ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದಕ್ಕೆ! ಬರಿಗೈಯಲ್ಲಿ ಮರಳಿದ ಸಿಎಂ

By Web DeskFirst Published Aug 7, 2019, 12:44 PM IST
Highlights
  • ಕಳೆದ ಜು.26ಕ್ಕೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಬಿ.ಎಸ್. ಯಡಿಯೂರಪ್ಪ
  • ಸುಷ್ಮಾ ಸ್ವರಾಜ್ ನಿಧನ ಹಿನ್ನೆಲೆಯಲ್ಲಿ ಅಮಿತ್ ಶಾ- ಯಡಿಯೂರಪ್ಪ ಭೇಟಿ ಮುಂದಕ್ಕೆ
  • ದೆಹಲಿ ಪ್ರವಾಸ ಮೊಟಕುಗೊಳಿಸಿ ಸಿಎಂ ರಾಜ್ಯಕ್ಕೆ ವಾಪಾಸು
     

ನವದೆಹಲಿ (ಆ.07) : ರಾಜ್ಯ ಜನತೆ ಬಹಳ ಕುತೂಹಲದಿಂದ ಎದುರು ನೋಡುತ್ತಿರುವ ಬಿ.ಎಸ್.ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದೂಡಲಾಗಿದೆ.

ಸಚಿವ ಸಂಪುಟ ಅಂತಿಮಗೊಳಿಸುವ ಬಗ್ಗೆ ಯಡಿಯೂರಪ್ಪ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೊತೆ ಇಂದು (ಬುಧವಾರ) ಚರ್ಚೆ ನಡೆಸುವವರಿದ್ದರು. ಆದರೆ ಅಮಿತ್ ಶಾರನ್ನು ಭೇಟಿಯಾಗದೆ ಯಡಿಯೂರಪ್ಪ ದೆಹಲಿ ಪ್ರವಾಸ ಮೊಟಕುಗೊಳಿಸಿದ್ದಾರೆ.

ಸುಷ್ಮಾ ಸ್ವರಾಜ್ ನಿಧನದ ಹಿನ್ನೆಲೆಯಲ್ಲಿ ಇಂದು ಭೇಟಿ ಸಾಧ್ಯವಿಲ್ಲವೆಂದು ಅಮಿತ್ ಶಾ ಹೇಳಿರುವ ಕಾರಣ ಯಡಿಯೂರಪ್ಪ ರಾಜ್ಯಕ್ಕೆ ಹಿಂದಿರುಗಲಿದ್ದಾರೆ.  

ಇದನ್ನೂ ಓದಿ | ಮುಂದುವರೆದ ವರ್ಗಾವಣೆ: ಸಿಎಂ ತವರಿಗೆ ಹೊಸ ಜಿಲ್ಲಾಧಿಕಾರಿ!

ಗುರುವಾರ (ಆ.08) ಅಥವಾ ಶುಕ್ರವಾರ (ಆ.09) ಸಚಿವ ಸಂಪುಟ ವಿಸ್ತರಣೆಯಾಗುತ್ತದೆ ಎಂದು ನಿರೀಕ್ಷಿಸಸಲಾಗಿತ್ತು. ಅಮಿತ್ ಶಾ- ಯಡಿಯೂರಪ್ಪ ಮುಂದಿನ ಭೇಟಿ ಆ.12ಕ್ಕೆ ನಿಗದಿಯಾಗಿದೆ.

ಆ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ದಿವಸಕ್ಕೆ ಮುನ್ನವೇ, ಅಂದರೆ ಆ.13ಕ್ಕೆ ನೂತನ ಸಚಿವ ಸಂಪುಟ ಅಸ್ತಿತ್ವಕ್ಕೆ ಬರುವ ಸಾಧ್ಯತೆಗಳು ಹೆಚ್ಚಿವೆ. 
 

click me!