ರಾಜ್ಯ ಸರ್ಕಾರ ಮಹತ್ವದ ಆದೇಶ: ಯಡಿಯೂರಪ್ಪಗೆ ಥ್ಯಾಂಕ್ಸ್ ಹೇಳಿದ ಸಿದ್ದರಾಮಯ್ಯ..!

By Suvarna News  |  First Published May 31, 2020, 2:46 PM IST

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಹೊರಡಿಸಿದ ಆದೇಶಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಬೆಂಗಳೂರು, (ಮೇ.31): ಪರಿವಾರ,ತಳವಾರ, ಸಿದ್ದಿ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗೆಜೆಟ್‌ ನೋಟಿಫಿಕೇಷನ್ ಹೊರಡಿಸಿದೆ.

ಪರಿವಾರ,ತಳವಾರ, ಸಿದ್ದಿ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗೆಜೆಟ್‌ ನೋಟಿಫಿಕೇಷನ್ ಹೊರಡಿಸಿದ್ದು ಸರ್ಕಾರದ ಕ್ರಮಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಧನ್ಯವಾದ ಸಲ್ಲಿಸಿದ್ದಾರೆ.

Latest Videos

undefined

ಯಾವುದಕ್ಕೂ ಹೆದರಬೇಡಿ, ಆಡಳಿತದ ಕಡೆ ಗಮನ ಕೊಡಿ; BSYಗೆ ಹೈಕಮಾಂಡ್ ಶ್ರೀರಕ್ಷೆ..!

ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಪರಿವಾರ,ತಳವಾರ, ಸಿದ್ದಿ ಸಮುದಾಯಗಳನ್ನು ವಿಳಂಬವಾಗಿಯಾದರೂ ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಗೆಜೆಟ್ ಆದೇಶ ಹೊರಡಿಸಿರುವ ಸಿಎಂ ಬಿಎಸ್‌ ಯಡಿಯೂರಪ್ಪ ಅವರಿಗೆ ಧನ್ಯವಾದಗಳು ಎಂದಿದ್ದಾರೆ.

ಪರಿವಾರ,ತಳವಾರ, ಸಿದ್ದಿ ಸಮುದಾಯಗಳನ್ನು ವಿಳಂಬವಾಗಿಯಾದರೂ ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಗೆಜೆಟ್ ಆದೇಶ ಹೊರಡಿಸಿರುವ ಅವರಿಗೆ ಧನ್ಯವಾದಗಳು.

ಹಿಂದೆ ನಮ್ಮ ಸರ್ಕಾರ ಈ ಬಗ್ಗೆ ಸಂಪುಟದಲ್ಲಿ ತೀರ್ಮಾನಿಸಿ ಬೇಡಿಕೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಟ್ಟಿತ್ತು.
ಸಹಕರಿಸಿದ ಎಲ್ಲರಿಗೂ ವಂದನೆಗಳು! pic.twitter.com/oeAxafir8E

— Siddaramaiah (@siddaramaiah)

ಹಿಂದೆ ನಮ್ಮ ಸರ್ಕಾರ ಈ ಬಗ್ಗೆ ಸಂಪುಟದಲ್ಲಿ ತೀರ್ಮಾನಿಸಿ ಬೇಡಿಕೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಟ್ಟಿತ್ತು. ಸಹಕರಿಸಿದ ಎಲ್ಲರಿಗೂ ವಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ಪತ್ರ ಬರೆದಿದ್ದ ಸಿದ್ದು
ಪರಿವಾರ ಮತ್ತು ತಳವಾರ ಎಂಬ ಈ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿದ ಪಂಗಡಗಳೆಂದು ಅಂಗೀಕರಿಸಿ ರಾಜಪತ್ರ ಹೊರಡಿಸಲಾಗಿತ್ತು.  ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿ ಎರಡು ತಿಂಗಳಾದರು ರಾಜ್ಯ ಸರ್ಕಾರ ತನ್ನ ರಾಜಪತ್ರದಲ್ಲಿ ಇದುವರೆಗೂ ಈ ವಿಷಯದ ಕುರಿತಾಗಿ ಆದೇಶ ಹೊರಡಿಸಿರಲಿಲ್ಲ.

ಇದರಿಂದ  ಸಿದ್ದರಾಮಯ್ಯ, ಪರಿವಾರ,ತಳವಾರ ಸಮುದಾಯಗಳು ಪರಿಶಿಷ್ಟ ಪಂಗಡದ ಮೀಸಲು ಸೌಲಭ್ಯ ಪಡೆಯಬೇಕಾದರೆ ಕೇಂದ್ರ ಸರ್ಕಾರದ ತೀರ್ಮಾನವನ್ನು ಬಿಎಸ್‌ ಯಡಿಯೂರಪ್ಪ ತಕ್ಷಣ ರಾಜ್ಯಪತ್ರದಲ್ಲಿ ಹೊರಡಿಸುವುದು ಅಗತ್ಯ ಎಂದು ಬಿಎಸ್‌ವೈಗೆ ಪತ್ರವನ್ನು ಬರೆದಿದ್ದರು.

ಇದೀಗ ರಾಜ್ಯ ಸರ್ಕಾರವೂ ಆದೇಶ ಹೊರಡಿಸಿದ್ದರಿಂದ ಸಿದ್ದರಾಮಯ್ಯ ಥ್ಯಾಂಕ್ಸ್ ಹೇಳಿದ್ದಾರೆ.

click me!