ಈ ಕಾರು ಖರೀದಿಸುವವರಿಗೆ ಕೇಂದ್ರ ಶಾಕ್

First Published Jun 23, 2018, 8:51 AM IST
Highlights

ಪರಿಸರ ಸ್ನೇಹಿ ಎಲೆಕ್ಟ್ರಿಕ್‌ ಕಾರುಗಳ ಖರೀದಿಗೆ ನೀಡಲಾಗುತ್ತಿದ್ದ ತೆರಿಗೆ ಉತ್ತೇಜನವನ್ನು ಕಡಿತಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. 

ನವದೆಹಲಿ: ಪರಿಸರ ಸ್ನೇಹಿ ಎಲೆಕ್ಟ್ರಿಕ್‌ ಕಾರುಗಳ ಖರೀದಿಗೆ ನೀಡಲಾಗುತ್ತಿದ್ದ ತೆರಿಗೆ ಉತ್ತೇಜನವನ್ನು ಕಡಿತಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. 

ಇದುವರೆಗೆ ಇಂಥ ವಾಹ ನ ಖರೀದಿಸುವ ವ್ಯಕ್ತಿಗೆ ರಿಯಾಯಿತಿ ನೀಡಲಾಗುತ್ತಿತ್ತು. ಆದರೆ ಇನ್ನು ಮುಂದೆ ಈ ರಿಯಾಯ್ತಿಯನ್ನು ಕೇವಲ ಸಾರ್ವಜನಿಕ ಸಂಪರ್ಕ ಒದಗಿಸಲು ಬಳಸುವ ವಾಹನಗಳಿಗೆ ಮಾತ್ರ ಸೀಮಿತಗೊಳಿಸಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ಇನ್ನು ಖಾಸಗಿ ಬಳಕೆಗೆ ಖರೀದಿಸುವ ಕಾರುಗಳಿಗೆ ಈ ರಿಯಾಯ್ತಿ ಸಿಗದು. 

ಖಾಸಗಿ ಬಳಕೆಗಾಗಿ ಕಾರು ಖರೀದಿಸುವವರಿಗೆ ಇನ್ಸೆಂಟಿವ್‌ ನೀಡುವುದರಿಂದ ಮಾರುಕಟ್ಟೆಮತ್ತು ಪರಿಸರದ ಮೇಲೆ ಹೇಳಿಕೊಳ್ಳುವಂಥ ಯಾವುದೇ ಪರಿಣಾಮ ಎದುರಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಶುದ್ಧ ಇಂಧನ ಕಾರ್ಯಕ್ರಮದ ಯೋಜನೆ ಭಾಗವಾಗಿ ಎಲೆಕ್ಟ್ರಿಕ್‌ ಕಾರು ಖರೀದಿದಾರರಿಗೆ 1.3 ಲಕ್ಷ ರು.ವರೆಗೂ ರಿಯಾಯತಿ ನೀಡಲಾಗುತ್ತಿತ್ತು.

click me!