
ಬೆಂಗಳೂರು, (ಜೂ.22): ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‍ಗೆ ನಾಮಪತ್ರ ಸಲ್ಲಿಸಿದ್ದ 7 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇದೇ ಜೂನ್ 29ರಂದು ರಾಜ್ಯದ 7 ವಿಧಾನಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯಬೇಕಿತ್ತು. ಆದ್ರೆ, ಕಣದಲ್ಲಿ ಯಾರೂ ಪ್ರತಿಸ್ಪರ್ಧಿ ಇಲ್ಲದ ಕಾರಣ ಬಿಜೆಪಿಯ 4, ಕಾಂಗ್ರೆಸ್‌ನ 2 ಮತ್ತು ಜೆಡಿಎಸ್ ಓರ್ವ ಅಭ್ಯರ್ಥಿ ಅವಿರೋಧವಾಗಿ ಮೇಲ್ಮನೆ ಪ್ರವೇಶ ಮಾಡಿದರು.
ಮೇಲ್ಮನೆಗೆ 7 ಮಂದಿ ಅವಿರೋಧ ಆಯ್ಕೆ ನಿಶ್ಚಿತ..?
ಇಬ್ಬರು ಪಕ್ಷೇತರವಾಗಿ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಆದ್ರೆ, ಅವರಿಗೆ ಸೂಚಕರಿಲ್ಲದ ಕಾರಣ ಅವರ ಉಮೇದುವಾರಿಕೆ ತಿರಸ್ಕೃತಗೊಂಡಿದ್ದು, ಇನ್ನುಳಿದ 7 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಇಂದು (ಸೋಮವಾರ) ಚುನಾವಣಾಧಿಕಾರಿ ಎಂ.ಕೆ. ವಿಶಾಲಾಕ್ಷಿ ಅವರು ಅಧಿಕೃತ ಘೋಷಣೆ ಮಾಡಿದರು.
ಅವಿರೋಧವಾಗಿ ಆಯ್ಕೆಯಾದವರು
* ಬಿಜೆಪಿ- ಆರ್. ಶಂಕರ್, ಎಂಟಿಬಿ ನಾಗರಾಜ್, ಸುನಿಲ್ ವಲ್ಯಾಪುರೆ ಮತ್ತು ಪ್ರತಾಪ್ ಸಿಂಹ ನಾಯಕ್
* ಕಾಂಗ್ರೆಸ್- ಬಿ.ಕೆ.ಹರಿಪ್ರಸಾದ್ ಮತ್ತು ನಸೀರ್ ಅಹಮ್ಮದ್
* ಜೆಡಿಎಸ್- ಗೋವಿಂದರಾಜು
ವಿಧಾನಸಭೆಯಿಂದ ವಿಧಾನಪರಿಷತ್‍ಗೆ ಚುನಾಯಿತ ರಾಗಿದ್ದ ಜಯಮ್ಮ, ಎನ್.ಎಸ್.ಬೋಸ್‍ರಾಜು, ಹೆಚ್.ಎಂ.ರೇವಣ್ಣ, ನಸೀರ್ ಅಹ್ಮದ್, ಎಂ.ಸಿ. ವೇಣುಗೋಪಾಲ್, ಡಿ.ಯು.ಮಲ್ಲಿಕಾರ್ಜುನ ಹಾಗೂ ಟಿ.ಎ.ಶರವಣ ಅವರು ಜೂ.30ರಂದು ನಿವೃತ್ತಿಯಾಗುವುದರಿಂದ ತೆರವಾದ ಸ್ಥಾನಕ್ಕೆ 29 ಚುನಾವಣೆ ಘೋಷಣೆಯಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.