ವಿಧ್ವಂಸಕ ಕೃತ್ಯ ತಡೆಯಲು ಬೆಂಗಳೂರು ಪೊಲೀಸ್ ಮಾಸ್ಟರ್ ಪ್ಲ್ಯಾನ್

By Suvarna NewsFirst Published Feb 3, 2020, 4:17 PM IST
Highlights

ಪಿಜಿ ಮಾಲೀಕರೊಂದಿಗೆ ಸಭೆ ನಡೆಸಿದ ಬೆಂಗಳೂರು ಪೊಲೀಸರು/ ಎಲ್ಲ ವಿದ್ಯಾರ್ಥಿಗಳ ಮಾಹಿತಿ ನೀಡಿ/ ಸೆಕ್ಯೂರಿಟಿ ತಂತ್ರ ಅಳವಡಿಸಿಕೊಳ್ಳಿ/ ಪ್ರತಿನಿತ್ಯ ಭೇಟಿ ನೀಡುವವರ ಮಾಹಿತಿಯೂ ಬೇಕು

ಬೆಂಗಳೂರು[ಫೆ. 03]  ಭಯೋತ್ಪಾದಕರು ಪಿಜಿಯಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಸಿಕ್ಕ ನಂತರ ವಾರಕ್ಕೊಮ್ಮೆ ಪಿಜಿಗಳಲ್ಲಿ ವಾಸ್ತವ್ಯ ವಿವರ ನೀಡಲು ಸೂಚನೆ ನೀಡಲಾಗಿದೆ.

ಪಿಜಿ ಮಾಲೀಕರಿಗೆ ಸ್ಥಳೀಯ ಪೊಲೀಸರು ಸೂಚನೆ ನೀಡಿದ್ದಾರೆ. ಪಿಜಿಯಲ್ಲಿ ವಾಸ್ತವ್ಯ ಇರುವ ಯುವಕರ ಸಂಪೂರ್ಣ ಮಾಹಿತಿ ಇರಬೇಕು. ಪ್ರತಿನಿತ್ಯ ಪಿಜಿಗೆ ಬಂದು ಹೋಗುವವರ ವಿವರ ಕಲೆಕ್ಟ್ ಮಾಡಬೇಕು ಎಂಧು ತಿಳಿಸಲಾಗಿದೆ.

ರಾಷ್ಟ್ರ ವಿರೋಧಿ, ಉಗ್ರಗಾಮಿ ಚಟುವಟಿಕೆ,ಭಯೋತ್ಪಾದಕತೆ ನಿಗಾ ಇಡುವುದು. ರಾಷ್ಟ್ರ ವಿರೋಧಿ ದುಷ್ಕತ್ಯಗಳಲ್ಲಿ  ಭಾಗಿಯಾಗುವಂತಹ ಯಾವುದೇ ಮಾಹಿತಿ ಇದ್ದರೂ ತಿಳಿಸಬೇಕು ಎಂದು ಹೇಳಲಾಗಿದ್ದು ಸೌತ್ ಈಸ್ಟ್, ವೈಟ್ ಫೀಲ್ಡ್ ಪೊಲೀಸರು ಪಿಜಿ ಓನರ್ ಗಳ ಜೊತೆ ಸಭೆ  ನಡೆಸಿದ್ದಾರೆ.

3 ಲಕ್ಷ ಬಾಂಗ್ಲಾದೇಶಿಗಳು ಬೆಂಗಳೂರಿನಲ್ಲಿದ್ದಾರೆ, ಸಾಕ್ಷ್ಯ ಕೊಟ್ಟ ಆಯುಕ್ತ!

ಹೊಸ ಸ್ಟುಡೆಂಟ್‌ ಗಳು ಪಿಜಿಗೆ ಸೇರುವಾಗ ಕೆಲವು ದಾಖಲೆಗಳನ್ನು ಸಂಗ್ರಹಿಸಿಡುವುದು. ಓಟರ್ ಐಡಿ,ಆಧಾರ್ ಕಾರ್ಡ್ ,ಕಾಲೇಜ್ ಐಡಿ ಕಾರ್ಡ್ ಕಲೆಕ್ಟ್ ಮಾಡುವುದು ವಿದ್ಯಾರ್ಥಿಗಳ ಪೂರ್ವಾಪರ ವಿಚಾರಣೆ ನಡೆಸುವುದು. ವಿದ್ಯಾರ್ಥಿಗಳ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ,ಸ್ಥಳೀಯ ಠಾಣೆಗೆ ನೀಡುವುದು. ಪಿಜಿಗೆ ಬಂದು ಹೋಗುವವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವುದು. ಯಾರ ಬಗೆಯಾದರು ಅನುಮಾನ ಬಂದಲ್ಲಿ ಕೂಡಲೇ ಪೊಲೀಸರಿಗೆ ತಿಳಿಸಬೇಕು ಎಂಬ ಸೂಚನೆಯನ್ನು ರವಾನಿಸಲಾಗಿದೆ.

ಹಾಗೇ ಪಿಜಿ ಮಾಲೀಕರು ಸೆಕ್ಯೂರಿಟಿ ಮೆಷರ್ ತೆಗೆದುಕೊಳ್ಳುಬೇಕು. ಪಿಜಿಯಲ್ಲಿ ಸಿಸಿಟಿವಿ ಅಳವಡಿಸಬೇಕು,ಸೆಕ್ಯೂರಿಟಿ ಗಾರ್ಡ್ ನೇಮಿಸಬೇಕು, ರಿಜಿಸ್ಟರ್ ಇಟ್ಟು ಅದರಲ್ಲಿ ಪ್ರತಿಯೊಬ್ಬರ ಹೆಸರು ನಮೂದಿಸಬೇಕು ಎಂದು ತಿಳಿಸಲಾಗಿದ್ದು ಕಟ್ಟುನಿಟ್ಟಿನ ಪಾಲನೆ ಮಾಡಲು ಸೂಚಿಸಲಾಗಿದೆ.

click me!