ವಾಷಿಂಗ್ಟನ್(ಸೆ.24): ಅಮೆರಿಕಾದ ಮತ್ತೊಮ್ಮೆ ಗುಂಡಿನ ಮೊರೆತ ಕೇಳಿಬಂದಿದ್ದು, ವಾಷಿಂಗ್ಟನ್ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬನಿಂದ ಶೂಟೌಟ್ ನಡೆದಿದೆ.
ಬರ್ಲಿಂಗ್ಟನ್ನ ಕ್ಯಾಸಕೆಡೆಯ ಶಾಪಿಂಗ್ ಮಾಲ್ವೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಫೈರಿಂಗ್ ಮಾಡಿದ್ದಾನೆ ಎನ್ನಲಾಗಿದ್ದು, ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ನಾಲ್ವರು ಮಹಿಳೆಯರು ಎನ್ನಲಾಗಿದೆ. ಈ ದಾಳಿಯಿಂದ ಹಲವರು ಗಂಭೀರ ಗಾಯಗೊಂಡಿದ್ದಾರೆ.
ನಿನ್ನೆ ರಾತ್ರಿ ಮಾಲ್ಗೆ ಪ್ರವೇಶಿಸಿದ ಓರ್ವ ಬಂಧೂಕುಧಾರಿ ಮನಸೋ ಇಚ್ಛೆ ಗುಂಡಿನ ಮಳೆಗೆರೆದು ಪರಾರಿಯಾಗಿದ್ದು, ಆತನಿಗಾಗಿ ವಾಷಿಂಗ್ಟನ್ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಈ ಕೃತ್ಯದಿಂದ ಮತ್ತೊಮ್ಮೆ ವಿಶ್ವದ ದೊಡ್ಡಣ್ಣ ಅಮೆರಿಕಾ ಬೆಚ್ಚಿ ಬಿದ್ದಿದೆ.