75 ವರ್ಷದ ಗಡವಿನ ಬಗ್ಗೆ ಬಿಎಸ್'ವೈ ಹೇಳಿದ್ದೇನು ಗೊತ್ತೆ ?

Published : May 27, 2017, 10:12 PM ISTUpdated : Apr 11, 2018, 12:41 PM IST
75 ವರ್ಷದ ಗಡವಿನ ಬಗ್ಗೆ ಬಿಎಸ್'ವೈ ಹೇಳಿದ್ದೇನು ಗೊತ್ತೆ ?

ಸಾರಾಂಶ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಿನ್ನೆ ಯಡಿಯೂರಪ್ಪನವರೇ ಬಿಜೆಪಿಯ ಸಿಎಂ ಅಭ್ಯರ್ಥಿ ಅಂತ ಪುನರುಚ್ಚಾರ ಮಾಡಿರೋದು ತಮ್ಮ ಮೇಲೆ ಅವರಿಟ್ಟಿರುವ ವಿಶ್ವಾಸವನ್ನು ತೋರಿಸುತ್ತೆ.

ಬೆಂಗಳೂರು(ಮೇ.27): 'ನನಗೀಗ ಎಪ್ಪತ್ಮೂರು ವರ್ಷ ತುಂಬಿ ಎಪ್ಪತ್ನಾಲ್ಕಕ್ಕೆ ಕಾಲಿಟ್ಟಿದ್ದೇನೆ, ನಮ್ಮ ಸರ್ಕಾರ ರಚಿಸುವ ವೇಳೆಗೆ 75ನೇ ವರ್ಷಕ್ಕೆ ಕಾಲಿಟ್ಟಿರುತ್ತೇನೆ. ಹೀಗಾಗಿ 75 ವರ್ಷದ ಗಡವು ನನಗೆ ಅನ್ವಯವಾಗಲ್ಲ. ಈ ಮಾತು ಹೇಳಿದ್ದು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ.ಬೆಂಗಳೂರಿನ ಪ್ರೆಸ್​ಕ್ಲಬ್​ನಲ್ಲಿಂದು ನಡೆದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಿನ್ನೆ ಯಡಿಯೂರಪ್ಪನವರೇ ಬಿಜೆಪಿಯ ಸಿಎಂ ಅಭ್ಯರ್ಥಿ ಅಂತ ಪುನರುಚ್ಚಾರ ಮಾಡಿರೋದು ತಮ್ಮ ಮೇಲೆ ಅವರಿಟ್ಟಿರುವ ವಿಶ್ವಾಸವನ್ನು ತೋರಿಸುತ್ತೆ.

ಆ ವಿಶ್ವಾಸವನ್ನ ಉಳಿಸಿಕೊಳ್ಳುತ್ತೇನೆ. ಇದೇ ವೇಳೆ ಸಿಎಂ ಸಿದ್ದರಾಮಯ್ಯನವರನ್ನ ತರಾಟೆಗೆ ತೆಗೆದುಕೊಂಡ ಬಿಎಸ್'ವೈ. ಈ ದರಿದ್ರ ಸರ್ಕಾರಕ್ಕೆ ಹಸುಗಳಿಗೆ ಮೇವು ನೀಡುವ ಯೋಗ್ಯತೆಯೂ ಇಲ್ಲ. ಸಿಎಂ ಅವರ ಕಿವಿಹಿಂಡಿ ರೈತರ ಸಾಲ ಮನ್ನಾ ಮಾಡಿಸುತ್ತೇನೆ. ಜುಲೈ ಅಂತ್ಯದೊಳಗೆ ಸಾಲ ಮನ್ನಾ ಮಾಡದಿದ್ದರೆ, ನಾಲ್ಕೈದು ಲಕ್ಷ ರೈತರ ಸೇರಿಸಿ ಬೃಹತ್ ಪ್ರತಿಭಟನೆ ನಡೆಸೋದಾಗಿ ಎಚ್ಚರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಿಕ್ಲು ಶಿವ ಕೊಲೆ ಪ್ರಕರಣ: ನಾಪತ್ತೆ ಆಗಿರುವ ಬೈರತಿ ಬಸವರಾಜು ವಿರುದ್ಧ ಲುಕ್ ಔಟ್ ನೋಟಿಸ್
ಜರ್ಮನಿಯಲ್ಲೂ ‘ಮತಚೋರಿ’ ಆರೋಪ: ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ