ರಾಜ್ಯ ಕಂಡ ಅತೀ ಹೆಚ್ಚು ಸುಳ್ಳು ಹೇಳುವ ಸಿಎಂ ಎಂದರೆ ಅದು ಸಿದ್ದರಾಮಯ್ಯ; ಶೆಟ್ಟರ್

Published : Oct 03, 2017, 08:46 PM ISTUpdated : Apr 11, 2018, 01:05 PM IST
ರಾಜ್ಯ ಕಂಡ ಅತೀ ಹೆಚ್ಚು ಸುಳ್ಳು  ಹೇಳುವ ಸಿಎಂ ಎಂದರೆ ಅದು ಸಿದ್ದರಾಮಯ್ಯ; ಶೆಟ್ಟರ್

ಸಾರಾಂಶ

ರಾಜ್ಯ ಕಂಡ ಅತೀ ಹೆಚ್ಚು ಸುಳ್ಳು  ಹೇಳುವ ಸಿಎಂ ಎಂದರೆ ಅದು ಸಿದ್ದರಾಮಯ್ಯ ಎಂದು  ವಿಪಕ್ಷ ನಾಯಕ ಜಗದೀಶ್ ಶೆಟ್ಟರ್​ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  

ಬೆಂಗಳೂರು (ಅ.03): ರಾಜ್ಯ ಕಂಡ ಅತೀ ಹೆಚ್ಚು ಸುಳ್ಳು  ಹೇಳುವ ಸಿಎಂ ಎಂದರೆ ಅದು ಸಿದ್ದರಾಮಯ್ಯ ಎಂದು  ವಿಪಕ್ಷ ನಾಯಕ ಜಗದೀಶ್ ಶೆಟ್ಟರ್​ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  

ಇನ್ವೆಸ್ಟ್ ಕರ್ನಾಟಕ, ಕೈಗಾರಿಕೆ ಹಾಗೂ ನೀರಾವರಿ ಇಲಾಖೆಗಳ ಬಗ್ಗೆ ಸಿಎಂ ಜನರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಇನ್ವೆಸ್ಟ್ ಕರ್ನಾಟಕದಲ್ಲಿ ಒಡಬಂಡಿಕೆ ಆಗಿದ್ದು 2,45,584 ಕೋಟಿ. ಆದರೆ ಇದುವರೆಗೆ ಹೂಡಿಕೆ ಆಗಿರೋದು ಕೇವಲ 11,158 ಕೋಟಿ ರೂಪಾಯಿ ಮಾತ್ರ ಅಂತ ಶೆಟ್ಟರ್ ವಿವರ ನೀಡಿದರು.  ಇನ್ನು ನೀರಾವರಿ ಇಲಾಖೆಯಿಂದ ಆರು ಪುಟಗಳ ಜಾಹೀರಾತು ನೀಡಿ ಅದರ ತುಂಬ ಸುಳ್ಳು ವಿವರಗಳ ನೀಡಿದ್ದಾರೆ. ಇದಕ್ಕೆ ಒಂದು ನಿದರ್ಶನ ನೀಡೋದಾದರೆ  ಕೊಪ್ಪಳ ಏತ ನೀರಾವರಿ ಯೋಜನೆ ಜಾರಿಯಾಗದಿರುವ ಹಿನ್ನಲೆಯಲ್ಲಿ ಅಲ್ಲಿನ ಸ್ಥಳೀಯರು ನಡೆಸಿದ ಪ್ರತಿಭಟನೆಯಲ್ಲಿ ನಾನು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಭಾಗವಹಿಸಿ ಒತ್ತಾಯಿಸಿದ್ದೆವು. ಅದಾದ 2 ದಿನಗಳ ನಂತರ ಸಿಎಂ ಆ ಯೋಜನೆ ಜಾರಿಗೆ 2 ಸಾವಿರ ಕೋಟಿ ಘೋಷಿಸಿದ್ದರು. ಆದರೆ ಜಾಹೀರಾತಿನಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಅಂತ ಆಪಾದಿಸಿದರು.

ಸಚಿವ ಎಂ.ಬಿ. ಪಾಟೀಲ್ ಹಾಗೂ ಹೆಚ್​.ಕೆ. ಪಾಟೀಲರನ್ನು ಷೋಮ್ಯಾನ್ಸ್ ಅಂತ ಟೀಕಿಸಿದರು.  ಇದೇ ವೇಳೆ ಪ್ರಕಾಶ್​ ರೈ ವಿರುದ್ಧ ಟೀಕಿಸಿದ ಶೆಟ್ಟರ್​​, ಗೌರಿ ಹತ್ಯೆಯ ಹಿನ್ನಲೆಯಲ್ಲಿ ಮೋದಿ ವಿರುದ್ಧ ಟೀಕಿಸುವ ಪ್ರಕಾಶ್​ ರೈಗೆ ಕಾನೂನು ಸುವ್ಯವಸ್ಥೆ ರಾಜ್ಯದ ವ್ಯಾಪ್ತಿಗೆ ಬರುತ್ತದೆ ಎಂಬುದು ತಿಳಿದಿಲ್ಲವೇ? ಅವರಿಗೆ ತಲೆ ಇಲ್ಲವೇ ಅಂತ ವಾಗ್ದಾಳಿ ನಡೆಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕುಕ್ಕೆ ದೇವಳ ಆಮಂತ್ರಣ ಪತ್ರಿಕೆ ವಿವಾದ; ಪ್ರೊಟೊಕಾಲ್ ಹೆಸರಲ್ಲಿ ಅನ್ಯಧರ್ಮೀಯರ ಆಹ್ವಾನಕ್ಕೆ ತೀವ್ರ ವಿರೋಧ!
ಚಿನ್ನ-ಬೆಳ್ಳಿ ಖರೀದಿ ಇನ್ನೂ ಕನಸಿನ ಮಾತು; ಆದ್ರೂ ಒಂದ್ಸಾರಿ ಗುಂಡಿಗೆ ಗಟ್ಟಿ ಮಾಡ್ಕೊಂಡು ಬೆಲೆ ನೋಡಿ