ಷೇರು ಮಾರಲು ಕೋಕಾ ಕೋಲಾ ಜತೆ ಕಾಫಿ ಡೇ ಮಾತುಕತೆ?

Published : Aug 20, 2019, 11:25 AM ISTUpdated : Aug 20, 2019, 12:22 PM IST
ಷೇರು ಮಾರಲು ಕೋಕಾ ಕೋಲಾ ಜತೆ ಕಾಫಿ ಡೇ ಮಾತುಕತೆ?

ಸಾರಾಂಶ

ಸಾಲದ ಹೊರೆಯನ್ನು ತಗ್ಗಿಸಲು ತಂಪುಪಾನೀಯ ಕ್ಷೇತ್ರದ ಅಂತಾರಾಷ್ಟ್ರೀಯ ಕಂಪನಿ ಕೋಕಾ ಕೋಲಾಗೆ ಕೆಫೆ ಕಾಫಿ ಡೇ ಷೇರುಗಳನ್ನು ಮಾರಾಟ ಮಾಡುವ ಸಂಬಂಧ ಕಾಫಿ ಡೇ ಕಂಪನಿ ಮಾತುಕತೆಯನ್ನು ಪುನಾರಂಭಿಸುವ ಸಾಧ್ಯತೆ ಇದೆ.

ಮುಂಬೈ (ಆ. 20): ಸಾಲದ ಹೊರೆಯನ್ನು ತಗ್ಗಿಸಲು ತಂಪುಪಾನೀಯ ಕ್ಷೇತ್ರದ ಅಂತಾರಾಷ್ಟ್ರೀಯ ಕಂಪನಿ ಕೋಕಾ ಕೋಲಾಗೆ ಕೆಫೆ ಕಾಫಿ ಡೇ ಷೇರುಗಳನ್ನು ಮಾರಾಟ ಮಾಡುವ ಸಂಬಂಧ ಕಾಫಿ ಡೇ ಕಂಪನಿ ಮಾತುಕತೆಯನ್ನು ಪುನಾರಂಭಿಸುವ ಸಾಧ್ಯತೆ ಇದೆ.

20 ದಿನದ ನಂತರ ಕಾಫಿ ಡೇ ಷೇರು ಶೇ. 5 ರಷ್ಟು ಏರಿಕೆ.. ಎರಡು ಕಾರಣ

ಸಿದ್ಧಾರ್ಥ ಅವರು ನಿಗೂಢವಾಗಿ ಸಾವಿಗೀಡಾಗುವ ಮುನ್ನ ಅಂದರೆ ಜೂನ್‌ನಲ್ಲಿ ಕೋಕಾ ಕೋಲಾ ಜತೆ ಮಾತುಕತೆಯನ್ನು ಆರಂಭಿಸಿದ್ದರು. ಕಂಪನಿಯ ಮಾಲೀಕತ್ವವನ್ನು ತಮ್ಮ ಬಳಿಯೇ ಇಟ್ಟುಕೊಂಡು ಕೋಕಾ ಕೋಲಾಗೆ ಒಂದಿಷ್ಟುಷೇರು ಮಾರಾಟ ಮಾಡಿ, ಅದರಿಂದ ಬಂದ ಹಣದಲ್ಲಿ ಸಾಲ ಮರುಪಾವತಿಸುವ ಯೋಜನೆ ಅವರದ್ದಾಗಿತ್ತು. ಆದರೆ ಅಲ್ಪಪ್ರಮಾಣದ ಷೇರುಗಳ ಬದಲಿಗೆ ಮಾಲೀಕತ್ವದ ಮೇಲೆಯೇ ಕೋಕಾ ಕೋಲಾ ಕಣ್ಣಿಟ್ಟಿದ್ದರಿಂದ ಮಾತುಕತೆ ನಿಂತುಹೋಗಿತ್ತು.

4900 ಕೋಟಿಯಿಂದ ಒಂದೇ ಸಾರಿ ಸಾವಿರ ಕೋಟಿಗೆ ಇಳಿದ ಕಾಫಿ ಡೇ ಸಾಲ..ಕಾರಣ

ಸಿದ್ಧಾರ್ಥ ಅವರು ನಿಧನರಾಗಿರುವ ಹಿನ್ನೆಲೆಯಲ್ಲಿ ಕೆಫೆ ಕಾಫಿ ಡೇ ಮತ್ತೊಮ್ಮೆ ಕೋಕಾ ಕೋಲಾ ಜತೆ ಮಾತುಕತೆ ಪುನಾರಂಭಿಸುವ ಸಾಧ್ಯತೆ ಇದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನ ಗ್ಲೋಬಲ್‌ ವಿಲೇಜ್‌ ಟೆಕ್‌ ಪಾರ್ಕ್ ಅನ್ನು ಬ್ಲಾಕ್‌ಸ್ಟೋನ್‌ ಗ್ರೂಪ್‌ಗೆ ಕಾಫಿ ಡೇ 3000 ಕೋಟಿ ರು.ಗೆ ಮಾರಾಟ ಮಾಡಿತ್ತು. ಇದರ ಜತೆಗೆ ಸಿದ್ಧಾರ್ಥ ಅವರು ಸ್ಥಾಪಿಸಿದ್ದ ಸರಕು ಸಾಗಣೆ ಕಂಪನಿ ಸಿಕಲ್‌ ಲಾಜಿಸ್ಟಿಕ್‌ನ ಕೆಲವೊಂದು ಆಸ್ತಿಗಳನ್ನೂ ಮಾರಾಟ ಮಾಡಲು ಕಾಫಿ ಡೇ ಪರಿಶೀಲಿಸುತ್ತಿದೆ ಎಂದು ಹೇಳಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

28 ಕೋಟಿ ವೆಚ್ಚದಲ್ಲಿ ರಾಜ್ಯದಲ್ಲಿ ಮೋಡ ಬಿತ್ತನೆ ಆರಂಭ, 'ಇದು ಸೂಕ್ತ ಸಮಯವಲ್ಲ' ವಾರ್ನಿಂಗ್‌ ನೀಡಿದ IMD
Gold Rate Today: ಬಂಗಾರದ ಬೆಲೆ ದಿಢೀರ್ ₹1,860 ಇಳಿಕೆ! ಗೃಹಿಣಿಯರು ಫುಲ್ ಖುಷ್, ಇಂದಿನ ರೇಟ್ ಎಷ್ಟು?