
ನವದೆಹಲಿ[ಆ.07]: ವಿದೇಶಾಂಗ ಸಚಿವರಾಗಿದ್ದ ಸುಷ್ಮಾ ಅವಧಿಯಲ್ಲಿ ಅತ್ಯಂತ ಹೆಚ್ಚು ಸದ್ದು ಮಾಡಿದ್ದು ಕುಲಭೂಷಣ್ ಜಾಧವ್ ಪ್ರಕರಣ. ಇದನ್ನು ಫಾರಿನ್ ಮಿನಿಸ್ಟರ್ ಆಗಿದ್ದ ಸುಷ್ಮಾ ನಿರ್ವಹಿಸಿದ್ದ ಶೈಲಿ ಹಾಗೂ ವಕೀಲ ಹರೀಶ್ ಸಾಳ್ವೆಯ ಕಾರ್ಯ ವೈಖರಿ ನಿಜಕ್ಕೂ ಶ್ಲಾಘನೀಯ. ಈ ಪ್ರಕರಣವನ್ನು ಭೇಷ್ ಎನ್ನುವಂತೆ ದಿಟ್ಟತನದಿಂದ ನಿಭಾಯಿಸಿದ್ದ ಸುಷ್ಮಾ, ಇದರೆಡೆ ತಮಗಿದ್ದ ಜವಾಬ್ದಾರಿಯನ್ನು ಕೊನೆಯ ಕ್ಷಣದವರೆಗೆ ಮರೆತಿರಲಿಲ್ಲ. ಇದಕ್ಕೆ ಸಾಕ್ಷಿ ಎಂಬಂತಿದೆ ಜಾಧವ್ ಪ್ರಕರಣದಲ್ಲಿ ಸಮರ್ಥವಾದ ವಾದ ಮಂಡನೆ ಮಾಡಿ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಗೆಲುವು ಪಡೆದಿದ್ದ ಹಿರಿಯ ವಕೀಲರಾದ ಹರೀಶ್ ಸಾಳ್ವೆ ಮಾತುಗಳು.
ಕುಲಭೂಷಣ್ ತೀರ್ಪು: ಸಾಳ್ವೆ ಇಸ್ಕೊಂಡಿದ್ದು 1 ರೂ. ಖುರೇಷಿ ಕಸ್ಕೊಂಡಿದ್ದು 20 ಕೋಟಿ!
ಹೌದು ಸುಷ್ಮಾ ನಿಧನಕ್ಕೆ ಸಂತಾಪ ಸೂಚಿಸಿದ ವಕೀಲ ಹರೀಶ್ ಸಾಳ್ವೆ ಈ ಸಂದರ್ಭದಲ್ಲಿ, 'ಕೊನೆಯುಸಿರೆಳೆಯುವುದಕ್ಕೂ ಕೇವಲ ಒಂದು ಗಂಟೆ ಮೊದಲು ಕರೆ ಮಾಡಿದ್ದ ಸುಷ್ಮಾ ಅವರು ನನಗೆ ಬುಧವಾರ ಬರುವಂತೆ ಹೇಳಿದ್ದರು. ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಗೆಲುವು ಪಡೆದಿದ್ದೀರಿ. ನಿಮ್ಮನ್ನು ಭೇಟಿ ಮಾಡಬೇಕಿದೆ, ನಿಮಗೆ ನೀಡಬೇಕಿದ್ದ ಶುಲ್ಕ 1 ರೂ. ಬಾಕಿ ಇದೆ, ಆ. 07 ರಂದು ಸಂಜೆ 6 ಕ್ಕೆ ಬಂದು ನೀವದನ್ನು ಪಡೆದುಕೊಳ್ಳಿ ಎಂದಿದ್ದರು. ಆ ಅಮೂಲ್ಯ ಶುಲ್ಕವನ್ನು ಪಡೆಯಲು ಖಂಡಿತವಾಗಿಯೂ ಬರುತ್ತೇನೆ ಎಂದಿದ್ದೆ' ಎಂದು ಸುಷ್ಮಾ ಜೊತೆಗಿನ ತಮ್ಮ ಕೊನೆಯ ಸಂಭಾಷಣೆಯನ್ನು ನೆನೆದು ಭಾವುಕರಾಗಿದ್ದಾರೆ.
ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಭಾರತ ಸರ್ಕಾರದ ಪರ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದ ಮಂಡಿಸುವುದಕ್ಕೆ ಹರೀಶ್ ಸಾಳ್ವೆ ಕೇವಲ ಒಂದು ರೂಪಾಯಿ ಶುಲ್ಕ ಪಡೆಯಲು ನಿರ್ಧರಿಸಿದ್ದರು.
ಪಾಕ್ ನಂಟು, ತುರ್ತುಪರಿಸ್ಥಿತಿ ವೇಳೆ ವಿವಾಹ: ಸುಷ್ಮಾ ಬಗ್ಗೆ ಗೊತ್ತಿರದ ಸಂಗತಿಗಳು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.