ಬರಹಗಾರ್ತಿ ಸುಧಾ ಮೂರ್ತಿಯಿಂದ ಈ ಬಾರಿ ದಸರಾ ಉದ್ಘಾಟನೆ

By Web DeskFirst Published Aug 28, 2018, 6:54 PM IST
Highlights

ಅಕ್ಟೋಬರ್ 19 ರಿಂದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ 409ನೇ ನಾಡ ಹಬ್ಬ ನಡೆಯಲಿದ್ದು ಲೇಖಕಿ ಸುಧಾ ಮೂರ್ತಿ  ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ

ಬೆಂಗಳೂರು[ಆ.28]: ಈ ಬಾರಿಯ ನಾಡ ಹಬ್ಬ ದಸರಾವನ್ನು ಖ್ಯಾತ ಬರಹಗಾರ್ತಿ ಹಾಗೂ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ಉದ್ಘಾಟಿಸಲಿದ್ದಾರೆ.

ಅಕ್ಟೋಬರ್ 19 ರಿಂದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ 409ನೇ ನಾಡ ಹಬ್ಬ ನಡೆಯಲಿದ್ದು  ಲೇಖಕಿ ಸುಧಾ ಮೂರ್ತಿ  ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ರಾಜ್ಯ ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.

10 ದಿನಗಳ ಕಾಲ ವೈಭವಯುತವಾಗಿ ನಡೆಯುವ ನಾಡ ಹಬ್ಬಕ್ಕೆ ದೇಶ ವಿದೇಶದಿಂದ ಲಕ್ಷಾಂತರ ಮಂದಿ ಪಾಲ್ಗೊಳ್ಳಲಿದ್ದಾರೆ. ಸುಧಾ ಮೂರ್ತಿ ಅವರು ಡಾಲರ್ ಸೊಸೆ, ಮಹಾಶ್ವೇತಾ,ಅತಿರಿಕ್ತೆ ಸೇರಿದಂತೆ ಕನ್ನಡ ಹಾಗೂ ಇಂಗ್ಲಿಷಿನಲ್ಲಿ ಒಟ್ಟು 12 ಕೃತಿಗಳನ್ನು ರಚಿಸಿದ್ದಾರೆ. 

ಇವರು ಪತಿ ಇನ್ಫೋಸಿಸ್ ಸಂಸ್ಥೆಯ ಸಹ ಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ದೇಶದ ಪ್ರಖ್ಯಾತ ಐಟಿ ಉದ್ಯಮಿ. 2017ನೇ ಸಾಲಿನ ದಸರಾ ಉದ್ಘಾಟನೆಯನ್ನು ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹಮದ್ ನೆರವೇರಿಸಿದ್ದರು. ಸುಧಾ ಮೂರ್ತಿ ಈ ಬಾರಿ ದಸರಾ ಉದ್ಘಾಟಿಸುತ್ತಿರುವುದು ನಾಡ ಹಬ್ಬಕ್ಕೆ ಮತ್ತಷ್ಟು ಮೆರಗು ತರಲಿದೆ.

click me!