ಕೊರೋನಾ ವೈರಸ್‌ಗೆ ಸಿಕ್ತು ಮದ್ದು?| HIV ಔಷಧಿಯಿಂದ ಕೊರೋನಾ ವೈರಸ್‌ಗೆ ಚಿಕಿತ್ಸೆ?| ವೈದ್ಯರು ಕೊಟ್ಟ ಹೇಳಿಕೆಯಿಂದ ರೋಗಿಗಳ ಮುಖದಲ್ಲಿ ಸಂತಸ
ಥಾಯ್ಲೆಂಡ್[ಜ.03]: ಕೊರೋನಾ ವೈರಸ್ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಚೀನಾದ ವುಹಾನ್ ನಲ್ಲಿ ಕಾಣಿಸಿಕೊಂಡ ಈ ವೈರಸ್ ವಿಶ್ವದ ಹಲವಾರು ದೇಶಗಳಿಗೆ ವ್ಯಾಪಿಸಿದೆ. ಕೊರೋನಾ ವೈರಸ್ ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿದ್ದು, ವಿಶ್ವದಾದ್ಯಂತ ಸುಮಾರು 17 ಸಾವಿರಕ್ಕೂ ಅಧಿಕ ಮಂದಿ ಈ ಸೋಂಕಿಗೀಡಾಗಿದ್ದಾರೆ. ಜಗತ್ತಿನೆಲ್ಲೆಡೆ ವೈದ್ಯರು ಈ ಮಾರಕ ಸೋಂಕು ಗುಣಪಡಿಸುವ ಔಷಧಿ ಕಂಡುಹಿಡಿಯುವಲ್ಲಿ ತಲ್ಲೀನರಾಗಿದ್ದಾರೆ. ಹೀಗಿರುವಾಗ ಥಾಯ್ಲೆಂಡ್ ನ ಕೆಲ ವೈದ್ಯರು ತಾವು ಈ ಕೊರೋನಾ ವೈರಸ್ ಗುಣಪಡಿಸುವ ಮದ್ದು ತಯಾರಿಸಿದ್ದು, ಇದರಿಂದ ಸೋಂಕಿತ ವ್ಯಕ್ತಿ ಕೇವಲ 48 ಗಂಟೆಯೊಳಗೆ ಗುಣವಾಗುತ್ತಾರೆ ಎಂದಿದ್ದಾರೆ.
ಕೊರೊನಾ ವೈರಸ್ ಬೆನ್ನಲ್ಲೇ ಚೀನಾಗೆ ಮತ್ತೊಂದು ಹೊಡೆತ; ಹೊಂಡಾ ಘಟಕ ಸ್ಥಗಿತ!
ಥಾಯ್ಲೆಂಡ್ ನ ವೈದ್ಯ ಕ್ರಿಯೇನ್ಸನ್ ಅತಿಪಾರ್ನವಾನಿಚ್ ಕೊರೋನ ವೈರಸ್ ನಿಂದ ಪೀಡಿತ 71 ವರ್ಷದ ಓರ್ವ ವೃದ್ಧ ಮಹಿಳೆಯನ್ನು ತಾವು 48 ಗಂಟೆಯೊಳಗೆ ಗುಣಪಡಿಸಿದ್ದೇವೆ ಎಂದಿದ್ದಾರೆ. ಎದ್ದು ಓಡಾಡುವ ಪರಿಸ್ಥಿತಿಯಲ್ಲಿಲ್ಲದ ಕೊರೋನಾ ವೈರಸ್ ಸೋಂಕಿತ ಮಹಿಳೆ, ಕೇವಲ 12 ಗಂಟೆಯೊಳಗೆ ಹಾಸಿಗೆ ಮೇಲಿಂದ ಎದ್ದಿದ್ದಾರೆ ಎಂದು ಡಾಕ್ಟರ್ ತಿಳಿಸಿದ್ದಾರೆ. ಒಟ್ಟಾರೆಯಾಗಿ 48 ಗಂಟೆಯೊಳಗೆ ಆ ಮಹಿಳೆ ಶೇ. 90ರಷ್ಟು ಗುಣಮುಖರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
HIV ಔಷಧಿಯಿಂದ ಕೊರೋನಾ ವೈರಸ್ ಮಾಯ
ಔಷಧಿ ಕುರಿತಾಗಿ ಪ್ರತಿಕ್ರಿಯಿಸಿರುವ ಡಾಕ್ಟರ್ 'ನಾವು ಆವಿಷ್ಕಾರ ಮಾಡಿದ ಔಷಧಿಯನ್ನು ಕೊರೋನಾ ವೈರಸ್ ಗೆ ತುತ್ತಾಗಿದ್ದ ಮಹಿಳೆ ಮೇಲೆ ಪ್ರಯೋಗಿಸಿದಾಗ ಅವರಲ್ಲಿ ಧನಾತ್ಮಕ ಬದಲಾವಣೆಗಳನ್ನು ಗಮನಿಸಿದೆವು. 12 ಗಂಟೆಯೊಳಗೆ ಇದು ಅವರಿಗೆ ರಿಲೀಫ್ ನೀಡಿದೆ. ಅಲ್ಲದೇ 48 ಗಂಟೆಯೊಳಗೆ ಶೇ. 90 ರಷ್ಟು ಗುಣಮುಖರಾಗಿದ್ದಾರೆ. ನಾವು ಈ ಔಷಧಿಗೆ ಆಂಟಿ- ಫ್ಲೂ ಡ್ರಗ್ ಓಸೆಲ್ಟಿಮಿವಿರ್ ಗೆ HIV ಚಿಕಿತ್ಸೆಗೆ ಬಳಸಲಾಗುವ ಲೋಪಿನಾವಿರ್ ಹಾಗೂ ರಿಟೋನಾವಿರ್ ಸೇರಿಸಿ ತಯಾರಿಸಿದ್ದೇವೆ. ಸದ್ಯ ಈ ಔಷಧಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಲ್ಯಾಬ್ ನಲ್ಲಿ ಪ್ರಯೋಗ ನಡೆಸುತ್ತಿದ್ದೇವೆ' ಎಂದಿದ್ದಾರೆ.
ಕೊರೋನಾ ಚಿಕಿತ್ಸೆಗಾಗಿ 10 ದಿನದಲ್ಲಿ ತಲೆ ಎತ್ತಿದ ಅತ್ಯಾಧುನಿಕ ಆಸ್ಪತ್ರೆ!