
ನವದೆಹಲಿ(ಮೇ.27): ನರೇಂದ್ರ ಮೋದಿ ಮತ್ತು ನಿತೀಶ್ಕುಮಾರ್ ಇಬ್ಬರೂ ರಾಜಕೀಯದಲ್ಲಿ ಸಮಕಾಲೀನರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ರೇಸ್ನಲ್ಲಿ ಇದ್ದವರು. ಆದರೆ ಈಗ ಮೋದಿ ಪ್ರಧಾನಿಯಾಗಿದ್ದಾರೆ. ನಿತೀಶ್ ಕುಮಾರ್ ಬಿಹಾರ ಸಿಎಂ ಆಗಿದ್ದಾರೆ. ಇವರಿಬ್ಬರ ನಡುವಿನ ಸಂಬಂಧವೂ ಅಷ್ಟೇ. ಅಷ್ಟಕ್ಕಷ್ಟೇ.
ಆದರೆ ಇವತ್ತು ಇವರಿಬ್ಬರು ಜೊತೆಯಾಗಿದ್ದರು. ಇದಕ್ಕೆ ಸಾಕ್ಷಿಯಾಗಿದ್ದು ಪ್ರಧಾನಿ ಮೋದಿ ಮಾರಿಷಸ್ ಪ್ರಧಾನಿ ಅನಿರುದ್ಧ ಜಗನ್ನಾಥ್ ಅತಿಥಿ ಸತ್ಕಾರಕ್ಕಾಗಿ ಏರ್ಪಡಿಸಿದ್ದ ಔತಣಕೂಟ. ಶುಕ್ರವಾರ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ 17 ವಿರೋಧಪಕ್ಷಗಳ ಮುಖಂಡರಿಗೆ ಭೋಜನಕೂಟ ಏರ್ಪಡಿಸಿದ್ದರು. ಮುಂಬರುವ ರಾಷ್ಟ್ರಪತಿ ಚುನಾವಣೆ ಹಿನ್ನೆಲೆ ಸೋನಿಯಾ ‘ಒಗ್ಗಟ್ಟಿನ ಭೋಜನ’ಕೂಟಕ್ಕೆ ಆಹ್ವಾನಿಸಿದ್ದರು. ಆದರೆ ನಿತೀಶ್ ಈ ಸಭೆಗೆ ಗೈರಾಗಿ, ತಮ್ಮ ಬದಲು ಜೆಡಿಯು ಉಪಾಧ್ಯಕ್ಷ ಶರದ್ ಯಾದವ್'ರನ್ನು ಕಳುಹಿಸಿದ್ದರು. ನಿನ್ನೆ ಸೋನಿಯಾ ಭೋಜನ ಕೂಟಕ್ಕೆ ಗೈರಾಗಿ, ಇಂದು ಮೋದಿ ಭೇಟಿಯಾಗಿದ್ದು, ಭಾರೀ ಚರ್ಚೆಗೆ ಕಾರಣವಾಗಿತ್ತು.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ನಿತೀಶ್ ಕುಮಾರ್. ಈ ಭೇಟಿಯಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ. ಮಾರಿಷಸ್ ಪ್ರಧಾನಮಂತ್ರಿ ಸತ್ಕಾರದ ಔತಣಕೂಟಕ್ಕೆ 2 ದಿನಗಳ ಹಿಂದೆಯೇ ಮಾನ್ಯ ಪ್ರಧಾನಮಂತ್ರಿಗಳು ಆಹ್ವಾನಿಸಿದ್ದರು. ಬಿಹಾರದ ಸಮಸ್ಯೆ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸುವುದು ನನ್ನ ಕರ್ತವ್ಯ. ಸೋನಿಯ ಗಾಂಧಿ ಔತಣ ಕೂಟದ ಜೊತೆ ಇದನ್ನು ಹೋಲಿಕೆ ಮಾಡುವುದು ತಪ್ಪು ತಿಳುವಳಿಕೆಯಷ್ಟೇ ಎಂದು ತಿಳಿಸಿದ್ದಾರೆ.
ಈಗಾಗಲೇ ರಾಷ್ಟ್ರಪತಿ ಆಯ್ಕೆ ಬಗ್ಗೆ ಭಾರೀ ಚರ್ಚೆ. ಗೊಂದಲಗಳು ಉಂಟಾಗಿವೆ. ಸದ್ಯ ಆಡಳಿತ ಮತ್ತು ಪ್ರತಿಪಕ್ಷಗಳ ಚಿತ್ತ ರಾಷ್ಟ್ರಪತಿ ಆಯ್ಕೆಯತ್ತ ಮುಖ ಮಾಡಿದೆ. ಒಂದೆಡೆ ಸೋನಿಯಾ ರಾಷ್ಟ್ರಪತಿ ಆಯ್ಕೆ ವೇಳೆ ತನ್ನದೇ ಒಗ್ಗಟ್ಟಿನ ಪ್ರದರ್ಶನ ಮಾಡೋಕೆ ತಯಾರಾಗ್ತಿದ್ರೆ, ಇತ್ತ ಮೋದಿ ಸೈಲೆಂಟಾಗಿ ಮಾಸ್ಟರ್ ಪ್ಲಾನ್ ರೆಡಿ ಮಾಡ್ತಿದ್ದಾರೆ.
- ಧಾನ್ಯಶ್ರೀ, ಸುವರ್ಣ ನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.