ಕಾಂಗ್ರೆಸ್‌ನಲ್ಲಿ ಅಧ್ಯಕ್ಷಗಿರಿ ತಿಕ್ಕಾಟ, ನಾಯಕನ ಮಾತಿನಿಂದ ಬಿಜೆಪಿಗೆ ಸಂಕಟ; ಡಿ.17ರ ಟಾಪ್ 10 ಸುದ್ದಿ!

By Suvarna News  |  First Published Dec 17, 2020, 4:58 PM IST

ರೈತರಿಗೆ ಪ್ರತಿಭಟಿಸುವ ಹಕ್ಕಿದೆ. ಆದರೆ ರಸ್ತೆ ತಡೆ ನಡೆಸುವ ಅಧಿಕಾರವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಕ ಕೈಲಾಶ್ ವಿಜಯವರ್ಗೀಯ ಹೇಳಿಕೆ ಇದೀಗ ಪಕ್ಷವನ್ನೇ ಇಕ್ಕಟ್ಟಿಗೆ ಸಿಲುಕಿಸಿದೆ. ಏಪ್ರಿಲ್‌ನಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆಯಲಿದೆ. ಏರ್ ಇಂಡಿಯಾದಿಂದ ಟಿಕೆಟ್ ಬುಕಿಂಗ್‌ನಲ್ಲಿ ಶೇ.50 ರಷ್ಟು ವಿನಾಯಿತಿ ಆಫರ್ ಘೋಷಿಸಿದೆ. ನ್ಯಾಶನಲ್ ಕ್ರಶ್ ಯಾರು, ಡಿವೈಎಸ್‌ಪಿ ಲಕ್ಷ್ಮೀ ಆತ್ಮಹತ್ಯೆ ಸುತ್ತ ಅನುಮಾನ ಸೇರಿದಂತೆ ಡಿಸೆಂಬರ್ 17ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.
 


ರೈತರಿಗೆ ಪ್ರತಿಭಟಿಸುವ ಹಕ್ಕು ಇದೆ, ಇದನ್ನು ಕಸಿದುಕೊಳ್ಳಲ್ಲ: ಸುಪ್ರೀಂ ಮಹತ್ವದ ತೀರ್ಪು!...

Latest Videos

undefined

ರೈತರ ಪ್ರತಿಭಟನೆ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ರೈತರ ಪ್ರತಿಭಟನೆಯನ್ನು ನಿಲ್ಲಿಸಲು ಹೇಳುವುದಿಲ್ಲ, ರೈತರ ಪ್ರತಿಭಟನೆಯ ಹಕ್ಕು ಕಸಿದುಕೊಳ್ಳುವುದೂ ಸರಿಯಲ್ಲ ಎಂದಿದೆ. 

ಕಮಲನಾಥ್ ಸರ್ಕಾರ ಬೀಳಿಸುವಲ್ಲಿ ಮೋದಿ ಪ್ರಮುಖ ಪಾತ್ರ: ಬಿಜೆಪಿ ನಾಯಕನ ವಿವಾದಾತ್ಮಕ ಹೇಳಿಕೆ...

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಕ ಕೈಲಾಶ್ ವಿಜಯವರ್ಗೀಯ ಹೇಳಿಕೆಯಿಂದ ಮಧ್ಯಪ್ರದೇಶದ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿದೆ.  

ಏರ್ ಇಂಡಿಯಾದಿಂದ ಭರ್ಜರಿ ಆಫರ್; ಟಿಕೆಟ್ ದರದಲ್ಲಿ ಶೇ.50ರಷ್ಟು ವಿನಾಯಿತಿ, 1 ಕಂಡೀಷನ್!...

ಏರ್ ಇಂಡಿಯಾ ವಿಶೇಷ ಆಫರ್ ಘೋಷಿಸಿದೆ. ದೇಶಿ ವಿಮಾನ ಹಾರಾಟಕ್ಕೆ ನೂತನ ಆಫರ್ ಅನ್ವಯವಾಗಲಿದೆ. ಈ ಆಫರ್ ಮೂಲಕ ಟಿಕೆಟ್ ಬುಕ್ ಮಾಡಿಕೊಳ್ಳುವವರಿಗೆ ಶೇಕಡಾ 50 ರಷ್ಟು ವಿನಾಯಿತಿ ಸಿಗಲಿದೆ. ಆದರೆ ಈ ಆಫರ್ ಪಡೆದುಕೊಳ್ಳಲು ಒಂದು ಕಂಡೀಷನ್ ವಿಧಿಸಿದೆ.

ಶಾಂತಗೊಂಡ ಫ್ರಾನ್ಸ್‌ನಲ್ಲಿ ಮತ್ತೆ ಆತಂಕ; ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರೋನ್‌ಗೆ ಕೊರೋನಾ!...

ಭಯೋತ್ಪಾದಕ ದಾಳಿ ಹಾಗೂ ಫ್ರಾನ್ಸ್ ಅಧ್ಯಕ್ಷರ ಹೇಳಿಕೆಯಿಂದ ಫ್ರಾನ್ಸ್‌ನಲ್ಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಸದ್ಯ ಪರಿಸ್ಥಿತಿ ತಿಳಿಗೊಂಡಿದೆ. ಇದರ ಬೆನ್ನಲ್ಲೇ ಇದೀಗ ಕೊರೋನಾ ಅಲೆ ಹೆಚ್ಚಾಗಿದೆ. ಇದೀಗ ಫ್ರಾನ್ಸ್ ಅಧ್ಯಕ್ಷರಿಗೆ ಕೊರೋನಾ ದೃಢಪಟ್ಟಿದೆ.

ದಿಶಾನೂ ಇಲ್ಲ, ರಶ್ಮಿಕಾನೂ ಇಲ್ಲ: ಐಶ್ ನಮ್ಮ ಪ್ರತಿದಿನದ ಕ್ರಶ್ ಎಂದ ನೆಟ್ಟಿಗರು...

ಸೌತ್ ಬೆಡಗಿ ರಶ್ಮಿಕಾ ಮಂದಣ್ಣ ಈ ಬಾರಿಯ ನ್ಯಾಷನಲ್ ಕ್ರಷ್. ಕಳೆದಬಾರಿ ದಿಶಾ ಪಠಾಣಿ ಇದ್ರು. ಆದ್ರೆ ಐಶ್ವರ್ಯಾ ಮುಂದೆ ಯಾರೂ ಎನೂ ಅಲ್ಲ ಅಂತಾರೆ ನೆಟ್ಟಿಗರು

ಇನ್ಸ್‌ಟಾಗ್ರಾಮ್‌ನಲ್ಲಿ ಮೂವೀ ನೋಡಲು ‘ವಾಚ್‌ ಟುಗೆದರ್’ ಫೀಚರ್!...

ಭಾರತದಲ್ಲಿ ಅಪಾರ ಸಂಖ್ಯೆಯ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್ ಒಡೆತನದ ಇನ್ಸ್‌ಟಾಗ್ರಾಮ್ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಿದೆ. ವಾಚ್ ಟುಗೆದರ್, ಸೆಲ್ಪಿ ಸ್ಟಿಕರ್ಸ್, ಚಾಟ್ ಥೀಮ್ಸ್‌ನಂಥ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ.

ಏಪ್ರಿಲ್‌ನಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಗೆ ಚುನಾವಣೆ: ರಾಹುಲ್‌ ಒಪ್ಪದಿದ್ದರೆ ಪ್ರಿಯಾಂಕಾ ಸ್ಪರ್ಧೆ?...

ಚುನಾವಣೆಗಳಲ್ಲಿ ಮೇಲಿಂದ ಮೇಲೆ ಸೋಲುಣ್ಣುತ್ತಿರುವ ಹಾಗೂ ಆಂತರಿಕ ಬಂಡಾಯದಿಂದ ನಲುಗುತ್ತಿರುವ ಕಾಂಗ್ರೆಸ್‌ ಪಕ್ಷಕ್ಕೆ ಹೊಸ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಲು ಏಪ್ರಿಲ್‌ ತಿಂಗಳಲ್ಲಿ ಆಂತರಿಕ ಚುನಾವಣೆ ನಡೆಯುವ ಸಾಧ್ಯತೆಗಳಿವೆ.

ನಿಮ್ಮ ಫೋನ್‌ನಲ್ಲಿ ಬ್ಯಾಂಕ್ ಪಾಸ್‌ವರ್ಡ್, ಕಾರ್ಡ್ ಮಾಹಿತಿ ಸುರಕ್ಷಿತವಾಗಿಡಲು ಸೈಬಲ್ ಲಾಕ್ ಉಪಯುಕ್ತ!...

ಬಳಕೆದಾರರು ಬ್ಯಾಂಕ್ ಖಾತೆ ಸಂಖ್ಯೆಗಳು, ಹೂಡಿಕೆ ಮಾಹಿತಿಗಳು, ವೈಯಕ್ತಿಕ ಫೋಟೋಗಳು, ಕ್ರೆಡಿಟ್/ಡೆಬಿಟ್ ಕಾರ್ಡ್ ವಿವರಗಳು, ಪಾಸ್ ವರ್ಡ್ ಗಳು ಮತ್ತು ವೈಯಕ್ತಿಕ ಗುರುತಿನ ಮಾಹಿತಿಗಳಂತಹ ಅನೇಕ ಅತ್ಯಂತ ಸೂಕ್ಷ್ಮ ವಿವರಗಳನ್ನು ತಮ್ಮ ಫೋನ್ ಗಳಲ್ಲಿ ಸೇವ್ ಮಾಡಿಕೊಂಡಿರುತ್ತಾರೆ. ಫೋನ್ ಕಳೆದು ಹೋದಾಗ, ಅಥವಾ ಡೇಟಾ ಸೋರಿಯಿಂದ ಈ ಮಾಹಿತಿಗಳು ಸುರಕ್ಷಿತವಲ್ಲ. 

ಪ್ರೀತಿಯ ಸಾಕು ನಾಯಿಯ ಪ್ರೆಗ್ನೆನ್ಸಿ ಫೋಟೋ ಶೂಟ್!...

ಅನಾಥವಾಗಿ ಬೀದಿಯಲ್ಲಿ ಅಲೆಯುತ್ತಿದ್ದ ನಾಯಿಯನ್ನು ಮನೆಗೆ ತಂದು ಮುದ್ದಾಗಿ ಸಾಕಿದ ಮಹಿಳೆಯೊಬ್ಬರು, ಅದರ ಪ್ರೆಗ್ನೆನ್ಸಿ ಫೋಟೋ ಶೂಟ್ ಕೂಡಾ ಮಾಡಿಸಿದ್ದಾರೆ. ಈ ಫೋಟೋ ಶೂಟ್ ಆದ 3 ದಿನಗಳ ಬಳಿಕ ಆ ಶ್ವಾನ 8 ಮರಿಗಳಿಗೆ ಜನನ ನೀಡಿದೆ. ಸದ್ಯ ಈ ಫೋಟೋಗಳು ವರಲ್ ಆಗುತ್ತಿದ್ದು, ಇವು ಪ್ರಾಣಿ ಹಾಗೂ ಅವಕ್ಕೆ ತೋರುವ ಪ್ರೀತಿ ಬಗ್ಗೆ ಜಾಗೃತಿ ಮೂಡಿಸುತ್ತಿವೆ.

ಡಿವೈಎಸ್‌ಪಿ ಲಕ್ಷ್ಮೀ ಆತ್ಮಹತ್ಯೆ ಸುತ್ತ ಅನುಮಾನ; ಕಾರಣವಾಯ್ತಾ ರಾಜಕಾರಣಿಗಳ ಅವಮಾನ?...

ಡಿವೈಎಸ್‌ಪಿ ಲಕ್ಷ್ಮೀ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಅಪ್‌ಡೇಟ್ಸ್ ಸಿಗುತ್ತಿದೆ. 15 ದಿನಗಳ ಹಿಂದೆ ಕೆಂಗೇರಿ ಎಸಿಪಿ ಪೋಸ್ಟ್‌ಗೆ ಪ್ರಯತ್ನಿಸಿದ್ದರು.ಈ ಸಂಬಂಧ ಹಲವು ರಾಜಕಾರಣಿಗಳನ್ನು ಭೇಟಿ ಮಾಡಿದ್ದರು. ಆದರೆ ಬೆಂಗಳೂರಿನಲ್ಲಿ ಯಾವುದೇ ಜಾಗವೂ ಸಿಕ್ಕಿರಲಿಲ್ಲ. 

click me!