ಉಪಚುನಾವಣೆಗೆ ಅಭ್ಯರ್ಥಿ ಪಟ್ಟಿ ಪ್ರಕಟ, ಬಿಕಿನಿ ತೊಟ್ಟ ನಟಿಗೆ ಪಾಠ; ನ.14ರ ಟಾಪ್ 10 ಸುದ್ದಿ!

By Web Desk  |  First Published Nov 14, 2019, 4:51 PM IST

ಸುಪ್ರೀಂ ಕೋರ್ಟ್ ಅನರ್ಹಶಾಸಕರ ತೀರ್ಪು ಪ್ರಕಟಿಸಿದ ಬಳಿಕ ರಾಜ್ಯದ ಉಪಚುನಾವಣೆ ಕಣ ರಂಗೇರಿದೆ. ಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಮೋದಿ ವಿರುದ್ದ ಹರಿಹಾಯ್ದು ರಾಹುಲ್‌ ಗಾಂಧಿಗೆ ಸುಪ್ರೀಂ ಕೋರ್ಟ್ ಖಡಕ್ ವಾರ್ನಿಂಗ್ ನೀಡಿದೆ. ಶಬರಿಮಲೆ ವಿವಾದ ತೀರ್ಪು, ಬಿಕಿನಿ ತೊಟ್ಟ ನಟಿಗೆ ನೆಟ್ಟಿಗರ ಕ್ಲಾಸ್, ವಿರಾಟ್ ಕೊಹ್ಲಿ ಖಿನ್ನತೆ ಸೇರಿದಂತೆ ನವೆಂಬರ್ 14ರಂದು ಗಮನಸೆಳೆದ ಟಾಪ್ 10 ಸುದ್ದಿ ಇಲ್ಲಿವೆ.


1) ಅನರ್ಹ ಶಾಸಕ ಶಂಕರ್‌ಗೆ ಟಿಕೆಟ್ ಕಟ್: ರಾಣೇಬೆನ್ನೂರ್‌ಗೆ ಬಿಜೆಪಿಯಿಂದ ಅಚ್ಚರಿ ಅಭ್ಯರ್ಥಿ

Latest Videos

undefined

ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಗೆ 13 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. 15 ರಲ್ಲಿ 13 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದ್ದು, ಇನ್ನುಳಿದ ಎರಡು ಕ್ಷೇತ್ರಗಳಿಗೆ ಪೆಡ್ಡಿಂಗ್ ಇಟ್ಟಿದೆ.

2) ಕರ್ನಾಟಕ ಉಪ ಚುನಾವಣೆ : 11 ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ರಾಜ್ಯದಲ್ಲಿ 15 ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಗೆ 11 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಜೆಡಿಎಸ್ ಬಿಡುಗಡೆ ಮಾಡಿದೆ. ಡಿಸೆಂಬರ್ 5 ರಂದು ರಾಜ್ಯದಲ್ಲಿ ಉಪ ಚುನಾವಣೆ ನಡೆಯಲಿದೆ. 

3) ನಾಲಿಗೆ ಮೇಲೆ ಬಿಗಿ ಹಿಡಿತವಿರಲಿ: ಮೋದಿ ಟೀಕಿಸಿದ್ದ ರಾಹುಲ್‌ಗೆ ಸುಪ್ರೀಂ ಛಾಟಿ

ರಫೇಲ್ ಡೀಲ್ ವಿಷಯದಲ್ಲಿ ಮೋದಿ ಟೀಕಿಸಿ 'ಚೌಕೀದಾರ್‌ ಚೋರ್‌ ಹೈ' ಎಂದಿದ್ದ ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ಛಾಟಿ ಬೀಸಿದೆ. ' ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ರಾಹುಲ್ ಗಾಂಧಿಗೆ ಖಡಕ್ ವಾರ್ನಿಂಗ್ ನೀಡಿದೆ. 

4) ರಫೇಲ್ ಹಗರಣದ ಅರ್ಜಿ ವಜಾ: ಮೋದಿಗೆ ಕ್ಲೀನ್ ಚಿಟ್, ರಾಹುಲ್‌ಗೆ ಮುಖಭಂಗ!

ಬಹು ವಿವಾದಿತ ರಫೇಲ್ ಖರೀದಿ ಹಗರಣ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಪ್ರಧಾನಿ ಮೋದಿಗೆ ಮತ್ತೆ ಕ್ಲೀನ್ ಚಿಟ್‌ ಸಿಕ್ಕಿದ್ದು, ಕೈಗೆ ತೀವ್ರ ಮುಖಭಂಗವಾಗಿದೆ. ಇಷ್ಟೇ ಅಲ್ಲದೇ ಕೈ ನಾಯಕ ರಾಹುಲ್ ಗಾಂಧಿಗೆ ಎಚ್ಚರಿಕೆಯಿಂದಿರುವಂತೆ ಸುಪ್ರೀಂ ಕೋರ್ಟ್ ವಾರ್ನಿಂಗ್ ನೀಡಿದೆ.


5) ಶಬರಿಮಲೆ ವಿವಾದ: ಮಹಿಳೆಯರ ಪ್ರವೇಶಕ್ಕಿಲ್ಲ ತಡೆ, ಆದರೆ ಇದೇ ತೀರ್ಪು ಅಂತಿಮವಲ್ಲ...

ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಉದ್ಭವಿಸಿರುವ ವಿವಾದ ನಿರೀಕ್ಷೆಯಂತೆ ಬಗೆ ಹರಿಯಲಿಲ್ಲ.  ಈಗಾಗಲೇ ನೀಡಿದ ತೀರ್ಪಿನಂತೆ ಎಲ್ಲಾ ವಯೋಮಾನದ ಮಹಿಳೆಯರು ದೇವಸ್ಥಾನಕ್ಕೆ ಪ್ರವೇಶಿಸಲು ಯಾವುದೇ ನಿರ್ಬಂಧವಿರುವುದಿಲ್ಲ. ಮತ್ತೆ ಏಳು ಸದಸ್ಯರ ಪೀಠ ತೀರ್ಪು ನೀಡುವ ತನಕ ಇದೇ ತೀರ್ಪು ಮಾನ್ಯ ಪಡೆಯಲಿದೆ.


6) 2014ರಲ್ಲಿ ಖಿನ್ನತೆ ಎದುರಿಸಿದ್ದೆ: ಸತ್ಯ ಒಪ್ಪಿಕೊಂಡ ಕೊಹ್ಲಿ!

‘ಪ್ರತಿಯೊಬ್ಬ ಆಟಗಾರ ಸಹ ಮಾತನಾಡುವ ಅಗತ್ಯವಿದೆ. ಗ್ಲೆನ್‌ ಮಾಡಿರುವುದು ಅಸಾಮಾನ್ಯ ಕೆಲಸ, ಎಲ್ಲಾ ಕ್ರಿಕೆಟಿಗರಿಗೂ ಮ್ಯಾಕ್ಸ್‌ವೆಲ್‌ ಮಾದರಿ  ಆಗಿದ್ದಾರೆ. 2014ರ ಇಂಗ್ಲೆಂಡ್‌ ಪ್ರವಾಸದಲ್ಲಿ ಲಯ ಕಳೆದುಕೊಂಡಿದ್ದ ಕಾರಣ ಖಿನ್ನತೆಗೆ ಒಳಗಾಗಿದ್ದೆ. ಆ ಸಂದರ್ಭದಲ್ಲಿ ಏನು ಮಾಡಬೇಕೆಂದು ತಿಳಿ​ಯ​ಲಿಲ್ಲ. ಎಲ್ಲವು ಮುಗಿದು ಹೋಯಿತು ಎಂದೆ​ನಿ​ಸಿ​ತ್ತು’ ಎಂದು ಕೊಹ್ಲಿ ಹೇಳಿ​ದರು.

7) ಒಂದಾಗಿಯೇ ಬಿಟ್ರು ಸ್ಯಾಂಡಲ್‌ವುಡ್ ರ..ರ..; ರಶ್ಮಿಕಾ ಪರ ನಿಂತ ರಚಿತಾ ರಾಮ್

ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ರಶ್ಮಿಕಾ ಮಂದಣ್ಣ ಒಂದಾಗಿದ್ದಾರೆ.  ಸೋಷಿಯಲ್ ಮೀಡಿಯಾದಲ್ಲಿ ನಟಿಯರ ಮೇಲೆ ಆಗುತ್ತಿರುವ ಟ್ರೋಲ್ ಗಳ ಬಗ್ಗೆ ಮಾತನಾಡಿದ್ದಾರೆ. ಕೆಲದಿನಗಳ ಹಿಂದೆ ರಶ್ಮಿಕಾ ಬಾಲ್ಯದ ಫೋಟೋಗಳಿಗೆ ಅಸಭ್ಯವಾಗಿ ಕಮೆಂಟ್ ಮಾಡಿದವರ ಮೇಲೆ ಗರಂ ಆಗಿದ್ದಾರೆ.

8) ಬಿಕಿನಿ ಓಕೆ, ಅದರ ಮೇಲೆ 'ಹರೇ ರಾಮ್'ಯಾಕೆ? ನಟಿಗೆ ನೆಟ್ಟಿಗರಿಂದ ಕ್ಲಾಸ್!

ಟೈಗರ್ ಶ್ರಾಫ್, ಹೃತಿಕ್ ರೋಷನ್ ಜೊತೆ ಕಾಣಿಸಿಕೊಂಡಿದ್ದ ನಟಿ ವಾಣಿ ಕಪೂರ್ ಏನೋ ಮಾಡಲು ಹೋಗಿ ಇನ್ನೇನೋ ಎಡವಟ್ಟು ಮಾಡಿಕೊಂಡಿದ್ದಾರೆ. ಇಂತಹ ಅಚಾತುರ್ಯಗಳನ್ನು ಬೇಕು ಅಂತಲೇ ಮಾಡುತ್ತಾರೋ, ಗೊತ್ತಾಗದೇ ಮಾಡುತ್ತಾರೋ ಆದರೆ ವೈರಲ್ ಮಾತ್ರ ಆಗಿಬಿಡುತ್ತದೆ. 

9) ಮರಿಯನ್ನು ಮನುಷ್ಯರು ಮುಟ್ಟಿದ್ರೆ ಅಮ್ಮಾ ಹಕ್ಕಿ ಅದನ್ನು ದೂರ ಮಾಡುತ್ತಾ?

ಪ್ರಾಣಿಗಳ ಕುರಿತು ಒಂದುಷ್ಟು ಹಸಿಸುಳ್ಳುಗಳನ್ನು ಹಿರಿಯರು ಸಣ್ಣದರಿಂದ ಹೇಳಿಕೊಂಡು ಬಂದು ನಮ್ಮನ್ನು ನಂಬಿಸಿದ್ದಾರೆ. ಅವರು ಕೂಡಾ ಹಾಗೆಯೇ ನಂಬಿದ್ದಾರೆ. ಆದರೆ, ವಿಜ್ಞಾನ ಮಾತ್ರ ಅದೆಲ್ಲ ಸುಳ್ಳೆನ್ನುತ್ತಿದೆ. 

10) ಡಿ.1 ರಿಂದ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯ; ತಿಳಿದುಕೊಳ್ಳಿ ಡಿಜಿಟಲ್ ಟೋಲ್!

ಟೋಲ್‌ಗೇಟ್ ಸಂಪೂರ್ಣ ಡಿಜಿಟಲೀಕರಣವಾಗುತ್ತಿದೆ. ಡಿಸೆಂಬರ್ 1 ರಿಂದ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯ. ಫಾಸ್ಟ್ ಇಲ್ಲದಿದ್ದರೆ ಟೋಲ್‌ಗೇಟ್ ದಾಟಲು ಸಾಧ್ಯವಿಲ್ಲ. ನೂತನ ನಿಯಮ ಹಾಗೂ ಫಾಸ್ಟ್‌ಟ್ಯಾಗ್ ಅಳವಡಿಸುವುದು ಹೇಗೆ? ಈ ಸ್ಟೋರಿಯಲ್ಲಿದೆ ವಿವರ.

click me!