'ಮುಚ್ಚಿದ ಕೋಣೆಯಲ್ಲಾದ ಒಪ್ಪಂದ ಅಮಿತ್ ಶಾ ಪಿಎಂ ಮೋದಿಯಿಂದ ಮುಚ್ಚಿಟ್ರು'

By Web DeskFirst Published Nov 14, 2019, 4:32 PM IST
Highlights

ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಗುದ್ದಾಟ| ರಾಜಕೀಯ ಬಿಕ್ಕಟ್ಟಿನ ನಡುವೆ ನಾಯಕರ ವಾಗ್ದಾಳಿ| ನಮ್ಮ ನಡುವೆ ನಡೆದಿದ್ದ ಒಪ್ಪಂದವನ್ನು ಅಮಿತ್ ಶಾ ಮೋದಿಗೆ ತಿಳಿಸಲೇ ಇಲ್ಲ

ಮುಂಬೈ[ಅ.14]: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಉದ್ಭವಿಸಿರುವ ರಾಜಕೀಯ ಪ್ರಕ್ಷುಬ್ಧತೆ ವಿಚಾರವಾಗಿ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೀಡಿರುವ ಹೇಳಿಕೆ ವಿರುದ್ಧ ಶಿವಸೇನೆ ನಾಯಕ ಸಂಜಯ್ ರಾವತ್ ತಿರುಗಿ ಬಿದ್ದಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಸಂಜಯ್ ರಾವತ್ 'ಬಿಜೆಪಿ ಜೊತೆ ಅದರಲ್ಲೂ ವಿಶೇಷವಾಗಿ ಅಮಿತ್ ಶಾರೊಂದಿಗೆ ಶಿವಸೇನೆ ಮಾಡಿದ ಒಪ್ಪಂದವನ್ನು ಪ್ರಧಾನಿ ಮೋದಿಗೆ ತಿಳಿಸಿಲ್ಲ. ಪ್ರಧಾನಿ ಮೋದಿ ತಮ್ಮೆಲ್ಲಾ ಭಾಷಣಗಳಲ್ಲೂ ದೇವೇಂದ್ರ ಫಡ್ನವೀಸ್ ಮುಂದಿನ ಮುಖ್ಯಮಂತ್ರಿಯಾಗುತ್ತಾರೆಂದು ತಿಳಿದಿದ್ದರೆಂದು ಅಮಿತ್ ಶಾ ಹೇಳುತ್ತಾರೆ. ಹಾಗಾದ್ರೆ ಉದ್ಧವ್ ಠಾಕ್ರೆ ಕೂಡಾ ತಮ್ಮೆಲ್ಲಾ ಭಾಷಣಗಳಲ್ಲಿ ಎಲ್ಲರಿಗೂ ಸಮಾನ ಸ್ಥಾನ ನೀಡಲಾಗುತ್ತದೆ ಎಂದಿದ್ದರು' ಎಂದು ಹೇಳಿದ್ದಾರೆ.

ಆ ಕೋಣೆ ಬಾಳಾ ಸಾಹಬ್ ಠಾಕ್ರೆಯದ್ದಾಗಿತ್ತು

ಇಷ್ಟೇ ಅಲ್ಲದೇ 'ಅಮಿತ್ ಶಾ ಶಿವಸೇನೆಯೊಂದಿಗೆ ನಡೆಸಿದ್ದ ಒಪ್ಪಂದ ಮಾಮೂಲಿ ಕೊಣೆಯಲ್ಲಿ ನಡೆದಿರಲಿಲ್ಲ. ಅದು ಬಾಳಾ ಸಾಹೆಬ್ ಠಾಕ್ರೆಯದ್ದಾಗಿತ್ತು. ನಮ್ಮ ಪಾಲಿಗೆ ಅದೊಂದು ಕೇವಲ ಕೋಣೆಯಲ್ಲ, ಅದೊಂದು ಮಂದಿರ. ಯಾರಾದರೂ ಇಂತಹ ಯಾಗವುದೇ ಮಾತುಕತೆ ನಡೆದಿರಲಿಲ್ಲ ಎಂಬ ಹೇಳಿಕೆ ನೀಡಿದ್ದಾರೆಂದಾದರೆ ಅದು ಬಾಳಾ ಸಾಹೆಬ್ ಠಾಕ್ರೆಗೆ ಮಾಡಿದ ಅವಮಾನ' ಎಂದಿದ್ದಾರೆ.

ಬಿಜೆಪಿಯನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿರುವ ಸಂಜಯ್ ರಾವತ್ 'ಸದ್ಯ ಈ ವಿಚಾರ ಮಹಾರಾಷ್ಟ್ರದ ಸ್ವಾಭಿಮಾನದ ಸವಾಲಾಗಿ ಮಾರ್ಪಾಡಾಗಿದೆ. ಪ್ರಾಣ ಹೋದರೂ ಕೊಟ್ಟ ಮಾತು ಉಳಿಯುತ್ತದೆ. ರಾಜಕೀಯ ಅಂದ್ರೆ ನಮಗೆ ವ್ಯಾಪಾರವಲ್ಲ. ಕೋಣೆಯಲ್ಲಿ ನಡೆದ ಒಪ್ಪಂದದ ವಿಚಾರ ಪ್ರಧಾನ ಮಂತ್ರಿ ತಿಳಿದಿದ್ದರೆ ಪರಿಸ್ಥಿತಿ ಇಷ್ಟು ಹದಗೆಡುತ್ತಿರಲಿಲ್ಲ' ಎಂದಿದ್ದಾರೆ.

ಅಮಿತ್ ಶಾ ಹೇಳಿದ್ದೇನು?

ಮಹಾರಾಷ್ಟ್ರದಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದ ಅಮಿತ್ ಶಾ 'ನಾವು ಶಿವಸೇನೆಯೊಂದಿಗೆ ಸರ್ಕಾರ ರಚಿಸಲು ತಯಾರಿದ್ದೆವು. ಚುನಾವಣಾ ಪ್ರಚಾರದ ಸಂದರ್ಭದಲ್ಲೂ ಪ್ರಧಾನಿ ಮೋದಿ ಹಾಗೂ ನಾನು ಗೆದ್ದರೆ ದೇವೇಂದ್ರ ಫಡ್ನವೀಸ್ ಮಹಾರಾಽ್ಟ್ರದ ಮುಖ್ಯಮಂತ್ರಿಯಾಗುತ್ತಾರೆ ಎಂದು ಘೋಷಿಸಿದ್ದೆವು. ಒಂದು ವೇಳೆ ಈ ಕುರಿತು ಅಸಮಾಧಾನ ಇತ್ತು ಎಂದರೆ ಮೊದಲೇ ತಿಳಿಸಬೇಕಿತ್ತು. ಆದರೀಗ ಹೊಸ ಷರತ್ತುಗಳನ್ನು ವಿಧಿಸುತ್ತಿದ್ದಾಋಎ. ಅವುಗಳನ್ನು ಒಪ್ಪಲು ಸಾಧ್ಯವಿಲ್ಲ' ಎಂದಿದ್ದರು.

click me!