ಕಸ್ತೂರಿ ರಂಗನ್ ವರದಿ: ಬೇಕಾ-ಬೇಡ್ವಾ?

By Web Desk  |  First Published Aug 28, 2018, 6:31 PM IST

ನಿಜಕ್ಕೂ ಕಸ್ತೂರಿ ರಂಗನ್ ವರದಿ ಎಂದರೆ ಏನು? ಮಲೆಮನಾಡಿನ ಜನರ ಜೀವನದ ಮೇಲೆ ವರದಿ ಮಾಡುವ ಜನರ ಪರಿಣಾಮವೇನು? ಇಂದಿನ ಅನಾಹುತಗಳಿಗೂ ಈ ವರದಿ ಅನುಷ್ಠಾನಕ್ಕೂ ಏನಾದರೂ ಸಂಬಂಧ ಇದೇಯಾ?  ಈ ಎಲ್ಲ ಪ್ರಶ್ನೆಗಳಿಗೆ ಒಂದು ಸಮೀಕ್ಷಾ ಉತ್ತರ ಇಲ್ಲಿದೆ...


ಬೆಂಗಳೂರು[ಆ.28]  ಪಶ್ಚಿಮಘಟ್ಟಗಳ ಸೂಕ್ಷ್ಮ ಪರಿಸರ ಮತ್ತು ಜೀವವೈವಿಧ್ಯ ರಕ್ಷಣೆಗಾಗಿ ವಿಜ್ಞಾನಿ ಡಾ.ಕೆ. ಕಸ್ತೂರಿರಂಗನ್‌ ನೀಡಿರುವ ವರದಿ ಅನುಷ್ಠಾನಕ್ಕೆ ಕೇಂದ್ರ ಪರಿಸರ ಸಚಿವಾಲಯ ಹೊರಡಿಸಿದ್ದ ಕರಡು ಅಧಿಸೂಚನೆ, ಕರ್ನಾಟಕದ ಭಾರಿ ವಿರೋಧದಿಂದಾಗಿ ಮತ್ತೊಮ್ಮೆ ರದ್ದಾಗಿದೆ. ಇದರಿಂದಾಗಿ ಮೂರನೇ ಬಾರಿಗೆ ಹೊರಡಿಸಿದ್ದ ಕರಡು ಅಧಿಸೂಚನೆಯೂ ನನೆಗುದಿಗೆ ಬಿದ್ದಂತಾಗಿದೆ ಇದು ನಿನ್ನೆ ಮೊನ್ನೆಯ ಸುದ್ದಿ... ಆದರೆ  ಇದನ್ನು ಪರಾಮರ್ಶೆ ಮಾಡಲೇಬೇಕು ಇದು ಇಂದಿನ ಅಗತ್ಯ ಸಹ..

ಕೊಡಗು ಮತ್ತು ಕೇರಳದಲ್ಲಿ ಆಗಿರುವ ಪ್ರವಾಹ, ಮಲೆನಾಡಿನಲ್ಲಿ ಕಂಡ ಕಂಡ ಕುಸಿಯುತ್ತಿರುವ ಭೂಮಿ  ಈ ಎಲ್ಲ ಅಂಶಗಳನ್ನು ಆಧರಿಸಿ ಕಸ್ತೂರಿ ರಂಗನ್ ವರದಿ ಅನುಷ್ಠಾನ ಆಗಬೇಕು ಎಂಬ ಮಾತುಗಳು ಕೇಳಿ ಬಂದಿವೆ

Latest Videos

undefined

ಕಸ್ತೂರಿ ರಂಗನ್ ವರದಿ ಎಂದರೇನು? 
ಪಶ್ಚಿಮ ಘಟ್ಟದ ಜೀವಪರಿಸರ ವೈವಿಧ್ಯ ಕಾಪಾಡುವ ಕಾರಣಕ್ಕೆ ವಿಜ್ಞಾನಿ ಕಸ್ತೂರಿ ರಂಗನ್ ನೇತೃತ್ವದಲ್ಲಿ ನೇಮಕವಾದ ಸಮಿತಿಯ ವರದಿ ಸಲ್ಲಿಸಿತ್ತು. ಇದಕ್ಕೂ ಮುನ್ನ ನೇಮಕವಾಗಿದ್ದ ಮಾಧವ್ ಗಾಡ್ಗೀಳ್ ವರದಿಯ ಲೋಪ ದೋಷಗಳನ್ನು ಸರಿಪಡಿಸಲು ಈ ಸಮಿತಿ ನೇಮಿಸಲಾಗಿತ್ತು. , 2013 ರ ಏಪ್ರಿಲ್ 15 ರಂದು ಸಲ್ಲಿಸಿತು. 

ರಾಜ್ಯದ 10 ಸಾವಿರ ಹಳ್ಳಿಗೆ ಸಂಕಷ್ಟ ತಂದ ವರದಿ

ವರದಿ ಏನು ಹೇಳುತ್ತದೆ?
ಹೊಸ ಅಭಿವೃದ್ಧಿ ಕಾರ್ಯಗಳನ್ನು ಪಶ್ಚಿಮ ಘಟ್ಟದಲ್ಲಿ ಮಾಡಬಾರದು ಎಂಬುದು ವರದಿಯ ಹೇಲೀರುವ ಪ್ರಮುಖ ನಿರ್ಭಂಧ. ಕಸ್ತೂರಿ ರಂಗನ್‍ಸಮಿತಿ ಗುರುತಿಸಿರುವ ಪಶ್ಚಿಮ ಘಟ್ಟ ವ್ಯಾಪ್ತಿಯ 59,949 ಸಾವಿರ ಚ,ಕಿ.ವ್ಯಾಪ್ತಿಯ ಪ್ರದೇಶವನ್ನು ಬಹುತೇಕ ಮಾನವ ಸಂಪರ್ಕದಿಂದ ಮುಕ್ತ ಮಾಡಬೇಕು ಎನ್ನುವುದು ಪ್ರಮುಖ ಅಂಶ. ಈ ಪ್ರದೇಶದಲ್ಲಿ ಗಣಿಗಾರಿಕೆ, ಕ್ವಾರಿ, ಮರಳುಗಾರಿಕೆ ಪರಿಸರ ವಿರೋಧಿ ಕೈಗಾರಿಕೆ, ಜಲವಿದ್ಯುತ್, ಪವನ ವಿದ್ಯುತ್ ಯೋಜನೆಗಳನ್ನು ಸಂಪೂರ್ಣ ನಿಷೇಧಿಸಲಾಗುತ್ತದೆ.   ವರದಿ ಜಾರಿಯಾದರೆ ಈಗಿರುವ  ಎಲ್ಲಾರೀತಿಯ ಗಣಿಗಾರಿಕೆ ಮುಂದಿನ 5 ವರ್ಷ ಮುಗಿತ್ತಿದ್ದಂತೆ ಸ್ಥಗಿತಗೊಳಿಸಬೇಕು. 20,000 ಚ,ಮೀ, ದೊಡ್ಡದಾದ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ. ಇಎಸ್ ಎನಿಂದ 10ಕಿ.ಮೀ. ವ್ಯಾಪ್ತಿಯಲ್ಲ ಯಾವುದೇ ಕಾಮಗಾರಿ ಪರಿಸರ ಇಲಾಖೆ, ಸ್ಥಲೀಯ ಗ್ರಾಮಸಭೆ ಅನುಮತಿ ಪಡೆಯಬೇಕು. ಈಪ್ರದೇಶದಲ್ಲಿ ಸಿಮೆಂಟು, ಕಲ್ಲು, ರಸಾಯನಿಕ ಬಳಸಲು, ಜನವಸತಿ ನಿರ್ಮಿಸಲು ಅವಕಾಶವಿಲ್ಲ ಎಂಬ ಅಂಶಗಳನ್ನು ವರದಿ ಹೇಳುತ್ತದೆ.

ಯಾವ ಯಾವ ಪ್ರದೇಶ ಒಳಪಡುತ್ತೆ?
ಭಾರತದ ಕೇಂದ್ರ ಸರ್ಕಾರದ ಪರಿಸರ, ಅರಣ್ಯ, ಹವಾಮಾನ ಬದಲಾವಣೆ ಸಚಿವಾಲ ಯವು ಫೆ.27 ರಂದು ಈ ಅಧಿಸೂಚನೆ ಪ್ರಕಟಿಸಿದೆ. ಕರ್ನಾಟಕ ರಾಜ್ಯದ 1553ಕ್ಕೂ ಹೆಚ್ಚು ಹಳ್ಳಿಗಳ 20,668 ಚದರ ಕಿ.ಮೀ. ಪ್ರದೇಶ ಪರಿಸರ ಸೂಕ್ಷ್ಮ ಪ್ರದೇಶ(ಇಎಸ್ಎ-Ecologically Sensitive Area (ESA) zones)ದಲ್ಲಿ ಸೇರಿದೆ. ಮೊದಲ ಎರಡು ಕರಡು ಅಧಿಸೂಚನೆಯಲ್ಲಿ ಕೇರಳ ರಾಜ್ಯವೂ ಇಎಸ್ಎ ಪಟ್ಟಿಯಲ್ಲಿತ್ತು. ಆದರೆ ಮೂರನೇ ಬಾರಿ ಹೊರಡಿಸಿರುವ ಅಧಿಸೂಚನೆಯಲ್ಲಿ ಕೇರಳ ಇಲ್ಲ.

ಡಾ.ಕಸ್ತೂರಿರಂಗನ್ ವರದಿಯಿಂದ ಬೆಳಗಾವಿ ಜಿಲ್ಲೆಯ ಖಾನಾಪುರ 62 ಹೆಕ್ಟೇರ್, ಬೆಳಗಾವಿ ಒಂದು ಹೆಕ್ಟೇರ್, ಚಾಮರಾಜನಗರದ ಗುಂಡ್ಲುಪೇಟೆಯ 21, ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು 27, ಕೊಪ್ಪ 32, ಮೂಡಗೆರೆ 27, ನರಸಿಂಹರಾಜಪುರ 35, ಶೃಂಗೇರಿ 26, ಕೊಡಗು ಜಿಲ್ಲೆಯ ಮಡಿಕೇರಿ 23, ಸೋಮವಾರಪೇಟೆಯ 11, ವಿರಾಜಪೇಟೆಯ 21, ಹಾಸನ ಜಿಲ್ಲೆಯ ಆಲೂರು 1, ಸಕಲೇಶಪುರ 34, ದ.ಕನ್ನಡದ ಬೆಳ್ತಂಗಡಿ 17, ಪುತ್ತೂರು 11, ಸುಳ್ಯ 18, ಉ.ಕನ್ನಡ ಜಿಲ್ಲೆಯ ಆಂಕೋಲಾ 43, ಭಟ್ಕಳ 28, ಹೊನ್ನಾವರ 44, ಜೋಯ್ಡಾ 110, ಕಾರವಾರ 39, ಕುಮ್ಟಾ 43, ಸಿದ್ದಾಪುರ 107, ಸಿರಸಿ 125, ಯಲ್ಲಾಪುರ 87, ಮೈಸೂರಿನ ಎಚ್.ಡಿ.ಕೋಟೆ 62, ಶಿವಮೊಗ್ಗದ ಹೊಸನಗರ 126, ಸಾಗರ 134, ಶಿಕಾರಿಪುರ 12, ಶಿವಮೊಗ್ಗ 66, ತೀರ್ಥಹಳ್ಳಿ 146, ಉಡುಪಿಯ ಕಾರ್ಕಳ 13, ಕುಂದಾಪುರದ 24 ಹೆಕ್ಟೇರ್ ಈ ವ್ಯಾಪ್ತಿಗೆ ಒಳಪಡುತ್ತದೆ ಅಂದರೆ ಇಲ್ಲಿ ಮೇಲೆ ಹೇಳಿದ ಎಲ್ಲ ನಿಭಂದನೆಗಳು ಅನ್ವಯವಾಗುತ್ತದೆ.

ವರದಿ ಜಾರಿಗೆ ಕಾರಣ ಮತ್ತು ಪರಿಣಾಮ
ಡಾ.ಕಸ್ತೂರಿರಂಗನ್ ವರದಿಯನ್ನು ಅನುಷ್ಠಾನ ಮಾಡಿದರೆ ಪಶ್ಚಿಮ ಘಟ್ಟ ಮತ್ತು ಮಲೆನಾಡು ಪ್ರದೇಶವನ್ನು ಅತೀ ಸೂಕ್ಷ್ಮ ಪರಿಸರ ವಲಯವೆಂದು ಘೋಷಣೆ ಮಾಡಲಾಗುತ್ತದೆ. ಒಂದು ಬಾರಿ ಸೂಕ್ಷ್ಮ ವಲಯವೆಂದು ಘೋಷಣೆ ಮಾಡಿದರೆ ಇಲ್ಲಿ ಯಾವುದೇ ರೀತಿಯ ಚಟುವಟಿಕೆಯನ್ನು ನಡೆಸುವಂತಿಲ್ಲ. ರಾಜ್ಯ ಸರ್ಕಾರ ಸಂಪೂರ್ಣವಾಗಿ ತನ್ನ ಹತೋಟಿಯನ್ನು ಕಳೆದುಕೊಂಡು ಕೇಂದ್ರ ಸರ್ಕಾರದ ಸುಪರ್ದಿಗೆ ನೀಡಬೇಕಾಗುತ್ತದೆ. ಪಶ್ಚಿಮ ಘಟ್ಟದಲ್ಲಿ ಅಪರೂಪದ ಪ್ರಾಣಿಪಕ್ಷಿಗಳು, ಗಿಡಮೂಲಿಕೆಗಳು, ವನ್ಯಜೀವಿಗಳು ಇರುವುದರಿಂದ ಇವುಗಳ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ. ಅಲ್ಲದೆ ದಶಕಗಳಿಂದಲೂ ಅರಣ್ಯ ಪ್ರದೇಶದಲ್ಲಿ ರುವ ಆದಿವಾಸಿಗಳನ್ನು ಒಕ್ಕಲೆಬ್ಬಿಸಬೇಕಾಗುತ್ತದೆ. ಅಲ್ಲದೆ ವಿದ್ಯುತ್, ನೀರಾವರಿ, ಕೈಗಾರಿಕೆ ಸೇರಿದಂತೆ ಯಾವುದೇ ರೀತಿಯ ಹೊಸ ಯೋಜನೆಗಳನ್ನು ಜಾರಿ ಮಾಡಬೇಕಾದರೆ ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯಬೇಕು.

ಕೇರಳ ಮಾಡಿದ್ದೇನು?
ಉಪಗ್ರಹದ ಆಧಾರದಲ್ಲಿ ಸಮೀಕ್ಷೆ ಮಾಡಿದ್ದ  ಸಮಿತಿ ಅರಣ್ಯ ಪ್ರದೇಶ ಲೆಕ್ಕ ಹಾಕುವಲ್ಲಿಯೂ ಎಡವಿತ್ತು ಎಂಬ ಮಾತಿದೆ. ಕೇರಳ ಸರಕಾರ ಕೇಂದ್ರಕ್ಕೆ ಇದನ್ನು ಮನವರಿಕೆ ಮಾಡಿದ ನಂತರ ಪಟ್ಟಿಯಿಂದ ಅನೇಕ ಪ್ರದೇಶಗಳನ್ನು ಕೈ ಬಿಡಲಾಯಿತು. ಆದರೆ ಕರ್ನಾಟಕ ಆಕ್ಷೇಪಣೆ ಸಲ್ಲಿಸುತ್ತ ಇದೆಯೇ ವಿನಃ ವೈಜ್ಞಾನಿಕವಾಗಿ ಸಮಗ್ರ ವರದಿ ಸಲ್ಲಿಸುವತ್ತ ಮನಸ್ಸು ಮಾಡುತ್ತಿದಲ್ಲ. ಆಯಾ ಗ್ರಾಮ ಪಂಚಾಯಿತಿ ಮಟ್ಟದಿಂದ ವರದಿ ತರಿಸಿಕೊಳ್ಳಬೇಕು ಎಂಬ ಮಾತು ಕೇಳಿ ಬಂದಿತ್ತು. 

ಗಾಡ್ಗಿಳ್‌ ವರದಿಯಲ್ಲೇನಿತ್ತು?
ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತಂತೆ ಮಾಧವ ಗಾಡ್ಗಿಳ್‌ ವರದಿ ಬಂದಾಗಲೇ ಅದನ್ನು ಅನುಷ್ಠಾನ ಮಾಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಸಲಹೆ ಮಾಡಿದ್ದರು. ಆದರೆ, ಇದು ಕಠಿಣ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಈ ವರದಿ ಜಾರಿಗೊಳಿಸದೆ ಕಸ್ತೂರಿ ರಂಗನ್‌ ಸಮಿತಿ ರಚಿಸಿ ಮತ್ತೂಂದು ವರದಿ ಸಿದ್ಧಪಡಿಸಿತ್ತು. ಕಸ್ತೂರಿರಂಗನ್‌ ವರದಿಯಲ್ಲಿ ಜನವಸತಿ ಪ್ರದೇಶವನ್ನು ಉಳಿಸಿಕೊಳ್ಳುವುದರ ಜತೆಗೆ ಪಶ್ಚಿಮ ಘಟ್ಟಗಳ ಸಂರಕ್ಷಣೆ ಹೇಗೆ ಎಂಬುದನ್ನು ಸ್ಪಷ್ಟವಾಗಿ ಹೇಳಲಾಗಿತ್ತು. ಹೀಗಾಗಿ ಈ ವರದಿಯನ್ನು ಜಾರಿಗೊಳಿಸಬೇಕು ಎಂದು ಆರಂಭದಲ್ಲೇ ಅರಣ್ಯ ಇಲಾಖೆ ಸರ್ಕಾರಕ್ಕೆ ಸಲಹೆ ಮಾಡಿತ್ತು. ಆದರೆ, ರಾಜಕೀಯ ಕಾರಣಗಳು, ಜನರಿಗೆ ತೊಂದರೆಯಾಗಬಾರದು ಎಂದು ಸರ್ಕಾರ ತೀರ್ಮಾನ ಕೈಗೊಳ್ಳಲಿಲ್ಲ.

ಮುಂದೇನು? ಪರಿಸರ ಸಂರಕ್ಷಣೆ ಹೆಸರಲ್ಲಿ ವರದಿ ಜಾರಿಗೆ  ಮುಂದಾದರೆ ಆಯಾ ಪ್ರದೇಶದ ಜನ ವಿರೋಧ ವ್ಯಕ್ತಪಡಿಸುವುದು ಸಿದ್ಧ.  ವರದಿಯಲ್ಲಿನ ಕೆಲ  ಅಂಶಗಳ ಮಾರ್ಪಾಟು ಮಾಡಲು ಸರಕಾರಗಳು ಬದ್ಧವಿಲ್ಲ. ಒಂದು ವೇಳೆ ವರದಿ ಹೇರಿಕೆಗೆ ಮುಂದಾದರೆ ಮತ್ತೊಂದು ಹೋರಾಟ ಆರಂಭವಾಗಬಹುದು. ನಿಜವಾಗಿ ಪರಿಸರದ ಮೇಲೆ ಕಾಳಜಿ ಇದ್ದರೆ ತಲೆತಲಾಂತರದಿಂದ ಬದುಕು ಕಟ್ಟಿಕೊಂಡು ಬಂದಿರುವ ಜನರಲ್ಲಿ, ಹೊಸ ಪೀಳಿಗೆಯಲ್ಲಿ ಪರಿಸರ ಸಂರಕ್ಷಣೆ ಅರಿವು ಮೂಡಿಸಬೇಕು. ಒಟ್ಟಿನಲ್ಲಿ ಕೊಡಗು ಭೂ ಕುಸಿತದ ನಂತರ ಮತ್ತೊಮ್ಮೆ ವರದಿ ಜಾರಿ ಮಾತು ಎದ್ದಿದೆ.

click me!