ಕಾಂಗ್ರೆಸಿಗೆ ಫುಲ್ ಶಾಕ್: ಖರ್ಗೆ ಆಪ್ತ, ಮಾಜಿ ಸಚಿವ ನಾಳೆ ಬಿಜೆಪಿಗೆ ಸೇರ್ಪಡೆ

Published : Aug 28, 2018, 09:32 PM ISTUpdated : Sep 09, 2018, 08:38 PM IST
ಕಾಂಗ್ರೆಸಿಗೆ ಫುಲ್ ಶಾಕ್: ಖರ್ಗೆ ಆಪ್ತ, ಮಾಜಿ ಸಚಿವ ನಾಳೆ ಬಿಜೆಪಿಗೆ ಸೇರ್ಪಡೆ

ಸಾರಾಂಶ

ಬಿಜೆಪಿಯವರು ರಾಮಾನಾಥ ಕೋವಿಂದ ಅವರನ್ನು ರಾಷ್ಟ್ರಪತಿ, ಸಾತ್ವಿ ನಿರಂಜನ್ ಅವರನ್ನು ಕೇಂದ್ರದ ಸಚಿವೆಯನ್ನಾಗಿ ಮಾಡಿದ್ದಾರೆ. ಇದಕ್ಕಾಗಿ  ಕರ್ನಾಟಕದ ಕೋಲಿ ಸಮಾಜದ ವತಿಯಿಂದ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ. 

ಯಾದಗಿರಿ[ಆ.28]: ಕಾಂಗ್ರೆಸಿನ ಹಿರಿಯ ನಾಯಕ  ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಪರಮಾಪ್ತ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್  ಅವರು ನಾಳೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ.

ಸುವರ್ಣ ನ್ಯೂಸ್ .ಕಾಂ ಸೋದರ ಸಂಸ್ಥೆ ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದ ಅವರು,ಸ್ವಾತಂತ್ರ್ಯ ಸಿಕ್ಕಿ 72 ವರ್ಷ ಆದರೂ ನಮ್ಮ ಸಮಾಜಗಳಾದ ಕೋಲಿ, ಕಬ್ಬಲಿಗ, ಅಂಬಿಗ ಸಮಾಜದವರನ್ನು ಕಾಂಗ್ರೆಸ್ ಗುರುತಿಸಿಲ್ಲ. ಭಾರತೀಯ ಜನತಾ ಪಕ್ಷ ಗುರುತಿಸಿದ್ದು ಇದಕ್ಕಾಗಿ ಬಿಜೆಪಿ ಸರ್ಕಾರಕ್ಕೆ ಅಭಿನಂನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಬಿಜೆಪಿಯವರು ರಾಮಾನಾಥ ಕೋವಿಂದ ಅವರನ್ನು ರಾಷ್ಟ್ರಪತಿ, ಸಾತ್ವಿ ನಿರಂಜನ್ ಅವರನ್ನು ಕೇಂದ್ರ ಸಚಿವೆಯನ್ನಾಗಿ ಮಾಡಿದ್ದಾರೆ. ಇದಕ್ಕಾಗಿ  ಕರ್ನಾಟಕದ ಕೋಲಿ ಸಮಾಜದ ವತಿಯಿಂದ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾನು ಯಾವುದೇ ಆಸೆ ಇಟ್ಟಿಕೊಂಡು ಬಿಜೆಪಿ ಸೇರುತ್ತಿಲ್ಲ. ನನಗೆ ಎರಡೇ ಆಸೆ ಇರುವುದು. ಒಂದು ಗುರುಮಿಠಕಲ್ ಜನರ ಸೇವೆ ಮಾಡುವುದು ಹಾಗೂ ನಮ್ಮ ಸಮುದಾಯವನ್ನು  ಪ.ಪಂಗಡಕ್ಕೆ ಸೇರಿಸುವುದು ಎಂದು ತಮ್ಮ ಇಂಗಿತವನ್ನು ವ್ಯಕ್ತಪಡಿಸಿದರು.

ನಾನು ಎರಡು ಸಲ ಕಾಂಗ್ರೆಸ್ ಮಂತ್ರಿಯಾಗಿದ್ದೆ.  ಎಐಸಿಸಿ ಸದಸ್ಯನಾಗಿದ್ದೆ. ಕೆಪಿಸಿಸಿ ಕಾರ್ಯದರ್ಶಿ ಯಾಗಿ ಕೆಲಸ ಮಾಡಿದ್ದೇನೆ. ನನ್ನ ವರ್ಚಸ್ಸು ನೋಡಿ ನನಗಾಗದವರು ಕಳೆದ ಚುನಾವಣೆಯಲ್ಲಿ ನನ್ನನ್ನು ಸೋಲಿಸಿದ್ದಾರೆ.ಇದಕ್ಕೆ ನೇರವಾಗಿ ಕಾಂಗ್ರೆಸಿನವರೆ ಕಾರಣ. ಇವೆಲ್ಲ ಕಾರಣದಿಂದ ಬಿಜೆಪಿಗೆ ಸೇರುತ್ತಿದ್ದೇನೆ ಎಂದು ತಿಳಿಸಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಮಳವಳ್ಳಿಗೆ ಆಗಮನ ನಿರೀಕ್ಷೆ
ಧಾರವಾಡ: ಉದ್ಯೋಗಾಕಾಂಕ್ಷಿಗಳಿಗೆ ಸಿಎಂ ಭೇಟಿ ಮಾಡಿಸಲು ಹೈಕೋರ್ಟ್ ಸೂಚನೆ