ಟಾಪ್ 10 ರಾಜಕಾರಣಿಗಳ ಪಟ್ಟೀಲಿ ಒಬ್ಬ ಕಾಂಗ್ರೆಸ್ಸಿಗರಿಲ್ಲ!

Published : Jul 28, 2019, 10:18 AM ISTUpdated : Jul 28, 2019, 10:45 AM IST
ಟಾಪ್ 10 ರಾಜಕಾರಣಿಗಳ ಪಟ್ಟೀಲಿ ಒಬ್ಬ ಕಾಂಗ್ರೆಸ್ಸಿಗರಿಲ್ಲ!

ಸಾರಾಂಶ

ಟಾಪ್‌-10 ಪ್ರಭಾವಿ ರಾಜಕಾರಣಿಗಳ ಪಟ್ಟಿಯಲ್ಲಿ ಒಬ್ಬ ಕಾಂಗ್ರೆಸ್ಸಿಗರೂ ಇಲ್ಲ!| ಮೋದಿ ಪ್ರಥಮ, ಅಮಿತ್‌ ದ್ವಿತೀಯ 9 ಮಂದಿ ಬಿಜೆಪಿಗರು| ಇಂಡಿಯಾ ಟುಡೇ ‘ಹೈ ಅಂಡ್‌ ಮೈಟಿ’ ರ‍್ಯಾಂಕಿಂಗ್‌ ಪ್ರಕಟ

ನವದೆಹಲಿ[ಜು.28]: ಇಂಗ್ಲಿಷ್‌ ನಿಯತಕಾಲಿಕೆಯಾದ ‘ಇಂಡಿಯಾ ಟುಡೇ’ ದೇಶದ ಪ್ರಭಾವಿ ರಾಜಕಾರಣಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಟಾಪ್‌-10ರಲ್ಲಿ ಕಾಂಗ್ರೆಸ್ಸಿನ ಒಬ್ಬ ನಾಯಕರಿಗೂ ಸ್ಥಾನ ದೊರೆತಿಲ್ಲ. ನಿರೀಕ್ಷೆಯಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಥಮ ಸ್ಥಾನದಲ್ಲಿದ್ದರೆ, ಕೇಂದ್ರ ಸರ್ಕಾರದಲ್ಲಿ ನಂ.2 ಸ್ಥಾನದಲ್ಲಿರುವ ಗೃಹ ಸಚಿವ ಅಮಿತ್‌ ಶಾ ಅವರಿಗೆ 2ನೇ ರ‍್ಯಾಂಕ್‌ ಸಿಕ್ಕಿದೆ. ಉಳಿದಂತೆ 9 ಮಂದಿ ಬಿಜೆಪಿಗರು ಇದ್ದರೆ, ಆರ್‌ಎಸ್‌ಎಸ್‌ನ ಮೋಹನ ಭಾಗವತ್‌ 3 ಸ್ಥಾನದಲ್ಲಿದ್ದಾರೆ.

‘ಹೈ ಅಂಡ್‌ ಮೈಟಿ’ ಎಂಬ ಹೆಸರಿನ ರ‍್ಯಾಂಕಿಂಗ್‌ ಇದಾಗಿದ್ದು, ನಿಯತಕಾಲಿಕೆಯ ಆಗಸ್ಟ್‌ ಸಂಚಿಕೆಯಲ್ಲಿ ಪ್ರಕಟವಾಗಿದೆ. ದೇಶದ ಪ್ರಭಾವಿಗಳ ಪಟ್ಟಿಯಲ್ಲಿ 27 ಮಂದಿ ಉದ್ಯಮಿಗಳಿದ್ದು, ರಿಲಯನ್ಸ್‌ ಉದ್ಯಮ ಸಾಮ್ರಾಜ್ಯದ ಒಡೆಯ ಮುಕೇಶ್‌ ಅಂಬಾನಿ ಪ್ರಥಮ ಸ್ಥಾನದಲ್ಲಿದ್ದಾರೆ.

ಟಾಪ್‌ 10 ಪ್ರಭಾವಿ ರಾಜಕಾರಣಿಗಳು

1. ನರೇಂದ್ರ ಮೋದಿ

2. ಅಮಿತ್‌ ಶಾ

3. ಮೋಹನ ಭಾಗವತ್‌

4. ರಾಜನಾಥ ಸಿಂಗ್‌

5. ನಿತಿನ್‌ ಗಡ್ಕರಿ

6. ನಿರ್ಮಲಾ ಸೀತಾರಾಮನ್‌

7. ಪೀಯೂಷ್‌ ಗೋಯಲ್‌

8. ಯೋಗಿ ಆದಿತ್ಯನಾಥ್‌

9. ದೇವೇಂದ್ರ ಫಡ್ನವೀಸ್‌

10. ಪ್ರಕಾಶ್‌ ಜಾವಡೇಕರ್‌

ಪ್ರಭಾವಿ ವ್ಯಕ್ತಿಗಳು

1. ಮುಕೇಶ್‌ ಅಂಬಾನಿ

2. ಕುಮಾರ ಮಂಗಳಂ ಬಿರ್ಲಾ

3. ಗೌತಮ್‌ ಅದಾನಿ

4. ಉದಯ್‌ ಕೋಟಕ್‌

5. ಆನಂದ ಮಹೀಂದ್ರ

6. ರತನ್‌ ಟಾಟಾ

7. ವಿರಾಟ್‌ ಕೊಹ್ಲಿ

8. ಎನ್‌. ಚಂದ್ರಶೇಖರನ್‌

9. ಅಮಿತಾಭ್‌ ಬಚ್ಚನ್‌

10. ಶಿವ ನಾಡಾರ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಚ್ಚೇದನ ಪ್ರಕರಣದ ಕ್ಲೈಂಟ್ ಜೊತೆ ರೋಮ್ಯಾಂಟಿಕ್ ರಿಲೇಷನ್‌ ಶಿಪ್‌: ಮಹಿಳಾ ವಕೀಲೆಗೆ ಸುಪ್ರೀಂಕೋರ್ಟ್ ತರಾಟೆ
ಡೆವಿಲ್ ಬ್ಯಾನರ್‌ನಲ್ಲಿ 'ಡಾ.ಅಂಬೇಡ್ಕರ್ ತಲೆಮೇಲೆ ಕೊಲೆ ಆರೋಪಿ' ಕೂರಿಸಿದ ಅಂದಾಭಿಮಾನಿಗಳು!