ಕರ್ನಾಟಕದಲ್ಲಿ ಸಂಪುಟ ವಿಸ್ತರಣೆ ಸರ್ಕಸ್ ದಿನದಿಂದ ದಿನಕ್ಕೆ ಕಗ್ಗಾಂಟಾಗುತ್ತಿದೆ. ಸೋತವರಿಗೆ ಮಂತ್ರಿಗಿರಿ ಅನ್ನೋ ಮಾತಿನಿಂದ ಬಿಜೆಪಿಯಲ್ಲಿ ಅಸಮಧಾನ ಸ್ಫೋಟಗೊಂಡಿದೆ. ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಶಿವಸೇನೆ ಅಸಲಿ ಆಟ ಶುರುವಾಗಿದ್ದು, ಮೈತ್ರಿ ಪಕ್ಷಗಳಾದ NCP ಹಾಗೂ ಕಾಂಗ್ರೆಸ್‌ಗೆ ತಲೆನೋವು ಆರಂಭವಾಗಿದೆ. ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಪಡೆದ ಒತ್ತು ಮೊತ್ತ, ಟೀಂ ಇಂಡಿಯಾದಲ್ಲಿ ಕನ್ನಡಿಗ ಕೆಎಲ್ ರಾಹುಲ್ ದಾಖಲೆ ಸೇರಿದಂತೆ ಫೆಬ್ರವರಿ 3ರ ಟಾಪ್ 10 ಸುದ್ದಿ ಇಲ್ಲಿವೆ.
ಸೋತ ಮತ್ತೋರ್ವ ನಾಯಕನಿಗೆ ಮಂತ್ರಿಗಿರಿ: ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ...
undefined
ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗಿದ್ದು, 10+3 ಸೂತ್ರದಡಿಯಲ್ಲಿ ಒಟ್ಟು 13 ಜನರು ಸಂಪುಟಕ್ಕೆ ಸೇರಿಸಿಕೊಳ್ಳಲು ಸಿಎಂ ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಅದರಲ್ಲೂ ಸೋತ ಮತ್ತೋರ್ವ ನಾಯಕನಿಗೆ ಮಂತ್ರಿಗಿರಿ ಕೊಡುತ್ತಿರುವುದಕ್ಕೆ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ.
ಬಿಜೆಪಿ ಜೊತೆ ಸೇನೆ ಮೈತ್ರಿ ಮಾತು?: ಅಸಲಿ 'ಆಟ' ಆರಂಭಿಸಿದ ಉದ್ಧವ್?
ಮಹಾರಾಷ್ಟ್ರ ರಾಜಕೀಯದಾಟ ಇಡೀ ದೇಶದಲ್ಲೇ ಸದ್ದು ಮಾಡಿತ್ತು. ಕಾಂಗ್ರೆಸ್ ಹಾಗೂ NCP ಜೊತೆ ಮೈತ್ರಿ ಮಾಡಿಕೊಂಡಿದ್ದ ಶಿವ ಸೇನೆ, ಬಿಜೆಪಿ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸಿತ್ತು. ಆದರೀಗ ಉದ್ಧವ್ ಠಾಕ್ರೆ ಈ ಅಸಲಿ ಆಟ ಆರಂಭಿಸಿದ್ದು, ಅಚ್ಚರಿಯ ಹೇಳಿಕೆ ನೀಡಿದ್ದಾರೆ.
'ನಿರ್ಭಯಾ ಕೇಸ್ ದೋಷಿಗಳಿಗೆ ಗಲ್ಲು ವಿಧಿಸಲು ಗಡಿಬಿಡಿ ಏಕೆ?'
ನಿರ್ಭಯಾ ಗ್ಯಾಂಗ್‌ರೇಪ್ ಪ್ರಕರಣದ ದೋಷಿಗಳ ಡೆತ್‌ವಾರಂಟ್ ತಡೆ ಹಿಡಿದಿರುವ ದಿಲ್ಲಿ ಸ್ಥಳೀಯ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿಯ ತೀರ್ಪನ್ನು ದಿಲ್ಲಿ ಹೈಕೋರ್ಟ್ ಭಾನುವಾರ ಕಾಯ್ದಿರಿಸಿದೆ.
ಕಿವೀಸ್ ವಿರುದ್ಧದ ಟಿ20 ಸರಣಿಯಲ್ಲಿ ಕನ್ನಡಿಗ ರಾಹುಲ್ ಬರೆದ ಅಪರೂಪದ ದಾಖಲೆಗಳಿವು
ಕನ್ನಡಿಗ ಕೆ.ಎಲ್. ವೃತ್ತಿಜೀವನದ ಅದ್ಭುತ ಫಾರ್ಮ್‌ನಲ್ಲಿದ್ದು, ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಪಾಲಿಗೆ ಒಳ್ಳೆಯ ಆಯುಧ ಸಿಕ್ಕಂತಾಗಿದೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅಮೋಘ ಪ್ರದರ್ಶನ ತೋರುವಲ್ಲಿ ರಾಹುಲ್ ಯಶಸ್ವಿಯಾಗಿದ್ದಾರೆ.
ಬುಸುಗುಡುವ ನಾಗಿಣಿ ದೀಪಿಕಾ ದಾಸ್ ಬಿಗ್ ಬಾಸ್‌ನಲ್ಲಿ ಪಡೆದ ಸಂಭಾವನೆ ಲೀಕ್!
ಬಿಗ್ ಬಾಸ್ ಕನ್ನಡ ಸೀಸನ್-7 ಮುಕ್ತಾಯವಾಗಿದ್ದು, ಕುಂದಾಪುರದ ಶೈನ್ ಶೆಟ್ಟಿಗೆ ಬಿಗ್ ಬಾಸ್ ಕಿರೀಟ ಮುಡಿಗೇರಿದೆ. ಸ್ಟೈಲಿಶ್ ಸ್ಟಾರ್ ದೀಪಿಕಾ ದಾಸ್ 4ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಅಷ್ಟಕ್ಕೂ 4ನೇ ಸ್ಥಾನಕ್ಕೆ ದೀಪಿಕಾ ಪಡೆದ ಬಹುಮಾನದ ಮೊತ್ತ ಬಹಿರಂಗವಾಗಿದೆ.
ಶೈನ್ ಶೆಟ್ಟಿ ಕೈ ಸೇರಿದ್ದು 50 ಲಕ್ಷವಲ್ಲ,61 ಲಕ್ಷ ಮತ್ತು ದುಬಾರಿ ಕಾರು!
ಬಿಗ್ ಬಾಸ್ ಸೀಸನ್ 11 ವಿನ್ನರ್ ಶೈನ್ ಶೆಟ್ಟಿ ಪಡೆದ ಸಂಭಾವನೆ ಹಾಗೂ ವಿನ್ನರ್‌ಗೆ ನಿಗದಿ ಪಡಿಸಿದ ಹಣ ಮೀರಿದ ದೊಡ್ಡ ಗಿಫ್ಟ್ ಸಿಕ್ಕಿದೆ. ಕಿರುತೆರೆ ಹಾಗೂ ಬೆಳ್ಳಿತೆರೆ ಮೇಲೆ ನಾಯಕ ನಟನಾಗಿ ಮಿಂಚಿರುವ ಶೈನ್ ವೃತ್ತಿ ಜೀವನದಲ್ಲಿ ಬಿಗ್ ಬಾಸ್ ಟರ್ನಿಂಗ್ ಪಾಯಿಂಟ್ ಆಗಲಿದೆ. ಬಿಗ್ ಬಾಸ್ ವಿಜೇತರಿಗೆ 50 ಲಕ್ಷ ನಗದು ಬಹುಮಾನ ನೀಡುವುದಾಗ ಘೋಷಣೆ ಮಾಡಲಾತ್ತು. ಇದೀಗ ಮೊತ್ತ ಹೆಚ್ಚಾಗಿದೆ.
ಕರ್ನಾಟಕಕ್ಕೆ ಕೇಂದ್ರದ ತೆರಿಗೆ ಪಾಲು 9000 ಕೋಟಿ ರು. ಖೋತಾ!
15ನೇ ಹಣಕಾಸು ಆಯೋಗದ ಮಧ್ಯಂತರ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದ್ದು, ಇದರಲ್ಲಿ ರಾಜ್ಯಗಳಿಗೆ ಕೇಂದ್ರ ಸರ್ಕಾರ ನೀಡಬೇಕಾಗಿರುವ ಕೇಂದ್ರೀಯ ತೆರಿಗೆಗಳ ಮಾನದಂಡವನ್ನು ಬದಲಿಸಲಾಗಿದೆ. ಇದರಿಂದಾಗಿ ಕರ್ನಾಟಕ ಸೇರಿದಂತೆ ದಕ್ಷಿಣದ ಕೆಲವು ರಾಜ್ಯಗಳಿಗೆ ಬರುವ ಕೇಂದ್ರೀಯ ತೆರಿಗೆ ಪಾಲಿನಲ್ಲಿ ಭಾರೀ ಹೊಡೆತ ಬೀಳಲಿದೆ.
ಕೊರೊನಾ ವೈರಸ್ ಬೆನ್ನಲ್ಲೇ ಚೀನಾಗೆ ಮತ್ತೊಂದು ಹೊಡೆತ; ಹೊಂಡಾ ಘಟಕ ಸ್ಥಗಿತ!
ಚೀನಾದಲ್ಲಿ ಕೊರೊನಾ ವೈರಸ್ ಮರಣ ಮೃದಂಗ ಬಾರಿಸುತ್ತಿದೆ. ರೋಗಾಣುವಿನಿಂದ ಜನರನ್ನು ರಕ್ಷಿಸಲು ಚೀನಾ ಸರ್ಕಾರ ಹರಸಾಹಸ ಪಡುತ್ತಿದೆ. ಕೊರೊನಾ ವೈರಸ್ ಚೀನಾ ಆರ್ಥಿಕತೆ ಮೇಲೆ ತೀವ್ರ ಹೊಡೆತ ನೀಡಿದೆ. ಹಲವು ಕಂಪನಿಗಳು ಬಾಗಿಲು ಮುಚ್ಚಿದೆ. ಇದೀಗ ಹೊಂಡಾ ಕಾರು ಘಟಕಕ್ಕೆ ಕೊರೊನಾ ವೈರಸ್ ಇನ್ನಿಲ್ಲದ ಸಂಕಷ್ಟ ತಂದಿದೆ.
ಬಿಎಸ್‌ಎನ್‌ಎಲ್ 78000 ಸಿಬ್ಬಂದಿ ಸ್ವಯಂ ನಿವೃತ್ತಿ!
ನಷ್ಟದ ಸುಳಿಯಲ್ಲಿ ಸಿಕ್ಕಿ ಒದ್ದಾಡುತ್ತಿರುವ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್‌ನಿಂದ ಜನವರಿ 31 ರಂದು 78,300 ಮಂದಿ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ. ನಷ್ಟ ತಗ್ಗಿಸಲು ನೌಕರರಿಗೆ ಬಿಎಸ್‌ಎನ್‌ಎಲ್ ನೀಡಿದ್ದ ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್)ಯ ಫಲ ಇದು.
ಡಿಪ್ರೆಷನ್ ಎದುರಿಸುತ್ತಿರುವ 'ಕಿರಾತಕ' ನಟಿಯ ರಿಯಲ್ ಮುಖವಿದು!
'ಕಿರಾತಕ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ಕಾಲಿವುಡ್ ನಟಿ ಒವಿಯಾ ತಮಿಳು 'ಬಿಗ್ ಬಾಸ್ ಸೀಸನ್-1' ಮೂಲಕ ಪ್ರೇಕ್ಷಕರ ಮನ ಗೆದ್ದವಳು. ಇತ್ತೇಚೆಗೆ ಡಿಪ್ರೆಷನ್‌ನಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು, ಅಷ್ಟಕ್ಕೂ ಒವಿಯಾ ಸದ್ಯ ಹೇಗಿದ್ದಾರೆ ಅನ್ನೋ ಮಾಹಿತಿ ಬಹಿರಂಗವಾಗಿದೆ.