Highlights

ದೇಶದಲ್ಲಿ ಒಂದೇ ದಿನ 8400 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ವಿಶ್ವದಲ್ಲಿ 9ನೇ ಸ್ಥಾನದಲ್ಲಿದ್ದ ಭಾರತ ಇದೀಗ 7ನೇ ಸ್ಥಾನಕ್ಕೆ ಜಿಗಿಯುವತ್ತ ದಾಪುಗಾಲಿಟ್ಟಿದೆ. ಲಡಾಖ್ ಗಡಿ ಬಿಕ್ಕಟ್ಟು ಪರಿಹಾರಕ್ಕೆ ಚೀನಾ ಜೊತೆ ಭಾರತ ಮಾತುಕತೆ ನಡೆಸಿದೆ. ಇಷ್ಟೇ ಅಲ್ಲ ಅಮೇರಿಕ ಮಧ್ಯಸ್ಥಿಕೆ ಅವಶ್ಯಕತೆ ಇಲ್ಲ ಎಂದಿದೆ. ಪತಿ ರಣ್‌ವೀರ್ ಸಿಂಗ್ ಕುರಿತು ಹಲವು ಸೀಕ್ರೆಟ್ ಮಾಹಿತಿಯನ್ನು ದೀಪಿಕಾ ಪಡುಕೋಣೆ ಹಂಚಿಕೊಂಡಿದ್ದಾರೆ. ಬಹುತೇಕ ಪಂದ್ಯ ಫಿಕ್ಸಿಂಗ್ ಆಗಿದೆ, ಕಾರ್ಮಿಕರ ಜೀವ ಉಳಿಸಿದ ಪೊಲೀಸ್ ಸೇರಿದಂತೆ ಮೇ.31ರ ಟಾಪ್ 10 ಸುದ್ದಿ ಇಲ್ಲಿವೆ.

ಕೊರೋನಾ ಸೋಂಕು: 9ರಿಂದ 7ನೇ ಸ್ಥಾನಕ್ಕೆ ಜಿಗಿಯುತ್ತಾ ಭಾರತ..?

ಅತಿಹೆಚ್ಚು ಕೊರೋನಾ ಸೋಂಕಿತ ದೇಶಗಳ ಪೈಕಿ ಭಾರತ ಸದ್ಯ 9ನೇ ಸ್ಥಾನದಲ್ಲಿದ್ದು,  ಭಾನುವಾರವಾದ ಇಂದು 7ನೇ ಸ್ಥಾನಕ್ಕೆ ಜಿಗಿಯುವ ಸಾಧ್ಯತೆಯಿದೆ. ಭಾರತದಲ್ಲೀಗ 1,81,827 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ದೇಶದಲ್ಲಿ ಟೆಸ್ಟಿಂಗ್ ಹೆಚ್ಚಳದಿಂದಾಗಿ ಸೋಂಕು ಪತ್ತೆ ಕೂಡಾ ಹೆಚ್ಚಾಗುತ್ತಿದೆ.

ಚೀನಾ ಗಡಿ ವಿಚಾರ: ಮದ್ಯಸ್ಥಿಕೆಗೆ ಬಂದ ಟ್ರಂಪ್‌ಗೆ ಮತ್ತೆ ಮುಖಭಂಗ!

ಲಡಾಖ್‌ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಭಾರತ ಹಾಗೂ ಚೀನಾ ಪರಸ್ಪರ ಮಾತುಕತೆಯಲ್ಲಿ ತೊಡಗಿವೆ. ರಾಜತಾಂತ್ರಿಕ ಹಾಗೂ ಸೇನಾ ಮಟ್ಟಗಳೆರಡರಲ್ಲೂ ಮಾತುಕತೆ ನಡೆದಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ತಿಳಿಸಿದ್ದಾರೆ. ತನ್ಮೂಲಕ ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ಮೊದಲ ಕೇಂದ್ರ ಸಚಿವರಾಗಿದ್ದಾರೆ.


ದೇಶದಲ್ಲಿ ಒಂದೇ ದಿನ 8400 ಮಂದಿಗೆ ಸೋಂಕು, 316 ಜನ ಸಾವು!...

ನಾಲ್ಕನೇ ಹಂತದ ಲಾಕ್‌ಡೌನ್‌ ಅಂತ್ಯವಾಗುವ ಮುನ್ನಾ ದಿನ ದೇಶದಲ್ಲಿ ಕೊರೋನಾ ವೈರಸ್‌ ಅಟ್ಟಹಾಸ ಮೇರೆ ಮೀರಿದೆ. ಶನಿವಾರ ಒಂದೇ ದಿನ ದಾಖಲೆಯ 8406 ಮಂದಿಯಲ್ಲಿ ಹೊಸದಾಗಿ ಸೋಂಕು ಕಂಡುಬಂದಿದ್ದರೆ, ಇದೇ ವೇಳೆ ಕೊರೋನಾಗೆ ತುತ್ತಾಗಿದ್ದ ಬರೋಬ್ಬರಿ 316 ಮಂದಿ ಸಾವಿಗೀಡಾಗಿದ್ದಾರೆ. ಒಂದೇ ದಿನ ಇಷ್ಟೊಂದು ಸಂಖ್ಯೆಯಲ್ಲಿ ಜನರು ಮೃತಪಟ್ಟಿರುವುದು ಕೂಡ ದಾಖಲೆ.

ಪತಿ ನಂಬರ್ ಹಿಂಗೆಲ್ಲಾ ಸೇವ್‌ ಮಾಡ್ಬೋದು; ದೀಪಿಕಾ ಪಡುಕೋಣೆ ಮಾಡಿರೋದು ನೋಡಿ!

ಬಾಲಿವುಡ್‌ ಸುಂದರಿ, ಬೆಂಗಳೂರು ಹುಡುಗಿ ದೀಪಿಕಾ ಪಡುಕೋಣೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗಿನಿಂದಲೂ ತಮ್ಮ ಪರ್ಸನಲ್‌ ಲೈಫ್‌ ಬಗ್ಗೆ ಕೊಂಚ ಒಪನ್‌ ಆಗಿದ್ದಾರೆ. ರಣ್ವೀರ್‌ ಸಿಂಗ್‌ ಬಗ್ಗೆ ಯಾರಿಗೂ ತಿಳಿಯದ ವಿಚಾರಗಳನ್ನು ಹಂಚಿಕೊಂಡಿದ್ದಾರೆ...

ಇಬ್ಬರು ಕನ್ನಡ ನಟಿಯರ ಅಕೌಂಟ್‌ ಹ್ಯಾಕ್; ಇದರ ಹಿಂದಿರುವ ಆ ವ್ಯಕ್ತಿ ಯಾರು ?

ಲಾಕ್‌ಡೌನ್‌ ಆರಂಭದಿಂದಲ್ಲೂ ಅಭಿಮಾನಿಗಳ ಜತೆ ಉತ್ತಮ ಸಂಪರ್ಕ ಹೊಂದಲು ಸೆಲೆಬ್ರಿಟಿಗಳು ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್  ಆಗಿದ್ದಾರೆ  ಆದರೆ ಈಗ ಅದೇ ಅವರನ್ನು ತೊಂದರೆಗೆ ಸಿಲುಕಿಕೊಳ್ಳುವಂತೆ ಮಾಡಿದೆ...


ನೂರಾರು ವಲಸೆ ಕಾರ್ಮಿಕರ ಜೀವ ಉಳಿಸಿದ ಶಿವಾಜಿನಗರ ಪೊಲೀಸ್ ಕಾನ್ಸ್ ಟೇಬಲ್

ಈ  ಕಾನ್ಸ್ ಟೇಬಲ್ ಒನ್ ಮ್ಯಾನ್ ಆರ್ಮಿ ರೀತಿ ಕೆಲಸ ಮಾಡಿದ್ದಾರೆ. ಸಮಯಪ್ರಜ್ಞೆಯಿಂದ ನೂರಾರು ವಲಸೆ ಕಾರ್ಮಿಕರ ಜೀವ ಉಳಿಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ  ದುರ್ಘಟನೆ ನಡೆದಿದ್ದರೂ ಪೊಲೀಸ್ ಅಧಿಕಾರಿ ಶಿವಾಜಿನಗರ ಠಾಣೆಯ ಕಾನ್ಸ್ ಟೇಬಲ್ ರವಿ ಕುಮಾರ್ ಕಾರ್ಯದಿಂದ ಯಾವುದೇ ಅವಘಢಕ್ಕೆ ಆಸ್ಪದವಾಗಿಲ್ಲ. 

ಮಂಗಳೂರಿನಲ್ಲಿ ನಾಳೆ ಖಾಸಗಿ ಬಸ್ಸು‌ ಶುರು: ಹೀಗಿದೆ ಸಿದ್ಧತೆ

ಮಂಗಳೂರಿನಲ್ಲಿ ನಾಳೆಯಿಂದ ಖಾಸಗಿ ‌ಬಸ್ ಗಳು ರಸ್ತೆಗಿಳಿಯಳಿದ್ದು, ದ.ಕ ಜಿಲ್ಲೆಯಲ್ಲಿ 200ಕ್ಕೂ ಅಧಿಕ ಖಾಸಗಿ ಬಸ್ ಗಳ ಸಂಚಾರ ಆರಂಭಿಸಲಿವೆ. ಬರೋಬ್ಬರಿ ಎರಡೂವರೆ ತಿಂಗಳ ಬಳಿ ಮಂಗಳೂರಿನಲ್ಲಿ ಖಾಸಗಿ ಬಸ್ ಸಂಚಾರ ನಡೆಸಲಿದ್ದು, ಅರ್ಧದಷ್ಟು ‌ಬಸ್ಸುಗಳನ್ನು ನಾಳೆ ರಸ್ತೆಗಿಳಿಸಲಾಗುತ್ತಿದೆ. 

ಸೋಶಿಯಲ್ ಮೀಡಿಯಾ ಕಂಪನಿಗಳಿಂದ ಅಭಿವ್ಯಕ್ತಿ ಸ್ವಾತಂತ್ರ್ಯದ ಹನನ: ರಾಜೀವ್ ಚಂದ್ರಶೇಖರ್

ಸೋಶಿಯಲ್ ಮೀಡಿಯಾ ಕಂಪನಿ ಬಳಸುತ್ತಿರುವ ಅಲ್ಗಾರಿದಂ ವಿರುದ್ಧ ಸಂಸದ ರಾಜೀವ್ ಚಂದ್ರಶೇಖರ್ ಗರಂ| ದಿಗ್ಗಜ ಕಂಪನಿಗಳು ಜನರ ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿದುಕೊಳ್ಳುತ್ತಿವೆ| ಈ ನಿಯಮಗಳಿಂದ ಚುನಾವಣೆ ಮಾತ್ರವಲ್ಲ ವ್ಯಾಪಾರದ ಮೇಲೂ ಪರಿಣಾಮ ಬೀರುತ್ತದೆ

ಭಾರತದಲ್ಲಿ ಬಿಡುಗಡೆಯಾಗುತ್ತಿದೆ ಒಲಾ ಎಲೆಕ್ಟ್ರಿಕ್ ಸ್ಕೂಟರ್!

 ಕ್ಯಾಬ್ ಸರ್ವೀಸ್ ದಿಗ್ಗಜನಾಗಿರುವ ಓಲಾ ಇದೀಗ ಆಟೋಮೊಬೈಲ್ ಕ್ಷೇತ್ರಕ್ಕೆ ಕಾಲಿಟ್ಟಿದೆ. ಶೀಘ್ರದಲ್ಲೇ ಓಲಾ ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ಒಲಾ ಸ್ಕೂಟರ್ ವಿಶೇಷತೆ ಇಲ್ಲಿದೆ.


ಎಲ್ಲಾ ಕ್ರಿಕೆಟ್ ಪಂದ್ಯ ಒಂದಲ್ಲಾ ಒಂದು ರೀತಿ ಫಿಕ್ಸ್; ಬಂಧಿತ ಬುಕ್ಕಿ ಹೇಳಿಕೆಗೆ ಬೆಚ್ಚಿ ಬಿದ್ದ 


 20 ವರ್ಷಗಳ ಹಿಂದೆ ನಡೆದ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಯಾರೂ ಮರೆತಿಲ್ಲ. ಸೌತ್ ಆಫ್ರಿಕಾ ನಾಯಕ ಹ್ಯಾನ್ಸಿ ಕ್ರೋನಿಯೆ ಸೇರಿದಂತೆ ಹಲವು ಭಾರತೀಯ ಕ್ರಿಕೆಟಿಗರ ಹೆಸರು ಕೇಳಿ ಬಂದ ಪ್ರಕರಣ. ಈ ಪ್ರಕರಣಗ ಫಿಕ್ಸಿಂಗ್ ರೂವಾರಿ ಸಂಜೀವ್ ಚಾವ್ಲಾ ದೆಹಲಿ ಪೊಲೀಸರ ಅತಿಥಿಯಾಗಿ ಹಲವು ದಿನಗಳಾಗಿವೆ. ವಿಚಾರಣೆಯಲ್ಲಿ ಬುಕ್ಕಿ ಸಂಜೀವ್ ಸ್ಫೋಟಕ ಮಾಹಿತಿ ಹೊರಹಾಕಿದ್ದಾನೆ. 

click me!