ಸತ್ಯಸಾಯಿ ಬಾಬಾ ಮೇಲೆ ಅಮೆರಿಕದ ನಿಗೂಢ ಕಣ್ಣು

Published : Jan 24, 2017, 10:05 PM ISTUpdated : Apr 11, 2018, 12:53 PM IST
ಸತ್ಯಸಾಯಿ ಬಾಬಾ ಮೇಲೆ ಅಮೆರಿಕದ ನಿಗೂಢ ಕಣ್ಣು

ಸಾರಾಂಶ

ಅಮೆರಿಕ ಜಗತ್ತಿನ ಎಲ್ಲ ದೇಶಗಳ ಮೇಲೂ ಗೂಢಚಾರಿಕೆ ನಡೆಸುತ್ತೆ. ಅದು ರಹಸ್ಯವೇನೂ ಅಲ್ಲ. ಆ ದೇಶಕ್ಕೆ ತಾನು ಜಗತ್ತಿನ ಅತಿ ದೊಡ್ಡ, ಬಲಾಢ್ಯ ರಾಷ್ಟ್ರ ಎಂಬ ಹಮ್ಮು, ಆತಂಕ ಎರಡೂ ಇದೆ. ಅಮೆರಿಕದ ಗೂಢಚಾರಿಕೆಯಿಂದ ಭಾರತವೂ ಮುಕ್ತವಾಗಿಲ್ಲ. ಭಾರತದ ಹಲವು ರಹಸ್ಯಗಳು ಅಮೆರಿಕದಲ್ಲಿವೆ. ಆದರೆ, ಈ ಸಂಗತಿ ಮಾತ್ರ ಹೊಸತು.

ನವದೆಹಲಿ(ಜ.25): ಅಮೆರಿಕ ಜಗತ್ತಿನ ಎಲ್ಲ ದೇಶಗಳ ಮೇಲೂ ಗೂಢಚಾರಿಕೆ ನಡೆಸುತ್ತೆ. ಅದು ರಹಸ್ಯವೇನೂ ಅಲ್ಲ. ಆ ದೇಶಕ್ಕೆ ತಾನು ಜಗತ್ತಿನ ಅತಿ ದೊಡ್ಡ, ಬಲಾಢ್ಯ ರಾಷ್ಟ್ರ ಎಂಬ ಹಮ್ಮು, ಆತಂಕ ಎರಡೂ ಇದೆ. ಅಮೆರಿಕದ ಗೂಢಚಾರಿಕೆಯಿಂದ ಭಾರತವೂ ಮುಕ್ತವಾಗಿಲ್ಲ. ಭಾರತದ ಹಲವು ರಹಸ್ಯಗಳು ಅಮೆರಿಕದಲ್ಲಿವೆ. ಆದರೆ, ಈ ಸಂಗತಿ ಮಾತ್ರ ಹೊಸತು.

ಸತ್ಯಸಾಯಿ ಬಾಬಾ ಮೇಲೆ ಗೂಢಚಾರಿಕೆ ನಡೆಸಿತ್ತು ಅಮೆರಿಕ !

ಇಂಥದ್ದೊಂದು ಸ್ಫೋಟಕ ಮಾಹಿತಿಯನ್ನ ಅಮೆರಿಕದ ಸಿಐಎ ಬಹಿರಂಗ ಮಾಡಿದೆ. 1990ರಿಂದ ಅಮೆರಿಕದ ಸಿಐಎ, ಸಾಯಿ ಬಾಬಾ ಮೇಲೆ ಹದ್ದಿನ ಕಣ್ಣಿಟ್ಟಿತ್ತು. ಸತತ 10 ವರ್ಷ ಸಾಯಿಬಾಬಾ ಮೇಲೆ ಗೂಢಚಾರಿಕೆ ನಡೆಸಿತ್ತು. 2000ನೇ ಇಸವಿಯಲ್ಲೇ ಈ ವರದಿ ಬಹಿರಂಗಪಡಿಸಬೇಕಿತ್ತು. ಆದರೆ, ಆ ನಿಗೂಢ ವರದಿಯನ್ನು 16 ವರ್ಷಗಳ ಬಳಿಕ, ಈಗ ಬಿಡುಗಡೆ ಮಾಡಿದೆ. ಅದು ಕೇವಲ 16 ಪುಟಗಳ ವರದಿ..

ಅಮೆರಿಕದ ಸಿಐಎ ನಿಗೂಢ ವರದಿಯಲ್ಲಿ.

ಅಮೆರಿಕದ ಸಿಐಎ ನಿಗೂಢ ವರದಿಯಲ್ಲಿ. ಸಾಯಿಬಾಬಾ ಅವತಾರ ಪುರುಷನೆಂಬ ನಂಬಿಕೆಯ ಕಥೆಗಳಿವೆ. ಸತ್ಯಸಾಯಿ ಪವಾಡಗಳು ಮತ್ತು ಭಕ್ತರು ಆ ಪವಾಡಗಳಿಗೆ ಸ್ಪಂದಿಸುತ್ತಿದ್ದ ಕಥೆಗಳಿವೆ. ಭಕ್ತರೊಂದಿಗೆ ಸಾಯಿಬಾಬಾ, ಭಕ್ತರ ಭಾಷೆಯಲ್ಲೇ ಮಾತನಾಡುತ್ತಿದ್ದರು ಎಂಬುದರ ಕುರಿತು ವಿವರಣೆಯಿದೆ. ಆಶ್ರಮದ ಮೂಲಕ ನಡೆಸುತ್ತಿದ್ದ ಸಾಮಾಜಿಕ ಸೇವೆಗಳು ಹಾಗೂ ಸಾಯಿಬಾಬಾ ರಾಜಕೀಯ ಸಂಪರ್ಕಗಳ ಡೀಟೈಲ್ಸ್ ಕೂಡಾ ವರದಿಯಲ್ಲಿದೆ.

ಈ ಫೈಲ್‌'ನ್ನು ಟಾಪ್‌ ಸೀಕ್ರೆಟ್‌ ಕೆಟಗರಿಯಲ್ಲಿ ಇಟ್ಟಿರುವುದು ಹಾಗೂ ಈ ವರದಿಯನ್ನು ಯಾವುದೇ ವಿದೇಶಿ ನಾಗರಿಕನಿಗೆ ಕೊಡಬಾರದು ಎಂಬ  ಉಲ್ಲೇಖ  ನಿಗೂಢತೆ ಸೃಷ್ಟಿಸಿದೆ. ಆದರೆ, ಸಿಐಎ ಈಗ ಬಿಡುಗಡೆ ಮಾಡಿರುವ ಒಟ್ಟಾರೆ 9.30 ಲಕ್ಷ ವರ್ಗೀಕೃತವಲ್ಲದ ಫೈಲುಗಳಲ್ಲಿ, ಈ ವರದಿಯೂ ಸೇರಿದೆ.  ವರದಿಯಲ್ಲಿ ಸಾಯಿಬಾಬಾ ಪವಾಡಗಳ ಬಗ್ಗೆ ಉಲ್ಲೇಖವಿದ್ದರೂ, ಅವುಗಳಿಗೆ ವೈಜ್ಞಾನಿಕ ತಳಹದಿಯಿಲ್ಲ ಎಂದು ಹೇಳಲಾಗಿದೆ.

ಪ್ರತ್ಯೇಕ ಧರ್ಮ ಸ್ಥಾಪನೆಯ ಕನಸು ಕಂಡಿದ್ದರು ಬಾಬಾ

ಭಕ್ತರಿಗಾಗಿ ಪ್ರತ್ಯೇಕ ಧರ್ಮ ಕಟ್ಟಬೇಕು. ಆದರೆ ಯಾವುದೇ ಕಾರಣಕ್ಕೂ ಇನ್ನೊಂದು ಧರ್ಮದಿಂದ ಮತಾಂತರ ಮಾಡಿಕೊಳ್ಳಬಾರದು. ಅವರು ಎಲ್ಲೇ ಇರಲಿ, ಹೇಗೆ ಇರಲಿ. ಆದರೆ ಈ ಧರ್ಮದ ಅನುಯಾಯಿಗಳಾಗಿರಬೇಕು. ಮುಂದೊಂದು ದಿನ  ಕ್ರೈಸ್ತ, ಮುಸಲ್ಮಾನ, ಬೌದ್ಧ, ಜೈನ, ಸಿಖ್​'ರಂತ ಧರ್ಮವೊಂದನ್ನು ಸ್ಥಾಪಿಸುವ ಉದ್ದೇಶ ಅವರ ಭಕ್ತರಿಗೆ ಇತ್ತು. ಏಕೆಂದರೆ ಈ ಎಲ್ಲ ಧರ್ಮಗಳ ಹಿಂದೆ ಒಬ್ಬೊಬ್ಬ ಧಾರ್ಮಿಕ ನಾಯಕರೇ ಇರುವುದರಿಂದ ಅವರೂ ಧರ್ಮ ಕಟ್ಟಲು ಮುಂದಾಗಿದ್ದರು ಎಂಬ ವಿವರ ಈ ಸೀಕ್ರೆಟ್ ಫೈಲ್​'ನಲ್ಲಿದೆ.

ಬಾಬಾ ಭ್ರಷ್ಟನೆಂದು ಸಾಬೀತಾದರೆ, ಭಕ್ತರೇ ತಿರುಗಿಬಿದ್ದಾರು..!

ಇಂಥದ್ದೊಂದು ಅಂಶವೂ ವರದಿಯ ಕೊನೆಯಲ್ಲಿದೆ. ಆದರೆ, ಸತ್ಯ ಸಾಯಿ ಬಾಬಾ ಅಮೆರಿಕದ ಸಿಐಎ ಗೂಢಚಾರಿಕೆ ನಡೆಸಿದ್ದು ಏಕೆ..? ಸತ್ಯಸಾಯಿ ಬಾಬಾ ಬಗ್ಗೆ ಅಮೆರಿಕ ಆತಂಕಗೊಂಡಿತ್ತಾದರೂ ಏಕೆ..? ಒಬ್ಬ ಧರ್ಮಗುರುವಿನ ಬಗ್ಗೆ ಜಗತ್ತಿನ ಅತಿದೊಡ್ಡ ಗೂಢಚರ್ಯೆ ಸಂಸ್ಥೆಯಿಂದ ಗೂಢಚಾರಿಕೆ ನಡೆಸಲು ಏನು ಕಾರಣ..? ಈ ಯಾವ ಪ್ರಶ್ನೆಗಳಿಗೂ ಉತ್ತರ ಸಿಕ್ಕಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2024-25ರಲ್ಲಿ ಕಾಂಗ್ರೆಸ್‌ಗಿಂತ 12 ಪಟ್ಟು ಹೆಚ್ಚು ದೇಣಿಗೆ ಸಂಗ್ರಹಿಸಿದ ಬಿಜೆಪಿ, ಫಂಡ್ ಪಟ್ಟಿ ಪ್ರಕಟ
ಚೀನಾದಲ್ಲಿ ಡ್ರೋನ್​ ಹಾರಿಸಲು ಹೋಗಿ ಚೀನಿ ಬೆಡಗಿ ಜೊತೆ Bigg Boss ಪ್ರತಾಪನ ಡ್ಯುಯೆಟ್​!