ಹಾವೇರಿಯ ಶಾಸಕಗೆ ಸಿಗುತ್ತಾ BSY ಸಂಪುಟದಲ್ಲಿ ಸಚಿವ ಸ್ಥಾನ?

By Web Desk  |  First Published Jul 31, 2019, 8:21 AM IST

ಹಾವೇರಿಯ ಈ ಶಾಸಕಗೆ ಸಚಿವ ಸ್ಥಾನ ನೀಡಬೇಕು ಎಂದು ಸಮುದಾಯವೊಂದು ಆಗ್ರಹಿಸಲಾಗಿದೆ. BSY ಸಂಪುಟದಲ್ಲಿ ತಮ್ಮ ಶಾಸಕಗೆ ಸಚಿವ ಸ್ಥಾನ ನೀಡಬೇಕೆಂದು ಮನವಿ ಮಾಡಿದ್ದಾರೆ. 


ಬೆಂಗಳೂರು [ಜು.31]:  ಹಾವೇರಿ ಶಾಸಕ ಹಾಗೂ ಛಲವಾದಿ ಸಮುದಾಯದ ನಾಯಕ ನೆಹರು ಓಲೇಕಾರ್‌ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ರಾಜ್ಯ ಛಲವಾದಿ ಮಹಾ ಸಭಾದಿಂದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಮಾಡಿದೆ.

ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಛಲವಾದಿ ಮಹಾ ಸಭಾದ ಪೀಠಾಧ್ಯಕ್ಷ ಬಸವನಾಗಿದೇವ ಶರಣರು, ಓಲೇಕರ್‌ ಅವರು ಕಳೆದ ಮೂರು ಬಾರಿಯಿಂದ ಶಾಸಕರಾಗಿ ಆಯ್ಕೆ ಯಾಗುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಛಲವಾದಿ ಸಮುದಾಯದ ಏಕೈಕ ಶಾಸಕರಾಗಿದ್ದಾರೆ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

Tap to resize

Latest Videos

ಓಲೇಕಾರ್‌ ಅವರು ತಮ್ಮ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ನಡೆದುಕೊಂಡಿದ್ದಾರೆ. ಸಮಾಜ ಸೇವಾ ಮನೋಭಾವ ಹೊಂದಿರುವ ಅವರು, ವರ್ಗರಹಿತ, ಜಾತಿರಹಿತ ಹಾಗೂ ಧರ್ಮಹಿತವಾಗಿ ಅಭಿವೃದ್ಧಿ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಅಲ್ಲದೆ, ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆದ್ದರಿಂದ ಅವರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕು ಎಂದು ತಿಳಿಸಿದರು.

click me!