ಕಾಂಗ್ರೆಸ್ ಜನಪ್ರಿಯತೆ ಕುಸಿಯುತ್ತಿದೆ. ಇದು ಮುಂದುವರಿದರೆ 50 ವರ್ಷ ವಿರೋಧ ಪಕ್ಷದಲ್ಲೇ ಇರಬೇಕು ಎಂದು ಪಕ್ಷದ ಹಿರಿಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತ ಬಿಜೆಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರು ಹೇಳಿ ಚುನಾವಣೆಗೆ ಧುಮುಕುವ ಬದಲು ಕೆಲಸ ಮಾಡಿ ತೋರಿಸಿ ಎಂದು ರಾಜ್ಯಾಧ್ಯಕ್ಷರು ಎಚ್ಚರಿಕೆ ನೀಡಿದ್ದಾರೆ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದದಲ್ಲಿ ಮಾಜಿ ಸಚಿವ ಕೆಜೆ ಜಾರ್ಜ್‌ಗೆ ಮತ್ತೆ ಸಂಕಷ್ಟ ಶುರುವಾಗಿದೆ. ಪೆಟ್ರೋಲ್ ಬೆಲೆ ಏರಿಕೆ, ಬಿ ಟೌನ್ ಡ್ರಗ್ಸ್ ಮಾಫಿಯಾ ಸೇರಿದಂತೆ ಆಗಸ್ಟ್ 28ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಬೆಂಗ್ಳೂರು ಗಲಭೆ: ಆರೋಪಿಗಳಿಂದ ನಷ್ಟ ವಸೂಲಿಗೆ ಕ್ಲೇಮ್ ಕಮೀಷನರ್ ನೇಮಕ...
ನಗರದ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ವೇಳೆ ಸಾರ್ವಜನಿಕರ ಆಸ್ತಿಪಾಸ್ತಿ ಹಾಗೂ ವಾಹನಗಳನ್ನು ಹಾನಿ ಮಾಡಿದವರಿಂದಲೇ ನಷ್ಟ ಭರಿಸುವ ಸಂಬಂಧ ನಿವೃತ್ತ ನ್ಯಾಯಮೂರ್ತಿ ಕೆಂಪಣ್ಣ ಅವರನ್ನು ಕ್ಲೇಮ್ ಕಮೀಷನರ್ ಆಗಿ ಹೈಕೋರ್ಟ್ ನೇಮಿಸಿದೆ.
ಮೋದಿ ಹೆಸರು ಬಳಸಿದರೆ ಸಾಲದು, ಕೆಲಸ ಮಾಡಿ ತೋರಿಸಿ: MLAಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಾರ್ನಿಂಗ್!...
2014ರಲ್ಲಿ ನರೇಂದ್ರ ಮೋದಿ ದೇಶದ ಪ್ರಧಾನ ಮಂತ್ರಿಯಾದ ಬಳಿಕ ಲೋಕ ಸಭೆ ಹಾಗೂ ವಿಧಾನ ಸಭೆ ಚುನಾವಣೆಗಳಲ್ಲಿ ಪ್ರಧಾನಿ ಮೋದಿ ಹೆಸರು ಹೇಳಿ ಹಲವು ಬಿಜೆಪಿ ನಾಯಕರು ಗೆಲುವು ಸಾಧಿಸಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಕೇವಲ ಮೋದಿ ಹೆಸರು ಹೇಳಿ ಮತದಾರರನ್ನ ಗೆಲ್ಲಬಹುದು ಎಂಬ ಅತೀಯಾದ ಆತ್ಮವಿಶ್ವಾಸ ಬೇಡ, ಕೆಲಸ ಮಾಡಿ ಮತದರಾರರನ್ನು ಗೆಲ್ಲಿ ಎಂದು ರಾಜ್ಯಧ್ಯಕ್ಷ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಕೇಸ್: ಮಾಜಿ ಸಚಿವ ಕೆಜೆ ಜಾರ್ಜ್‌ಗೆ ಮತ್ತೆ ಸಂಕಷ್ಟ...
ಮಡಿಕೇರಿಯಲ್ಲಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂದ ಸಿಬಿಐ ನ್ಯಾಯಾಲಯಕ್ಕೆ ಸಲ್ಲಿದ್ದ ಬಿ ರಿಪೋರ್ಟ್ ವರದಿಯನ್ನು ಜನಪ್ರತಿನಿಧಿಗಳ ನ್ಯಾಯಾಲಯ ತಿರಸ್ಕರಿಸಿದೆ.
AICCಗೆ ಚುನಾವಣೆ ಆಗಲಿ, ಇಲ್ಲ ಇನ್ನೂ 50 ವರ್ಷ ವಿರೋಧ ಪಕ್ಷದಲ್ಲೇ ಇರಬೇಕು'...
ಕಾಂಗ್ರೆಸ್ ಕುಸಿಯುತ್ತಿರುವ ಬಗ್ಗೆ ಮತ್ತೊಮ್ಮೆ ಹಿರಿಯ ನಾಯಕರಾದ ಗುಲಮ್ ನಬಿ ಮತ್ತು ಕಪಿಲ್ ಸಿಬಲ್ ಧ್ವನಿ ಎತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಸಬೇಕು. ಮುಂದಿನ 50 ವರ್ಷ ವಿರೋಧ ಪಕ್ಷದಲ್ಲಿ ಕೂರುವಂತಾಗುವುದನ್ನು ತಪ್ಪಿಸಬೇಕು ಎಂದಿದ್ದಾರೆ.
ಬೆಳಗಾವಿ: ರಾಯಣ್ಣ ಮೂರ್ತಿ ತೆರವುಗೊಳಿಸುವಂತೆ MES ಪಟ್ಟು...
ವಿವಾದ ಇತ್ಯರ್ಥವಾಗುವವರೆಗೆ ಸಂಗೊಳ್ಳಿ ರಾಯಣ್ಣ ಮೂರ್ತಿ ತೆರವುಗೊಳಿಸುವಂತೆ ಪಟ್ಟು ಹಿಡಿಯುವ ಮೂಲಕ ಎಂಇಎಸ್ ಉದ್ಧಟತನ ಮೆರೆದ ಘಟನೆ ಇಂದು(ಶುಕ್ರವಾರ) ಜಿಲ್ಲಾಧಿಕಾರಿ ಸಭೆಯಲ್ಲಿ ನಡೆದಿದೆ. ಎಂಇಎಸ್‌ಗೆ ಶಿವಸೇನೆ ಮುಖಂಡರೂ ಕೂಡ ಸಾಥ್ ಕೊಟ್ಟಿದ್ದಾರೆ.
ಬಿ-ಟೌನ್ ಮಾದಕ ದಂಧೆಯ ಕರಾಳ ಸತ್ಯ ಬಿಚ್ಚಿಟ್ಟ ನಟಿ ಕಂಗನಾ ರಣಾವತ್!...
ಬಾಲಿವುಡ್‌ನಲ್ಲಿ ನಡೆಯುತ್ತಿರುವ ಡ್ರಗ್ಸ್ ಮಾಫಿಯಾ ಬಗ್ಗೆ ಸತ್ಯ ತೆರೆದಿಟ್ಟ ಬೋಲ್ಡ್ ನಟಿ ಕಂಗನಾ. ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಾಗ ಡ್ರಗ್ಸ್ ಸೇವಿಸಲೇ ಬೇಕಾ? ವ್ಯಭಿಚಾರಕ್ಕೆ ಒಪ್ಪಲೇ ಬೇಕಾ?
ಪೆಟ್ರೋಲ್ ಬೆಲೆ ಮತ್ತೆ ಏರಿಕೆ: ಪ್ರೀಮಿಯಂ ದರ 100ರ ಸನಿಹಕ್ಕೆ...
ಕೊರೋನಾ ಕಡೆ ಕೊರೋನಾ ಭೀತಿಯಾದರೆ ಮತ್ತೊಂದೆಡೆ ವಾಹನ ಸವಾರರ ಪಾಲಿಗೆ ಪೆಟ್ರೋಲ್ ಬಿಸಿ ತುಪ್ಪವಾಗಿ ಪರಿಣಮಿಸಿದೆ. ದಿನದಿಂದ ದಿನಕ್ಕೆ ಪೆಟ್ರೋಲ್ ಬೆಲೆ ಹೆಚ್ಚುತ್ತಲೇ ಸಾಗುತ್ತಿದೆ.
ಡೇಟಿಂಗ್ ಮಾಡಿ ಬೋರ್ ಆದಾಗ ಮದ್ವೆಯಾಗ್ತಾರಂತೆ ನಯನ್‌ತಾರಾ-ವಿಘ್ನೇಶ್
ನಟಿ ನಯನ್‌ತಾರಾ ಮತ್ತು ವಿಘ್ನೇಶ್ ಶಿವನ್ ರಿಲೇಷನ್‌ಶಿಪ್‌ನಲ್ಲಿರೋದು ಎಲ್ಲರಿಗೂ ಗೊತ್ತು. ಆದ್ರೆ ಮದ್ವೆಯಾವಾಗ..? ಇದಕ್ಕೆ ಇತ್ತೀಚಿನ ಸಂದರ್ಶನದಲ್ಲಿ ಉತ್ತರಿಸಿದ್ದಾರೆ ವಿಘ್ನೇಶ್...!
ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಘಾಟು: ಅನಿಕಾ ಪ್ರಕರಣಕ್ಕೆ ಸಿಕ್ತು ಟ್ವಿಸ್ಟ್!...
ಕನ್ನಡ ಚಿತ್ರರಂಗ ಡ್ರಗ್ಸ್ ಸುಳಿಯಲ್ಲಿ ಸಿಲುಕಿದೆ. ಕನ್ನಡ ಚಿತ್ರರಂಗದ ಖ್ಯಾತನಾಮರಿಗೆ ಡ್ರಗ್ಸ್ ಪೂರೈಸುತ್ತಿದ್ದ ಕರಾಳ ದಂಧೆ ಬಯಲಾಗಿದೆ. NCB ತನಿಖೆ ನಡೆಸುತ್ತಿದ್ದು, ಪಟ್ಟಿಯಲ್ಲಿ ಬಹುಭಾಷಾ ನಟಿ, ನಟನ ಮಕ್ಕಳಿದ್ದಾರೆ. ಕಿಂಗ್ ಪಿನ್ ಅನಿಕಾ ಜೊತೆ ನೂರಾರು ಸ್ಟಾರ್‌ಗಳಿದ್ದರು ಎನ್ನಲಾಗಿದೆ.
HALನ ಶೇ.15ರಷ್ಟು ಪಾಲು ಖಾಸಗಿಗೆ ಮಾರಲು ಮುಂದಾದ ಕೇಂದ್ರ!...
ಸರ್ಕಾರದ ಅಧೀನದಲ್ಲಿದ್ದ ಹಲವು ಸಂಸ್ಥೆಗಳನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡುತ್ತಿದೆ. ಇತ್ತೀಚೆಗೆ ವಿಮಾನ ನಿಲ್ದಾಣಗಳ ಖಾಸಗೀಕರಣ ಭಾರಿ ಸಂಚಲನ ಸೃಷ್ಟಿಸಿತ್ತು. ಕೊರೋನಾ ವೈರಸ್ ಕಾರಣ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಸರ್ಕಾರದ ಅಂಗ ಸಂಸ್ಥೆಗಳ ಷೇರು ಮಾರಾಟ ಮಾಡಲು ಕೇಂದ್ರ ಮುಂದಾಗಿದೆ. ಇದೀಗ ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿರುವ HAL ಕಂಪನಿ ಷೇರುಗಳ ಮಾರಾಟಕ್ಕೆ ಮುಂದಾಗಿದೆ.