
ನವದೆಹಲಿ (ಆ.31): ಕೇಂದ್ರ ಸಚಿವ ಸಂಪುಟ ಪುನರ್ ರಚನೆಯಲ್ಲಿ ಮಾಜಿ ಐಎಎಸ್ ಅಧಿಕಾರಿ ಸುನೀಲ್ ಅರೋರ ಮುಖ್ಯ ಚುನಾವಣಾಧಿಕಾರಿಯಾಗಿ ನೇಮಕವಾಗಿದ್ದು, ಸಿಎಜಿಯಾಗಿ ರಾಜೀವ್ ಮೆಹರ್ಷಿ ನೇಮಕಗೊಂಡಿದ್ದಾರೆ.
ಜುಲೈನಲ್ಲಿ ನಾಸಿಂ ಜೈದಿ ನಿವೃತ್ತಿಯಿಂದ ತೆರವಾಗಿದ್ದ ಸ್ಥಾನಕ್ಕೆ ಸುನೀಲ್ ಅರೋರ ನೇಮಕಗೊಂಡಿದ್ದಾರೆ. ಓಂ ಪ್ರಕಾಶ್ ರಾವತ್ ಮತ್ತು ಅಚಲ್ ಕುಮಾರ್ ಜೋತಿ ಸಹ ಚುನಾವಣಾಧಿಕಾರಿಯಾಗಿ ಸುನೀಲ್ ಅರೋರಾಗೆ ಸಹಕಾರ ನೀಡಲಿದ್ದಾರೆ. ಸುನೀಲ್ ಅರೋರರವರು ಮಾಹಿತಿ ಮತ್ತು ತಂತ್ರಜ್ಞಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದವರು.
ಸಿಎಜಿಯಾಗಿ ನೇಮಕಗೊಂಡಿರುವ ರಾಜೀವ್ ಮೆಹರ್ಷಿ ಗೃಹ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.