ಅಯೋಧ್ಯೆಯಲ್ಲಿ ಮದ್ಯ, ಮಾಂಸ ಮಾರಾಟ ನಿಷೇಧಕ್ಕೆ ಯೋಗಿ ಸಜ್ಜು

By Web DeskFirst Published Nov 13, 2018, 1:27 PM IST
Highlights

ಕೆಲವು ಸ್ಥಳೀಯ ಸಾಧು-ಸಂತರು ಹಾಗೂ ಯತಿಗಳು ಮದ್ಯ ಮತ್ತು ಮಾಂಸ ಮಾರಾಟ ನಿಷೇಧಕ್ಕೆ ಮನವಿ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಆದಿತ್ಯನಾಥ ಸಂಪುಟದ ಸಚಿವ ಶ್ರೀಕಾಂತ್‌ ಶರ್ಮಾ, ‘ಈ ಮನವಿಯ ಬಗ್ಗೆ ನಮಗೆ ಗೊತ್ತಿದೆ. ಕಾನೂನಿನ ಚೌಕಟ್ಟಿನಲ್ಲಿ ಮದ್ಯ ಮತ್ತು ಮಾಂಸ ಮಾರಾಟದ ನಿಷೇಧ ಮಾಡಲಾಗುತ್ತದೆ’ ಎಂದರು.
 
ಲಖನೌ[ನ.13]: ಫೈಜಾಬಾದ್‌ ಜಿಲ್ಲೆಗೆ ಅಯೋಧ್ಯೆ ಎಂದು ಮರುನಾಮಕರಣ ಮಾಡುವ ನಿರ್ಧಾರ ಕೈಗೊಂಡ ನಂತರ ಫೈಜಾಬಾದ್‌ ಜಿಲ್ಲಾದ್ಯಂತ ಮದ್ಯ ಮತ್ತು ಮಾಂಸ ಮಾರಾಟ ನಿಷೇಧ ಮಾಡಲು ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಚಿಂತನೆ ನಡೆಸುತ್ತಿದೆ.

ಫೈಜಾಬಾದ್‌ ಇನ್ಮುಂದೆ ಅಯೋಧ್ಯೆ: ಯೋಗಿ ಆದಿತ್ಯನಾಥ್!

ಕೆಲವು ಸ್ಥಳೀಯ ಸಾಧು-ಸಂತರು ಹಾಗೂ ಯತಿಗಳು ಮದ್ಯ ಮತ್ತು ಮಾಂಸ ಮಾರಾಟ ನಿಷೇಧಕ್ಕೆ ಮನವಿ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಆದಿತ್ಯನಾಥ ಸಂಪುಟದ ಸಚಿವ ಶ್ರೀಕಾಂತ್‌ ಶರ್ಮಾ, ‘ಈ ಮನವಿಯ ಬಗ್ಗೆ ನಮಗೆ ಗೊತ್ತಿದೆ. ಕಾನೂನಿನ ಚೌಕಟ್ಟಿನಲ್ಲಿ ಮದ್ಯ ಮತ್ತು ಮಾಂಸ ಮಾರಾಟದ ನಿಷೇಧ ಮಾಡಲಾಗುತ್ತದೆ’ ಎಂದರು.

ಊರಿನ ಹೆಸರೇಕೆ ಬದಲಾಗುತ್ತದೆ?: ಇಲ್ಲಿದೆ ಕುತೂಹಲಕಾರಿ ವಿಚಾರ

ಕೋಶಿ ಪರಿಕ್ರಮ ಯಾತ್ರೆಯ ಸ್ಥಳಗಳು ಎಂದು ಅಯೋಧ್ಯೆ ಹಾಗೂ ಮಥುರೆಗಳನ್ನು ಹೆಸರಿಸಲಾಗುತ್ತದೆ. ಇದರಿಂದ ತನ್ನಿಂತಾನೇ ಇಲ್ಲಿ ಮದ್ಯ-ಮಾಂಸ ನಿಷೇಧ ಸಾಧ್ಯವಾಗಲಿದೆ. ಕೋಶಿ ಪರಿಕ್ರಮ ಯಾತ್ರಾ ಸ್ಥಳಗಳಲ್ಲಿ ಇವುಗಳ ನಿಷೇಧ ಈಗಾಗಲೇ ಜಾರಿಯಲ್ಲಿದೆ ಎಂದು ಶರ್ಮಾ ಹೇಳಿದರು.

ಅಯೋಧ್ಯೆ: ಏಕತಾ ಪ್ರತಿಮೆಗಿಂತಲೂ ಎತ್ತರದ ರಾಮನ ಪ್ರತಿಮೆ?

‘ಅಯೋಧ್ಯೆ ಪವಿತ್ರ ಸ್ಥಳವಾಗಿದ್ದು, ಇಲ್ಲಿ ಮದ್ಯ ಹಾಗೂ ಮಾಂಸ ಮಾರಾಟ ಆಗಕೂಡದು. ನಿಷೇಧದಿಂದ ಆರೋಗ್ಯಕರ ಜೀವನಶೈಲಿ ನಿರ್ಮಾಣವಾಗಲಿದೆ’ ಎಂದು ಆಚಾರ್ಯ ಸತ್ಯೇಂದ್ರ ದಾಸ್‌ ಎಂಬ ಸಂತರು ಹೇಳಿದ್ದಾರೆ.

click me!