ಆಧಾರ್ ಕಾರ್ಡ್‌ದಾರರೆ ಈ ಸುದ್ದಿ ನಿಮಗೆ ಪ್ರಮುಖ

First Published Jun 23, 2018, 9:03 AM IST
Highlights

ಅಪರಾಧ ಪ್ರಕರಣಗಳ ತನಿಖೆ ಸಂಬಂಧ ಪೊಲೀಸ್ ಅಧಿಕಾರಿಗಳೊಂದಿಗೆ ನಿಮ್ಮ ಆಧಾರ್ ಮಾಹಿತಿಯನ್ನು ಸಂಪೂರ್ಣವಾಗಿ ಹಂಚಿಕೊಳ್ಳಬೇಡಿ ಎಂದು ಯುಐಡಿಎಐ [ಯುನಿಕ್ ಐಡೆಂಟಿಫಿಕೇಶನ್ ಅಥಾರಟಿ ಆಫ್ ಇಂಡಿಯಾ]  ಹೇಳಿದೆ. ಯಾಕೆ ಹೀಗೆ ಹೇಳಿದೆ.. ವಿವರ ಇಲ್ಲಿದೆ.

ನವದೆಹಲಿ [ಜೂ. 23] ಅಪರಾಧ ಪ್ರಕರಣಗಳ ತನಿಖೆ ಸಂಬಂಧ ಪೊಲೀಸ್ ಅಧಿಕಾರಿಗಳೊಂದಿಗೆ ನಿಮ್ಮ ಆಧಾರ್ ಮಾಹಿತಿಯನ್ನು ಸಂಪೂರ್ಣವಾಗಿ ಹಂಚಿಕೊಳ್ಳಬೇಡಿ ಎಂದು ಯುಐಡಿಎಐ[ಯುನಿಕ್ ಐಡೆಂಟಿಫಿಕೇಶನ್ ಅಥಾರಟಿ ಆಫ್ ಇಂಡಿಯಾ]  ಹೇಳಿದೆ.

ಮೊದಲ ಬಾರಿ ಅಪರಾಧ ಕೃತ್ಯವೆಸಗಿದವರ ಹಾಗೂ ಅಪರಿಚಿತ ಮೃತದೇಹಗಳ ಗುರುತು ಪತ್ತೆಗಾಗಿ ಆಧಾರ್‌ ದಾಖಲೆಗಳ ಸೀಮಿತ ಬಳಕೆಗೆ ಅನುಮತಿ ನೀಡಬೇಕೆಂದು ರಾಷ್ಟ್ರೀಯ ಅಪರಾಧ ದಾಖಳೆಗಳ ಬ್ಯೂರೋ (ಎನ್‌ಸಿಆರ್‌ಬಿ) ನಿರ್ದೇಶಕ ಈಶ್ ಕುಮಾರ್‌ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಇದಾದ ಮೇಲೆ ಯುಐಡಿಎಐ ಈ ರೀತಿ ಪ್ರತಿಕ್ರಿಯೆ ನೀಡಿದೆ.


ಈ ಪ್ರಮುಖ ದಾಖಲಾತಿಗೆ ಪಾನ್ ಕಾರ್ಡ್ ಲಿಂಕ್ ಮಾಡಿಲ್ಲವೇ..? ಲಾಸ್ಟ್ ಡೇಟ್ ಯಾವಾಗ..?

 29 ರ ಪ್ರಕಾರ ಆಧಾರ್ ಮೂಲಕ ಕಲೆಹಾಕಿರುವ ಬಯೋಮೆಟ್ರಿಕ್ ಡಾಟಾವನ್ನು ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಅಂದರೆ ಆಧಾರ್ ದೃಢೀಕರಣಕ್ಕೆ ಮಾತ್ರ ಬಳಸಿಕೊಳ್ಳಬೇಕು ಎಂಬ ನಿಯಮವಿದೆ.

ಆಧಾರ್‌ನ ಬಯೋಮೆಟ್ರಿಕ್ ಮಾಹಿತಿ ಲಭ್ಯವಾದರೆ ಅಪಾರಾಧ ಮತ್ತು ಶವಗಳ ಪತ್ತೆ ಸುಲಭವಾಗುತ್ತದೆ ಎಂಬ ವಿನಂತಿಯನ್ನು ಇಡಲಾಗಿತ್ತು. ಆದರೆ ಆಧಾರ್ ಸಂವಿಧಾನಿಕ ಮಾನ್ಯತೆ ಕುರಿತಾಗಿಯೇ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವ ಹೊತ್ತಿನಲ್ಲಿ  ಇಂಥದ್ದೊಂದು ಸಂದೇಶವನ್ನು ಯುಐಡಿಎಐ ನೀಡಿದೆ.

click me!