ಮೊದಲ ಖಾಸಗಿ ನಿರ್ಮಿತ ಐಆರ್’ಎನ್’ಎಸ್’ಎಸ್-1ಎಚ್ ಉಪಗ್ರಹ ಉಡಾವಣೆ ವಿಫಲ

Published : Aug 31, 2017, 08:59 PM ISTUpdated : Apr 11, 2018, 12:54 PM IST
ಮೊದಲ ಖಾಸಗಿ ನಿರ್ಮಿತ ಐಆರ್’ಎನ್’ಎಸ್’ಎಸ್-1ಎಚ್  ಉಪಗ್ರಹ ಉಡಾವಣೆ ವಿಫಲ

ಸಾರಾಂಶ

ಮೊದಲ ಖಾಸಗಿ ವಲಯ ನಿರ್ಮಿತ ಐಆರ್’ಎನ್’ಎಸ್’ಎಸ್-1ಎಚ್  ಉಪಗ್ರಹವನ್ನು ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗಿದ್ದು, ಆದರೆ ವಿಫಲವಾಗಿದೆ. ಉಪಗ್ರಹದ ಬಿಸಿಯಾದ ಹೊರಪದರ ಬೇರ್ಪಡದೇ ಇರುವುದರಿಂದ ಉಡಾವಣೆ ವಿಫಲವಾಗಿದೆ ಎಂದು ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್ ಹೇಳಿದ್ದಾರೆ.

ನವದೆಹಲಿ (ಆ.31): ಮೊದಲ ಖಾಸಗಿ ವಲಯ ನಿರ್ಮಿತ ಐಆರ್’ಎನ್’ಎಸ್’ಎಸ್-1ಎಚ್  ಉಪಗ್ರಹವನ್ನು ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗಿದ್ದು, ಆದರೆ ವಿಫಲವಾಗಿದೆ. ಉಪಗ್ರಹದ ಬಿಸಿಯಾದ ಹೊರಪದರ ಬೇರ್ಪಡದೇ ಇರುವುದರಿಂದ ಉಡಾವಣೆ ವಿಫಲವಾಗಿದೆ ಎಂದು ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್ ಹೇಳಿದ್ದಾರೆ.

ಯಾವ ಹಂತದಲ್ಲಿಯೂ ಸಮಸ್ಯೆ ಇರಲಿಲ್ಲ. ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ಉಡಾವಣೆ ಸಂದರ್ಭದಲ್ಲಿ ಬಿಸಿಯಾದ ಹೊರಪದರಗಳು ಬೇರ್ಪಡಲೇ ಇಲ್ಲ. ಹಾಗಾಗಿ ಉಪಗ್ರಹ ಕಕ್ಷೆ ಸೇರುವಲ್ಲಿ ವಿಫಲವಾಯಿತು ಎಂದು ಕಿರಣ್ ಕುಮಾರ್ ಹೇಳಿದ್ದಾರೆ.

ಐಆರ್’ಎನ್’ಎಸ್’ಎಸ್-1ಎಚ್  ಉಪಗ್ರಹವನ್ನು ಬೆಂಗಳೂರು ಮೂಲದ ಅಲ್ಫಾ ಡಿಸೈನ್ ಟೆಕ್ನಾಲಜಿ 8 ತಿಂಗಳಿಂದ ತಯಾರು ಮಾಡಿದ್ದು ಉಪಗ್ರಹದ ಒಟ್ಟು ತೂಕ 1425 ಕೆಜಿ ಇದೆ. ಇಸ್ರೋದ 70 ವಿಜ್ಞಾನಿಗಳು ಇದರ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು. ಉಪಗ್ರಹದ ಉಡಾವಣೆ ದೃಶ್ಯ:-

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು: 2 ಲಕ್ಷ ಬೆಲೆಯ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ!
ವಿಮಾನದಲ್ಲಿ ಹೃದಯಾಘಾತ- ಅಮೆರಿಕ ಪ್ರಜೆಯ ಜೀವ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್