
ಸಾಮಾನ್ಯವಾಗಿ ವಯಸ್ಸಾದಂತೆ ತಲೆ ಕೂದಲು ಉದುರುವುದು ಸಾಮಾನ್ಯ. ಕೂದಲು ಉದುರುವಿಕೆಗೆ ಗ್ರಂಥಿಗಳಲ್ಲಿನ ಬದಲಾವಣೆ, ಅನುವಂಶಿಕತೆಯೂ ಕಾರಣವಾಗಿರಬಹುದು. ಕೂದಲು ಉದುರುವುದಕ್ಕೆ ಇನ್ನೂ ಹಲವು ಕಾರಣಗಳಿವೆ ಅವು ಇಲ್ಲಿವೆ ನೋಡಿ.
ಒತ್ತಡ: ತೀವ್ರವಾದ ದೈಹಿಕ ಒತ್ತಡ ಮತ್ತು ಮಾನಸಿಕ ಒತ್ತಡ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ದೈಹಿಕ ಒತ್ತಡ ಎಂದರೆ ಹೆರಿಗೆ , ಶಸ್ತ್ರಚಿಕಿತ್ಸೆ, ಹಾಗೂ ಪ್ರಸವದ ನಂತರದ ಹಲವಾರು ತಿಂಗಳುಗಳ ಕಾಲ ಕೂದಲು ವುದುರುವಿಕೆ ಇರಬಹುದು. ತೀವ್ರವಾದ ಮಾನಸಿಕ ಒತ್ತಡ, ಭಯ, ಆತಂಕ ಕೂಡಾ ಕೂದಲು ನಷ್ಟಕ್ಕೆ ಕಾರಣವಾಗುತ್ತದೆ.
ಗ್ರಂಥಿಯಲ್ಲಿನ ಬದಲಾವಣೆಗಳು: ಗರ್ಭಾವಸ್ಥೆ, ಹೆರಿಗೆ, ಅಥವಾ ಮಟ್ಟು, ಅಥವಾ ಮುಟ್ಟು ನಿಲ್ಲುವ ಅವಧಿಯಲ್ಲಿ ದೇಹದಲ್ಲಿ ಆಗುವ ಗ್ರಂಥಿ (ಹಾರ್ಮೋನ್) ಗಳ ಬದಲಾವಣೆ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.
ಥೈರಾಯ್ಡ್ ಕಾಯಿಲೆಗಳು: ಥೈರಾಯ್ಡ್ ಸಮಸ್ಯೆ ಇದ್ದಾಗ ಕೂಡಾ ಕೂದಲು ಉದುರುತ್ತದೆ. ಇದಕ್ಕೆ ನೀಡುವ ಚಿಕಿತ್ಸೆ ಯಿಂದ ಮತ್ತೆ ಕೂದಲು ಬೆಳವಣಿಗೆಗೆ ಸಹಾಯವಾಗುತ್ತದೆ.
ಲೂಪಸ್: ಇದು ಕೂದಲು ತೆಳುವಾಗುವಂತೆ ಮಾಡುತ್ತದೆ. ಇದು ನೆತ್ತಿಯ ಮೇಲಿನ ಕೂದಲು ತೆಳುವಾಗುವಂತೆ ಮಾಡುವ ರೋಗವಾಗಿದೆ. ಈ ರೋಗದಿಂದ ಕೆಲವರಲ್ಲಿ ಗಡ್ಡ, ಹುಬ್ಬುಗಳು, ಕಣ್ಣು ರೆಪ್ಪೆ, ಮತ್ತು ದೇಹದ ಮೇಲಿನ ಕೂದಲುಗಳು ತೆಳುವಾಗುವಂತೆ ಮಾಡುತ್ತದೆ.
ವೈದ್ಯಕೀಯ ಪರಿಸ್ಥಿತಿಗಳು: ದೀರ್ಘಕಾಲದ ಅನಾರೋಗ್ಯ, ಕ್ಯಾನ್ಸರ್, ಯಕೃತ್ತಿನ ರೋಗ ಅಥವಾ ಕರುಳಿಗೆ ಸಂಬಂಧಿಸಿದ ಕಾಯಿಲೆಗಳುಕೂದಲು ತೆಳುವಾಗಲು, ಅಥವಾ ಉದುರಲು ಕಾರಣವಾಗಬಹುದು.ಇಂತಹ ರೋಗಗಳಿಂದ ಚರ್ಮದ ಮೇಲಿನ ಕೂದಲುಗಳ ಬೆಳವಣಿಗೆಯ ಮೇಲೂ ಹಸ್ತಕ್ಷೇಪ ಮಾಡುತ್ತವೆ.
ಔಷಧಗಳು: ಕ್ಯಾನ್ಸರ್, ಸಂಧಿವಾತ, ಖಿನ್ನತೆ, ಹೃದಯ ಸಮಸ್ಯೆಗಳು, ಅಧಿಕ ರಕ್ತದೊತ್ತಡ, ಮತ್ತು ಜನನ ನಿಯಂತ್ರಣ ಔಷಧಿಗಳು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.
ಅನುವಂಶಿಕತೆ: ಅನುವಂಶಿಕತೆಯಿಂದ ಸಾಮಾನ್ಯವಾಗಿ ಪುರುಷ ಮತ್ತು ಸ್ತ್ರೀ ಇಬ್ಬರಲ್ಲಿಯೂ ಕೂದಲು ಉದರುವ ಸಾಧ್ಯತೆಗಳಿವೆ. ಇದು ವಯಸ್ಯಾದ ಮೇಲೆ ಉದುರಬಹುದು ಅಥವಾ ಮದ್ಯವಯಸ್ಸಿನಲ್ಲಿಯೇ ಅಗಬಹುದು. ಅನುವಂಶಿಕತೆಯಿಂದ ಕೂದಲು ನಿಧಾನವಾಗಿ ಉದುರುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.