ಬೆಂಗ್ಳೂರಲ್ಲಿ ನಿಯಂತ್ರಣ ತಪ್ಪಿದ ಕೊರೋನಾ, ಯಾವಾಗ ವೀರ ಮದಕರಿ ಚಿತ್ರೀಕರಣ; ಜೂ.22ರ ಟಾಪ್ 10 ಸುದ್ದಿ!

By Suvarna News  |  First Published Jun 22, 2020, 5:04 PM IST

ಚೀನಿ ಸೈನಿಕರನ್ನು ಹಿಮ್ಮೆಟ್ಟಿಸಿ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನೆ ಸಂಪೂರ್ಣ ಹಿಡಿತ ಸಾಧಿಸಿದೆ. ಬೆಂಗಳೂರಲ್ಲಿ ಕೊರೋನಾ ಮೀತಿ ಮೀರುತ್ತಿದೆ. 10 ಎರಿಯಾಗಳು ಸೀಲ್‌ಡೌನ್ ಮಾಡಲಾಗಿದೆ. ಬಹುತೇಕ ವಾರ್ಡ್‌ಗಳಿಗೆ ಕೊರೋನಾ ಲಗ್ಗೆ ಇಟ್ಟಿದೆ. ಇದರ ಜೊತೆಗೆ ಕ್ವಾರಂಟೈನ್ ಗೆ ಹೊಸ ರೂಲ್ಸ್ ಮಾಡಲಾಗಿದೆ. ಸಚಿನ್ ತೆಂಡುಲ್ಕರ್‌ಗಾಗಿ 2011ರ ವಿಶ್ವಕಪ್ ಫೈನಲ್ ಪಂದ್ಯ ತನಿಖೆ ಮಾಡಲು ಬಿಸಿಸಿಐಗೆ ಮನವಿ ಮಾಡಲಾಗಿದೆ. ವೀರ ಮದಕರಿ ಚಿತ್ರೀಕರಣ, ಸ್ಥಳೀಯರಿಗೆ ಉದ್ಯೋಗ ನೀಡಲು ಚೀನಾ ಕಂಪನಿ ಪ್ಲಾನ್ ಸೇರಿದಂತೆ ಜೂನ್ 22ರ ಟಾಪ್ 10 ಸುದ್ದಿ ಇಲ್ಲಿವೆ.


ಸಂಘರ್ಷ ನಡೆದ ಗಲ್ವಾನ್‌ ಜಾಗದಲ್ಲಿ ಭಾರತ ಹಿಡಿತ!

Tap to resize

Latest Videos

 ಜೂ.15ರಂದು ಭಾರತ ಮತ್ತು ಚೀನಾ ಸೈನಿಕರ ಮಧ್ಯೆ ಸಂಘರ್ಷ ಏರ್ಪಟ್ಟಗಲ್ವಾನ್‌ ಕಣಿವೆಯಲ್ಲಿ ಭಾರತೀಯ ಸೇನೆ ಇದೀಗ ಸಂಪೂರ್ಣ ಹಿಡಿತ ಸಾಧಿಸಿದೆ.

ಕೊರೊನಾ ಜೊತೆಯೇ ಬದುಕಬೇಕು, ಮತ್ತೆ ಲಾಕ್ಡೌನ್ ಪ್ರಶ್ನೆಯೇ ಇಲ್ಲ: ಡಿಸಿಎಂ

ಲಾಕ್‌ಡೌನ್ ಮಾಡಲ್ಲ. ಯಾರಿಗೂ ಭಯಬೇಡ. ಕೊರೊನಾ ವೈರಸ್ ನಮ್ಮ ಜೊತೆಯೇ ಇರುತ್ತದೆ ಎಂದು ಡಿಸಿಎಂ ಅಶ್ವತ್ ನಾರಾಯಣ್ ತೆರೆ ಎಳೆದಿದ್ದಾರೆ. 

ಸರ್ಕಾರದ ದಿಟ್ಟ ತೀರ್ಮಾನ, ಕ್ವಾರಂಟೈನ್ ಗೆ ಹೊಸ ರೂಲ್ಸ್? ಎಷ್ಟು ದಿನ?

ಕೊರೋನಾ ಅಟ್ಟಹಾಸ ಮೆರೆಯುತ್ತಿರುವ ಕಾರಣಕ್ಕೆ ಕ್ವಾರಂಟೈನ್ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಯಾವುದೇ ರಾಜ್ಯದಿಂದ ಕರ್ನಾಟಕ ಪ್ರವೇಶ ಮಾಡಿದರೆ 14  ದಿನಗಳ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ.

ದೇಶದಲ್ಲಿ ದಾಖಲೆಯ 18840 ಜನಕ್ಕೆ ಕೊರೋನಾ, 404 ಮಂದಿ ಸಾವು!

ದೇಶದಲ್ಲಿ ಭಾನುವಾರ ಒಂದೇ ದಿನ ಸಾರ್ವಕಾಲಿಕ ದಾಖಲೆಯ 18840 ಕೊರೋನಾಪೀಡಿತರು ಪತ್ತೆಯಾಗಿದ್ದಾರೆ. ಇದರೊಂದಿಗೆ ಕೊರೋನಾ ಸೋಂಕಿತರ ಸಂಖ್ಯೆ 4 ಲಕ್ಷದ ಗಡಿ ದಾಟಿ 412690ಕ್ಕೆ ಏರಿಕೆಯಾಗಿದೆ. ಕೇವಲ 8 ದಿನಗಳಲ್ಲಿ ಒಂದು ಲಕ್ಷ ಕೇಸ್‌ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. 

ತೆಂಡುಲ್ಕರ್‌ಗಾಗಿ 2011ರ ವಿಶ್ವಕಪ್ ಫೈನಲ್ ಪಂದ್ಯ BCCI ತನಿಖೆ ಮಾಡಬೇಕು; ಡಿಸಿಲ್ವಾ!

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಶ್ರೀಲಂಕಾದ ಮಾಜಿ ಕ್ರಿಕೆಟಿಗರು, ಮಾಜಿ ಕ್ರೀಡಾ ಸಚಿವರು ಸೇರಿದಂತೆ ಹಲವು ಮಾಜಿಗಳು ಕೆಲಸವಿಲ್ಲದೆ ಮನೆಯಲ್ಲಿದ್ದಾರೆ. ಈ ವೇಳೆ ತಾವು ಸುದ್ದಿಯಲ್ಲಿರುವ ಸ್ಫೋಟಕ ಹೇಳಿಕೆ ನೀಡಿ ಮಾಧ್ಯಮದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಲಂಕಾ ಮಾಜಿ ಕ್ರೀಡಾ ಮಂತ್ರಿ ಬೆನ್ನಲ್ಲೇ ಇದೀಗ ಮಾಜಿ ನಾಯಕ ಅರವಿಂದ್ ಡಿಸಿಲ್ವಾ ಮತ್ತೆ 2011ರ ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸ್ ಎಂದಿದ್ದಾರೆ.

ಬೆಂಗಳೂರಿಗೆ ಅಪಾಯ ಮುನ್ಸೂಚನೆ: 10 ಏರಿಯಾಗಳು ಸೀಲ್‌ಡೌನ್..!

ಮಹಾರಾಷ್ಟ್ರ, ದೆಹಲಿಯಂತೆ ಕರುನಾಡಿಗೂ ಗಂಡಾಂತರ ಎದುರಾಗಿದೆ. ಕೋವಿಡ್ ಆಸ್ಪತ್ರೆಗಳಲ್ಲಿ ಬೆಡ್‌ಗಳೇ ಸಿಗುತ್ತಿಲ್ಲ. ತುರ್ತು ಚಿಕಿತ್ಸೆ ನೀಡುವ ಐಸಿಯುಗಳು ಫುಲ್ ಆಗಿವೆ.  ಆರೋಗ್ಯ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. ಅಪಾಯದ ಮುನ್ಸೂಚನೆಯಿಂದ 10 ಏರಿಯಾಗಳನ್ನು ಸೀಲ್‌ಡೌನ್ ಮಾಡಲು ಸಿಎಂ ಕೂಡಾ ಒಪ್ಪಿಗೆ ನೀಡಿದ್ದಾರೆ. 

ರಾಜ ವೀರ ಮದಕರಿನಾಯಕ ಚಿತ್ರೀಕರಣ ಮೈದಾನಕ್ಕಿಳಿಯುವುದು ಎಂದು?

ಕೊರೋನಾ ಕಾರಣಕ್ಕೆ ಕನ್ನಡದ ಬಹು ಕೋಟಿ ವೆಚ್ಚದ ಐತಿಹಾಸಿಕ ಸಿನಿಮಾವೊಂದು ಯಾವಾಗ ಶೂಟಿಂಗ್‌ಗೆ ಹೋಗಲಿದೆ ಎನ್ನುವ ಗೊಂದಲ ಆರಂಭವಾಗಿದೆ. ಇಷ್ಟಕ್ಕೂ ಇದೇ ವರ್ಷ ಈ ಚಿತ್ರಕ್ಕೆ ಚಿತ್ರೀಕರಣ ಮೈದಾನಕ್ಕಿಳಿಯುವ ಭಾಗ್ಯ ದೊರೆಯುತ್ತದೋ, ಇಲ್ಲವೋ ಎನ್ನುವ ಗುಮಾನಿಯೂ ಹುಟ್ಟಿಕೊಂಡಿವೆ. 

ಅಪ್ಪನ ದಿನಕ್ಕೆ ಸಾಕ್ಷಿಯಾದ ಸ್ಯಾಂಡಲ್‌ವುಡ್‌; ತಂದೆಯ ಪೋಟೋ ಪೋಸ್ಟ್‌!

ಕೋವಿಡ್‌ ಆತಂಕದ ನಡುವೆಯೂ ಸೋಷಲ್‌ ಮೀಡಿಯಾದಲ್ಲಿ ಅಪ್ಪನ ಫೋಟೋ ಹಾಕಿ, ಅವರ ಪ್ರೀತಿ ಕೊಂಡಾಡುವ ಮೂಲಕ ಸ್ಯಾಂಡಲ್‌ವುಡ್‌ ‘ಫಾದರ್ಸ್‌ ಡೇ’ ಯನ್ನು ಸ್ಮರಣೀಯವಾಗಿಸಿತು.ಸ್ಯಾಂಡಲ್‌ವುಡ್‌ನ ಅನೇಕ ತಾರೆಯರು ‘ಫಾದರ್ಸ್‌ ಡೇ’ ಯ ಖುಷಿಯನ್ನು ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸ್ಥಳೀಯರಿಗೆ ಉದ್ಯೋಗ; ಭಾರತದಲ್ಲಿರುವ ಚೀನಾ ಕಂಪನಿಗಳ ಪ್ಲಾನ್!

ಲಡಾಖ್ ಗಡಿ ಬಿಕ್ಕಟ್ಟಿನ ಬೆನ್ನಲ್ಲೇ ಚೀನಾ ವಸ್ತುಗಳ ಬಹಿಷ್ಕಾರದ ಕೂಗ ತೀವ್ರಗೊಳ್ಳುತ್ತಿದೆ. ಸೆಲೆಬ್ರೆಟಿಗಳು ಈ ಅಭಿಯಾನದಲ್ಲಿ ಪಾಲ್ಗೊಂಡಿರುವ ಕಾರಣ ಭಾರತದಲ್ಲಿರುವ ಚೀನಾ ಕಂಪನಿಗಳ ತಲೆನೋವು ಹೆಚ್ಚಿಸಿದೆ. ಹೀಗಾಗಿ ಚೀನಾ ಕಂಪನಿಗಳು ಇದೀಗ ಮಾಸ್ಟರ್ ಪ್ಲಾನ್ ರೆಡಿ ಮಾಡಿದೆ. ಭಾರತದಲ್ಲಿರುವ ಕಂಪನಿಗಳು ಸಂಪೂರ್ಣ ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡಲು ಮುಂದಾಗಿದೆ.

ಕಾಂಗ್ರೆಸ್‌ ಕಿರುಕುಳದಿಂದ ನನಗೆ ಈಗ ಕಣ್ಣುಗಳೇ ಕಾಣ್ತಿಲ್ಲ: ಸಾಧ್ವಿ ಪ್ರಜ್ಞಾ

ಕಾಂಗ್ರೆಸ್‌ ಆಡಳಿತ ಅವಧಿಯಲ್ಲಿ ತೀವ್ರ ಕಿರುಕುಳ ನೀಡಿದ ಪರಿಣಾಮ ಆರೋಗ್ಯ ಹದಗೆಟ್ಟಿದೆ, ದೃಷ್ಟಿಯೂ ಸರಿಯಾಗಿ ಕಾಣುತ್ತಿಲ್ಲ ಎಂದು ಭೋಪಾಲ್‌ ಬಿಜೆಪಿ ಲೋಕಸಭಾ ಸದಸ್ಯೆ ಪ್ರಜ್ಞಾ ಸಿಂಗ್‌ ಠಾಕೂರ್‌ ಭಾನುವಾರ ಆರೋಪಿಸಿದ್ದಾರೆ.
 

click me!