ಮಾತು ತಪ್ಪಿದ ರಾಹುಲ್, ಮೋದಿ ಹೆಸರೇಳಿ ಸಾರಿ ಕೇಳಿದ ‘ಕೈ’ ಅಧ್ಯಕ್ಷ

Published : Mar 13, 2019, 04:57 PM ISTUpdated : Mar 13, 2019, 05:01 PM IST
ಮಾತು ತಪ್ಪಿದ ರಾಹುಲ್, ಮೋದಿ ಹೆಸರೇಳಿ ಸಾರಿ ಕೇಳಿದ ‘ಕೈ’ ಅಧ್ಯಕ್ಷ

ಸಾರಾಂಶ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೆ ಸೋಶಿಯಲ್ ಮೀಡಿಯಾದವರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಭಾಷಣ ಮಾಡುವ ಭರದಲ್ಲಿ ಮಾಡಿದ ಎಡವಟ್ಟು ಟ್ರೋಲ್ ಆಗಲು ಆರಂಭಿಸಿದೆ.  

ಚೆನ್ನೈ[ಮಾ.13] ದೇಶಕ್ಕೆ ಕೋಟ್ಯಂತರ ರೂ. ವಂಚನೆ ಮಾಡಿ ವಿದೇಶಕ್ಕೆ ಹಾರಿರುವ ವಂಚಕ ನೀರವ್ ಮೋದಿ ಮೇಲೆ ವಾಗ್ದಾಳಿ ಮಾಡಲು ಮುಂದಾಗಿದ್ದ ವೇಳೆ ರಾಹುಲ್ ಗಾಂಧಿ ಎಡವಟ್ಟು ಮಾಡಿಕೊಂಡಿದ್ದಾರೆ.

ನಾವು ಅಂದರೆ ನಾಗರಿಕರು ದೇಶಕ್ಕಾಗಿ ತೆರಿಗೆ ಕಟ್ಟುತ್ತೇವೆ. ಆದರೆ ನರೇಂದ್ರ ಮೋದಿ ಅಂತಹ ಕೆಲ ವಂಚಕ ಉದ್ಯಮಿಗಳು ಅದನ್ನು ಲಪಟಾಯಿಸುತ್ತಾರೆ ಎಂದು ಬಾಯಿ ತಪ್ಪಿ ಹೇಳಿದ್ದಾರೆ. ತಕ್ಷಣಕ್ಕೆ ಸಾರಿ ಕೇಳಿ ತಮ್ಮ ಭಾಷಣ ಮುಂದುವರಿಸಿದ್ದಾರೆ.

#GoBackRahul: ರಾಹುಲ್ ವಿರುದ್ಧ ತಮಿಳರ ಆಕ್ರೋಶ

ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ವೇಳೆ ನರೇಂದ್ರ ಮೋದಿ ಎನ್ನುವ ಬದಲು ನೀರವ್ ಮೋದಿ ಎಂದು ಬಾಯಿ ತಪ್ಪಿ ಹೇಳಿದ್ದಾರೆ.  ಮಾತನಾಡುವ ಬರದಲ್ಲಿ, ನೀರವ್ ಮೋದಿ ಭಾರತದಲ್ಲಿ ಎಷ್ಟು ಉದ್ಯೋಗವಕಾಶ ಸೃಷ್ಟಿ ಮಾಡಿದ್ದಾರೆ?  ಎಂದು ಹೇಳಿದ್ದು ಟ್ರೋಲ್ ಆಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?
ಹೊಸ ವರ್ಷದ ಆರಂಭದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ರೆಡ್ಮಿ ಮಾಸ್ಟರ್‌ ಪಿಕ್ಸೆಲ್‌ ಫೋನ್‌, ಬೆಲೆ ಎಷ್ಟು ಕಡಿಮೆ ಗೊತ್ತಾ?