
ವಾಷಿಂಗ್ಟನ್ [ಮಾ. 13] ಉಗ್ರರ ಮೇಲೆ ದಾಳಿ ಮಾಡಿದ್ದಕ್ಕೆ ಸಾಕ್ಷಿ ಕೇಳುತ್ತಿದ್ದವರಿಗೆ ಪುರಾವೆ ಸಿಕ್ಕಿದೆ. ಅಮೆರಿಕ ಮೂಲದ ಕಾರ್ಯಕರ್ತನೊಬ್ಬ ನೀಡಿರುವ ಸಾಕ್ಷಿ ಹಲವರ ಬಾಯಿ ಮುಚ್ಚಿಸುತ್ತದೆಯೋ ಕಾದು ನೋಡಬೇಕು.
ಪಾಕಿಸ್ತಾನದ ಗಿಲ್ಗಿಟ್ನಲ್ಲಿರುವ ಅಮೆರಿಕ ಮೂಲದ ಕಾರ್ಯಕರ್ತ ಸೆಂಗ್ ಸಿರೀಂಗ್ ಸೆರಿಂಗ್ ಎಂಬಾತ ವೈಮಾನಿಕ ದಾಳಿ ಬಗ್ಗೆ ಮಾತನಾಡಿದ್ದು, ದಾಳಿಯ ಬಳಿಕ 200ಕ್ಕೂ ಹೆಚ್ಚು ಉಗ್ರರ ಮೃತದೇಹಗಳನ್ನು ಬಾಲಾಕೋಟ್ನಿಂದ ಖೈಬರ್ ಪಥುಂಕ್ವಾಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದ್ದಾರೆ.
ಪುಲ್ವಾಮಾ ದಾಳಿ ಮತ್ತು ಸರ್ಜಿಕಲ್ ದಾಳಿ, ಸಂಪೂರ್ಣ ವಿವರ
ಉಗ್ರರ ಮೃತದೇಹಗಳನ್ನು ಸ್ಥಳಾಂತರಿಸಿರುವ ಬಗ್ಗೆ ಉರ್ದು ಮಾಧ್ಯಮಗಳಲ್ಲಿ ವರದಿ ಮಾಡಿವೆ. ಪಾಕ್ ಸೇನಾ ಅಧಿಕಾರಿಯು ದಾಳಿಯಲ್ಲಿ 200ಕ್ಕಿಂತ ಹೆಚ್ಚು ಉಗ್ರರು ಹತರಾಗಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ. ಇದಕ್ಕೆ ಆಧಾರ ಎಂಬಂತೆ ಪಾಕ್ ಸೈನಿಕರು ಉಗ್ರರ ಮಕ್ಕಳನ್ನು ಸಮಾಧಾನ ಪಡಿಸುತ್ತಿರುವ ದೃಶ್ಯಾವಳಿಯನ್ನು ಬಹಿರಂಗ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.