ಹುಬ್ಬಳ್ಳಿ, ಧಾರವಾಡ, ಬೆಳಗಾವಿಗೆ ಬುಲೆಟ್‌ ಟ್ರೈನ್‌

By Web DeskFirst Published Jul 28, 2019, 10:58 AM IST
Highlights

ಬೆಳಗಾವಿ, ಹುಬ್ಬಳ್ಳಿ-ಧಾರವಾಡ ತ್ರಿವಳಿ ನಗರಗಳಿಗೆ ಬುಲೆಟ್‌ ಟ್ರೈನ್‌ ಸಂಪರ್ಕ ಕಲ್ಪಿಸುವ ಚಿಂತನೆ ನಡೆಸಲಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ.

ಬೆಳಗಾವಿ [ಜು.28]: ಬೆಳಗಾವಿ, ಹುಬ್ಬಳ್ಳಿ-ಧಾರವಾಡ ತ್ರಿವಳಿ ನಗರಗಳಿಗೆ ಬುಲೆಟ್‌ ಟ್ರೈನ್‌ ಸಂಪರ್ಕ ಕಲ್ಪಿಸುವ ಚಿಂತನೆ ನಡೆದಿದ್ದು, ಈ ಬಗ್ಗೆ ಅಧ್ಯಯನ ಪ್ರಗತಿಯಲ್ಲಿದೆ. ಇದಕ್ಕೆ ಅಧಿಕಾರಿಗಳು ಮತ್ತು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ತಿಳಿ​ಸಿ​ದರು.

ನಗರದ ದಂಡು ಮಂಡಳಿಯಲ್ಲಿ ಶನಿವಾರ ಜರುಗಿದ ಸಭೆಯಲ್ಲಿ ಮಾತನಾಡಿದ ಅವರು, ಬೆಳಗಾವಿ, ಧಾರವಾಡ-ಹುಬ್ಬಳ್ಳಿ ತ್ರಿವಳಿ ನಗರಗಳಿಗೆ ಬುಲೆಟ್‌ ಟ್ರೈನ್‌ ಸಂಪರ್ಕ ಕಲ್ಪಿಸುವ ಚಿಂತನೆಯನ್ನು ಈಗಾಗಲೇ ರೈಲ್ವೆ ಇಲಾಖೆ ನಡೆಸಿದೆ. ಈ ಕುರಿತು ಅಧ್ಯಯನವೂ ಪ್ರಗ​ತಿ​ಯ​ಲ್ಲಿದ್ದು, ತ್ವರಿತವಾಗಿ ಜಾರಿಗೆ ತರಲಾಗುವುದು ಎಂದರು.

ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆ ತ್ವರಿತ:  ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿರುವ ಮಹಾಲಲಕ್ಷ್ಮೀ ಎಕ್ಸ್‌ಪ್ರೆಸ್‌ ರೈಲಿನಲ್ಲಿರುವ ಪ್ರಯಾಣಿಕರ ರಕ್ಷಣಾ ಕಾರ್ಯ ತ್ವರಿತವಾಗಿ ನಡೆಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಮುಂಬೈ ಮತ್ತು​ ಕೊಲ್ಹಾಪುರ ಮಧ್ಯ ಸಂಚರಿಸುತ್ತಿದ್ದ ಮಹಾಲಕ್ಷ್ಮೀ ಎಕ್ಸ್‌ಪ್ರೆಸ್‌ ರೈಲು ಬದ್ಲಾಪುರದಲ್ಲಿ ಮಧ್ಯರಾತ್ರಿ ಪ್ರವಾಹದಲ್ಲಿ ಸಿಲುಕಿದೆ. ಈ ರೈಲಿನಲ್ಲಿ 750 ಜನ ಪ್ರಯಾಣಿಸುತ್ತಿದ್ದರು. ಪ್ರಯಾಣಿಕರ ಕುರಿತು ವಿಭಾಗೀಯ ಪ್ರಬಂಧಕರಿಂದ ಮಾಹಿತಿ ಪಡೆದಿದ್ದೇನೆ. ನೌಕಾದಳ, ವಾಯುದಳದ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಪ್ರಯಾಣಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.

click me!