ತ್ರಿವಳಿ ತಲಾಖ್ ವಿರುದ್ಧ ಸುಪ್ರೀಂ'ನಲ್ಲಿ ಹೋರಾಟ ನಡೆಸಿದ್ದ ಮಹಿಳೆಯ ಮಕ್ಕಳು ನಾಪತ್ತೆ

By Suvarna Web DeskFirst Published Aug 31, 2017, 8:42 PM IST
Highlights

ಸುಪ್ರೀಂ ಕೋರ್ಟ್'ನಲ್ಲಿ ಆಗಸ್ಟ್ 22 ರಂದು ತ್ರಿವಳಿ ತಲಾಖ್ ವಿರುದ್ಧ ತೀರ್ಪು ಬಂದ ನಂತರ ತನ್ನ ಮಾಜಿ ಪತಿ ಮುರ್ತಾಜಾ ಅನ್ಸಾರಿ ಹಾಗೂ ಆತನ ಅತ್ತಿಗೆ ನನ್ನನ್ನು ಮನೆಯಿಂದ ಓಡಿಸಲು ಯತ್ನಿಸುತ್ತಿದ್ದಾರೆ. ಇಬ್ಬರ ವಿರುದ್ಧವೂ ಇಶ್ರಾತ್ ಜಹಾನ್ ಗೋಲ್'ಬಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಕೋಲ್ಕತ್ತಾ(ಆ.31): ತ್ರಿವಳಿ ತಲಾಖ್ ವಿರುದ್ಧ ಸುಪ್ರೀಂ ಕೋರ್ಟ್'ನಲ್ಲಿ ಹೋರಾಟ ನಡೆಸಿ ಜಯಿಸಿದ್ದ ಮಹಿಳೆ ಇಶ್ರಾತ್ ಜಹಾನ್ ಇಬ್ಬರು ಅಪ್ರಾಪ್ತ ಮಕ್ಕಳು ನಾಪತ್ತೆಯಾಗಿದ್ದು, ತನ್ನ ಮಾಜಿ ಪತಿಯೇ ಮಕ್ಕಳ ಅಪಹರಣಕ್ಕೆ ಕಾರಣ ಎಂದು ಆರೋಪಿಸಿದ್ದಾಳೆ.

ಸುಪ್ರೀಂ ಕೋರ್ಟ್'ನಲ್ಲಿ ಆಗಸ್ಟ್ 22 ರಂದು ತ್ರಿವಳಿ ತಲಾಖ್ ವಿರುದ್ಧ ತೀರ್ಪು ಬಂದ ನಂತರ  ತನ್ನ ಮಾಜಿ ಪತಿ ಮುರ್ತಾಜಾ ಅನ್ಸಾರಿ ಹಾಗೂ ಆತನ ಅತ್ತಿಗೆ ನನ್ನನ್ನು ಮನೆಯಿಂದ ಓಡಿಸಲು ಯತ್ನಿಸುತ್ತಿದ್ದಾರೆ. ಇಬ್ಬರ ವಿರುದ್ಧವೂ ಇಶ್ರಾತ್ ಜಹಾನ್ ಗೋಲ್'ಬಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಇಶ್ರಾತ್ ಹೌರಾ ಪಟ್ಟಣದ ಪಿಲ್'ಖಾನಾ ಪ್ರದೇಶದಲ್ಲಿ ಪುತ್ರ  ಶೈಸ್ತಾ ಕಟೂನ್(13), ಪುತ್ರ ಜಾಹಿದ್ ಆಲಂ(7) ಜೊತೆ ವಾಸಿಸುತ್ತಿದ್ದಾಳೆ. ಇಬ್ಬರು ಬೆಳಿಗ್ಗೆ ಮನೆಯಿಂದ ವಾಪಸ್ ಹೋದವರು ಮನೆಗೆ ಹಿಂತಿರುಗಿಲ್ಲ. ತನ್ನ ಮಾಜಿ ಪತಿ ದುಬೈ'ನಲ್ಲಿ ವಾಸಿಸುತ್ತಿದ್ದು ಆತನ 2ನೇ ಪತ್ನಿ ಕೋಲ್ಕತ್ತಾದಲ್ಲಿ ವಾಸಿಸುತ್ತಿದ್ದಾಳೆ. ತನ್ನ ಮಕ್ಕಳ ಅಪಹರಣದಲ್ಲಿ ನನ್ನ ಅತ್ತಿಗೆ ಜುಬೀನಾ ಖಾನ್ ಹಾಗೂ ಆಕೆಯ ಪತಿ ಮುಸ್ತಾಫಾ ಅನ್ಸಾರಿ ಭಾಗಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.

ತ್ರಿವಳಿ ತಲಾಖ್ ಪ್ರಕರಣದಲ್ಲಿ ಈ ಕೆಯ ಪರ ವಾದಿಸಿದ್ದ ವಕೀಲ ನಾಜಿಯಾ ಇಲೈ ಖಾನ್ ಕೂಡ ದೂರು ನೀಡುವ ಸಂದರ್ಭದಲ್ಲಿ ಠಾಣೆಯಲ್ಲಿ ಉಪಸ್ಥಿತರಿದ್ದರು. ಜಹಾನ್ ಪತಿ 2014ರ ಏಪ್ರಿಲ್'ನಲ್ಲಿ ದುಬೈ'ನಿಂಲೇ ಫೋನಿನ ಮೂಲಕವೇ ತ್ರಿವಳಿ ತಲಾಖ್ ಮೂಲಕ ವಿಚ್ಚೇದನ ನೀಡಿದ್ದ.

click me!