ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಹೇಳಿಕೆಗಳ ಆವೇಶ ಅನಿವಾರ್ಯವಾಗಿ ತಡೆದುಕೊಳ್ಳಲೇಬೇಕಾಗಿದೆ. ಕೇಂದ್ರ ಸರ್ಕಾರ ರದ್ದು ಮಾಡಿದ ಆರ್ಟಿಕಲ್ 370 ರ ಕುರಿತು ಹೇಳಿಕೆ ನೀಡಿ ವಿವಾದ ಸೃಷ್ಟಿಸಿಕೊಂಡಿದ್ದರು. ಅದಾದ ಮೇಲೆ ಈಗ ತಮಿಳುನಾಡಿ ಸರದಿ.
ಚೆನ್ನೈ[ಆ. 13] ಆರ್ಟಿಕಲ್ 370 ರದ್ದು ಮಾಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಮುಖಕ್ಕೆ ಮಸಿ ಬಳಿಯುವವರಿಗೆ ನಗದು ಬಹುಮಾನ ನೀಡುತ್ತೇವೆ ಎಂದು ಅಲಿಘಡದ ಮುಸ್ಲಿಂ ಯುತ್ ಅಸೋಸಿಯೇಷನ್ ಮುಖ್ಯಸ್ಥ ಮೊಹಮದ್ ಅಮೀರ್ ರಶೀದ್ ಹೇಳಿದ್ದರು. ಇದಾದ ಮೇಲೆ ಚಿದಂಬರಂ ಮೇಲೆ ತಮಿಳುನಡು ಸಿಎಂ ಪಳನಿಸ್ವಾಮಿ ವಾಗ್ದಾಳಿ ಮಾಡಿದ್ದಾರೆ.
ಪಿ. ಚಿದಂಬರಂ ಈ ಭೂಮಿಯ ಮೇಲೆ ದೊಡ್ಡ ಹೊರೆ ಎಂದು ಪಳನಿಸ್ವಾಮಿ ಹೇಳಿಕೆ ನೀಡಿದ್ದಾರೆ. ತಮಿಳುನಾಡಿನ ಬಗ್ಗೆ ಮಾತನಾಡುವ ಅಧಿಕಾರ ಅವರಿಗೆ ಏನಿದೆ? ಕೆಂದ್ರ ಸಚಿವರಾಗಿ ಎಷ್ಟು ಕಾಲ ಅಧಿಕಾರದಲ್ಲಿ ಇದ್ದರು.. ಅವರು ಮಾಡಿರುವ ಸಾಧನೆಗಳಾದರೂ ಏನು? ಕಾವೇರಿ ವಿವಾದದ ಬಗ್ಗೆ ಯಾವತ್ತಾದರೂ ಮಾತನಾಡಿದ್ದಾರಾ? ಎಂದು ಪ್ರಶ್ನೆ ಎಸೆದಿದ್ದಾರೆ.
undefined
ಚಿದಂಬರಂ ಮುಖಕ್ಕೆ ಮಸಿ ಬಳಿದ್ರೆ ಭರ್ಜರಿ ಕ್ಯಾಶ್ ಪ್ರೈಸ್, ಮುಸ್ಲಿಂ ನಾಯಕ ಘೋಷಣೆ
ತಮಿಳುನಾಡನ ಆಡಳಿತ ದಿಕ್ಕು ತಪ್ಪಿದೆ. ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರಕ್ಕೆ ಮಾಡಿದ ರೀತಿ ತಮಿಳುನಾಡನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು. ಆಡಳಿತದಲ್ಲಿರುವ ಎಐಎಡಿಎಂಕೆ ಜನರ ಹಿತ ಕಾಪಾಡಲು ವಿಫಲವಾಗಿದೆ ಎಂದು ಚಿದಂಬರಂ ಆರೋಪಿಸಿದ್ದು ಪಳನಿಸ್ವಾಮಿ ಅವರನ್ನು ಕೆರಳಿಸಿತ್ತು.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ