ಒಕ್ಕಲಿಗರ ನಡುವೆ ಬಿಗ್‌ಫೈಟ್, ಸೆಕ್ಸ್ ವಿಡಿಯೋ ಇದ್ರೆ ಪ್ಲೀಸ್ ಡಿಲೀಟ್; ನ.30ರ ಟಾಪ್ 10 ಸುದ್ದಿ!

By Web Desk  |  First Published Nov 30, 2019, 5:26 PM IST

ಉಪಚುನಾವಣೆ ಕಾವು ಹೆಚ್ಚಾಗುತ್ತಿದೆ. ಈ ಸಮರದಲ್ಲಿ ಒಕ್ಕಲಿಗರ  ನಡುವೆ ಜಿದ್ದಾಜಿದ್ದಿ ಎರ್ಪಟ್ಟಿದೆ. ಇತ್ತ ಹನಿಟ್ರ್ಯಾಪ್‌ ಪ್ರಕರಣ ತನಿಖೆಯಿಂದ ಸ್ಫೋಟಕ ಮಾಹಿತಿ ಹೊರಬೀಳುತ್ತಿದೆ. ಇದೀಗ ಶಾಸಕರು ಪೊಲೀಸರಿಗೆ ಕರೆ ಮಾಡಿ ನಮ್ಮ ಸೆಕ್ಸ್ ವಿಡಿಯೋ ಡಿಲೀಟ್ ಮಾಡಲು ಮನವಿ ಮಾಡುತ್ತಿದ್ದಾರೆ. ಉದ್ಧವ್ ಠಾಕ್ರೆ ಸರ್ಕಾರ ಸೇಫ್, ರೋಹಿತ್ ಶರ್ಮಾ ವಾರ್ಷಿಕ ಆದಾಯ ಸೇರಿದಂತೆ ನವೆಂಬರ್ 30ರ ಟಾಪ್ 10 ಸುದ್ದಿ ಇಲ್ಲಿವೆ.


1) ಒಕ್ಕಲಿಗರ ನಡುವೆ ಜಿದ್ದಾಜಿದ್ದಿ ಕದನ; 3 ಪಕ್ಷಗಳಿಂದ ಒಕ್ಕಲಿಗ ಅಭ್ಯರ್ಥಿಗಳು ಕಣಕ್ಕೆ.

Tap to resize

Latest Videos

undefined

ಯಶವಂತಪುರ ಒಕ್ಕಲಿಗ ಮತದಾರರೇ ನಿರ್ಣಾಯಕರಾಗಿರುವ ಕ್ಷೇತ್ರ. ಮೂರೂ ಪ್ರಮುಖ ಪಕ್ಷಗಳಿಂದ ಒಕ್ಕಲಿಗ ಅಭ್ಯರ್ಥಿಗಳೇ ಎದುರಾಳಿಗಳಾಗಿದ್ದಾರೆ. ಹೀಗಾಗಿ ‘ಒಕ್ಕಲಿಗರ ಕದನ’ ಎಂದೇ ಬಿಂಬಿತವಾಗಿರುವ ಯಶವಂತಪುರ ಉಪ ಚುನಾವಣಾ ಕದನದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.


2) ನಮ್ಮ ಸೆಕ್ಸ್ ವಿಡಿಯೋ ಇದ್ರೆ ಡಿಲೀಟ್ ಮಾಡಿ ಪ್ಲೀಸ್! ಪೊಲೀಸರಿಗೆ 'ಅವರು' ದುಂಬಾಲು

ಹನಿಟ್ರ್ಯಾಪ್‌ ಪ್ರಕರಣವನ್ನು ಬಗೆದಷ್ಟು ಹೊಸ  ಮಾಹಿತಿಗಳು ಹೊರಬೀಳುತ್ತಿವೆ. ಬೆಡ್‌ರೂಂ ಸೀನ್ ವೈರಲ್ ಆದ ಬೆನ್ನಲ್ಲೇ, ಪೊಲೀಸರು ಬೀಸಿದ ಬಲೆಗೆ ನಾಲ್ವರು ಬಿದ್ದಿದ್ದಾರೆ. ಇನ್ನೊಂದು ಕಡೆ ಸಿಸಿಬಿ ಪೊಲೀಸರಿಗೆ ಹೊಸ ತಲೆನೋವು ಶುರುವಾಗಿದೆ. ಪ್ರಕರಣ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ, ಹನಿಟ್ರ್ಯಾಪ್‌ಗೊಳಗಾದ ಶಾಸಕರು ಪೊಲೀಸರಿಗೆ ಪೋನ್ ಮಾಡಿ, ನಮ್ಮ ವಿಡಿಯೋ ಇದೆಯಾ ಅಂತ ವಿಚಾರಿಸುತ್ತಿದ್ದಾರೆ. 


3) ಕೆನಡಾದಿಂದ ತರಿಸಿ ಇದನ್ನ ಅಕ್ರಮವಾಗಿ ಆನ್‌ಲೈನ್‌ನಲ್ಲಿ ಮಾರ್ತಾರೆ!

  ಆನ್‌ಲೈನ್‌ ಮೂಲಕ ಸಾರ್ವಜನಿಕರಿಗೆ ದುಬಾರಿ ಮೌಲ್ಯದ ‘ವಿದೇಶಿ ಬ್ರ್ಯಾಂಡ್‌’ ಗಾಂಜಾ ಮಾರಾಟ ಮಾಡುತ್ತಿದ್ದ ಅಂತಾರಾಷ್ಟ್ರೀಯ ಡ್ರಗ್ಸ್‌ ಜಾಲದ ಪೂರೈಕೆದಾರ ಸೇರಿ ಇಬ್ಬರನ್ನು ಸೆರೆಹಿಡಿದ ಸಿಸಿಬಿ ಪೊಲೀಸರು, 1 ಕೋಟಿ ರು. ಮೌಲ್ಯದ ವಸ್ತು ಜಪ್ತಿ ಮಾಡಿದ್ದಾರೆ.


4) ಉದ್ಧವ್ ಬಹುಮತ ಸಾಬೀತುಪಡಿಸಿದರು: ದಂಡು ಕಟ್ಕೊಂಡು ಫಡ್ನವೀಸ್ ಹೊರ ನಡೆದರು!

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನೆ, ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟ ಬಹುಮತ ಸಾಬೀತುಪಡಿಸಿದ್ದು, ಬಿಜೆಪಿ ಕಲಾಪ ಬಹುಷ್ಕರಿಸಿ ಹೊರ ನಡೆದಿದೆ. ಬಹುಮತ ಸಾಬೀತಿಗೂ ಮುನ್ನ ಹಂಗಾಮಿ ಸ್ಪೀಕರ್ ಬದಲಿಸಿದ ನಡೆಯನ್ನು ಬಿಜೆಪಿ ಖಂಡಿಸಿದೆ.


5) ‘ದೆವ್ವ’ವನ್ನು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗ ಥಳಿಸಿದ ಗ್ರಾಮಸ್ಥರು!

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಸುತ್ತಮುತ್ತ ಪ್ರದೇಶದಲ್ಲಿ ಶ್ರೀಗಂಧದ ಮರಗಳ ಕಳ್ಳತನಕ್ಕೆ ಬಂದಿದ್ದ ಹಾಸನ ಜಿಲ್ಲೆ ಬೇಲೂರು ತಾಲೂಕಿನ 'ದೆವ್ವ'ವನ್ನು ಮರಕ್ಕೆ ಕಟ್ಟಿ ಹಾಕಿ ಹೊಡೆಯುವ ಮೂಲಕ ಸ್ತಳೀಯರು ಪಾಠ ಕಲಿಸಿದ್ದಾರೆ. 

6) ರೋಹಿತ್ ವಾರ್ಷಿಕ ಆದಾಯ ರಿಪೋರ್ಟ್ ಬಹಿರಂಗ!

ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಅಭ್ಯಾಸ ಆರಂಭಿಸಿದ್ದಾರೆ. ಭಾರತ ತಂಡದ ಕೀ ಪ್ಲೇಯರ್ ಬ್ರ್ಯಾಂಡ್ ವ್ಯಾಲ್ಯೂ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ. 2019ರ ವಿಶ್ವಕಪ್ ಟೂರ್ನಿ ಬಳಿಕ ರೋಹಿತ್ ಆದಾಯ ಗಳಿಕೆಯಲ್ಲೂ ಗಣನೀಯ ಏರಿಕೆ ಕಂಡಿದೆ.

7) ಖುಷ್ಬು ಜೊತೆ ಚಿರಂಜೀವಿ ಸಖತ್ ಡ್ಯಾನ್ಸ್; ವಿಡಿಯೋ ವೈರಲ್

ಗೆಟ್ ಟು ಗೆದರ್ ಪಾರ್ಟಿಯಲ್ಲಿ ಚಿರಂಜೀವಿ ಖುಷ್ಬು ಜೊತೆ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಚಿರಂಜೀವಿ ಸಿನಿಮಾ ಗರಾನಾ ಮೊಗಡು ಸಿನಿಮಾದ 'ಬಂಗಾರು ಕೊಡಿಪೆಟ್ಟಾ ಹಾಡಿಗೆ ಸ್ಟಪ್ ಹಾಕಿದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

8) ರಿಲಯನ್ಸ್ ಜಿಯೋ ತಂದಿದೆ ಹೊಸ ಪ್ರಿಪೇಯ್ಡ್ ಪ್ಲಾನ್: ಅತೀ ಅಗ್ಗ, ಡೇಟಾ ಬೇಜಾನ್

ಇತ್ತೀಚೆಗೆ ಕಾಲ್‌ಗಳಿಗೆ ಚಾರ್ಜ್ ಮಾಡುವ ಮೂಲಕ ಬಳಕೆದಾರರ ಮುನಿಸಿಗೆ ಕಾರಣವಾಗಿದ್ದ  ರಿಲಯನ್ಸ್ ಜಿಯೋ, ತನ್ನ  ಇಂಟರ್ನೆಟ್  ಬಳಕೆದಾರರಿಗೆ ಭರ್ಜರಿ ಆಫರ್‌ ಪ್ರಕಟಿಸಿದೆ. ಜಿಯೋ ಫೈಬರ್ ಬಳಕೆದಾರರು ಇನ್ಮುಂದೆ ಡೇಟಾ ಮುಗಿದರೆ ಚಿಂತೆ ಮಾಡುವ ಅಗತ್ಯವಿಲ್ಲ.

9) 2021 ರಿಂದ ಹಾಲ್ಮಾರ್ಕ್ ಇರದ ಚಿನ್ನದ ಮಾರಾಟ ಬಂದ್!

ಹಾಲ್ಮಾರ್ಕ್ ಇರದ ಚಿನ್ನದ ಮಾರಾಟವನ್ನು 2021ರಿಂದ ಸಂಪೂರ್ಣವಾಗಿ ನಿಷೇಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ. 2011ರ ಜನೆವರಿ 15ರ ಬಳಿಕ ಹಾಲ್ಮಾರ್ಕ್ ಇರದ ಚಿನ್ನದ ಮಾರಾಟ ರದ್ದಾಗಲಿದೆ.

10) 21 ಸಾವಿರಕ್ಕೆ ಬುಕ್ ಮಾಡಿ ಟಾಟಾ ಅಲ್ಟ್ರೋಜ್ ಕಾರು!

ಬಹುನಿರೀಕ್ಷಿತ ಟಾಟಾ ಅಲ್ಟ್ರೋಝ್ ಕಾರು ಬಿಡುಗಡೆಗ ಸಜ್ಜಾಗಿದೆ. 2020ರ ಜನವರಿಯಲ್ಲಿ ಟಾಟಾ ಅಲ್ಟ್ರೋಝ್ ಕಾರು ಮಾರುಕಟ್ಟೆ ಪ್ರವೇಶಿಸಲಿದೆ. ನೂತನ ಕಾರು ಲಾಂಚ್‌ಗೆ ಇನ್ನೊಂದು ತಿಂಗಳು ಮಾತ್ರ ಬಾಕಿ. ಹೀಗಾಗಿ ಕೆಲ ಡೀಲರ್‌ಗಳು ಈಗಾಗಲೇ ಪ್ರೀ ಬುಕಿಂಗ್ ಆರಂಭಿಸಿದ್ದಾರೆ. 21,000 ರೂಪಾಯಿ ಪಾವತಿಸಿ ನೂತನ ಅಲ್ಟೋಜ್ ಕಾರು ಬುಕ್ ಮಾಡಬಹುದು.

click me!