ಸಿಎಂ ವಿರುದ್ದ ಬಿಎಸ್ ವೈ ಮತ್ತೊಂದು ಬಾಂಬ್

Published : Feb 12, 2017, 11:33 AM ISTUpdated : Apr 11, 2018, 12:35 PM IST
ಸಿಎಂ ವಿರುದ್ದ ಬಿಎಸ್ ವೈ ಮತ್ತೊಂದು ಬಾಂಬ್

ಸಾರಾಂಶ

ಬೆಂಗಳೂರು (ಫೆ.12): ಸಿಎಂ ಸಿದ್ದರಾಮಯ್ಯ ವಿರುದ್ಧ 1 ಸಾವಿರ ಕೋಟಿ ದೇಣಿಗೆ ಆರೋಪ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ. ಬಿ.ಎಸ್ ಯಡಿಯೂರಪ್ಪ ಇವತ್ತು ಡೈರಿ ಬಾಂಬ್ ಸಿಡಿಸಿದರು. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ, ಸಿಎಂ ಕುರ್ಚಿ ಉಳಿಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಗೆ  ಸಿದ್ದರಾಮಯ್ಯ ಒಂದು ಕೋಟಿ ಕಪ್ಪ ನೀಡಿರೋದು ನಿಜ. ಪರಿಷತ್ ಸದಸ್ಯ  ಗೋವಿಂದ್ ರಾಜ್ ಡೈರಿಯಲ್ಲಿ ಇದು ಉಲ್ಲೇಖವಾಗಿದೆ ಎಂದು ಆರೋಪಿಸಿದ್ದಾರೆ.

ಬೆಂಗಳೂರು ಸ್ಟೀಲ್ ಫ್ಲೈಓವರ್ ನಿರ್ಮಾಣದಲ್ಲಿ 150 ಕೋಟಿ ಡೀಲ್ ನಡೆದಿದೆ. ಈಗಾಗಲೇ ಸಿಎಂ ತಮ್ಮ ಕುರ್ಚಿ ಉಳಸಿಕೊಳ್ಳಲು 65 ಕೋಟಿಯನ್ನ ಹೈಕಮಾಂಡ್ ಗೆ ತಲುಪಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಈ ಕುರಿತು ಗೋವಿಂದ ರಾಜ್ ಡೈರಿಯಲ್ಲಿ ಸಂಪೂರ್ಣವಾದ ಮಾಹಿತಿ ಇದ್ದು ಗೋವಿಂದರಾಜ್ ಮನೆ ಮೇಲೆ ED ದಾಳಿ ವೇಳೆ ಡೈರಿ ಸಿಕಿದೆ. ಡೈರಿ ಬಹಿರಂಗವಾದರೆ ಎಲ್ಲ ಬಯಲಾಗುತ್ತೆ ಎಂದು ಬಿಎಸ್ ವೈ ಮತ್ತೊಮ್ಮೆ ಸಿ.ಎಂ ಸಿದ್ಧರಾಮಯ್ಯನ ವಿರುದ್ಧ ಬಾಂಬ್ ಹಾಕಿದ್ದಾರೆ.

ಸಚಿವರ ಅಕ್ರಮಕ್ಕೆ ಸಿಎಂ ಸಿದ್ದರಾಮಯ್ಯನವರ ಸಹಕಾರವಿದೆ. ಅವರು ಯಾವುದೇ ಅಕ್ರಮಗಳನ್ನ ಮಾಡಿದ್ರೆ ಸಿಎಂ ರಕ್ಷಣೆ ನೀಡುತ್ತಾರೆ ಎಂದು ಬಿಎಸ್ ವೈ ಕಾಂಗ್ರೆಸ್ ಸಚಿವರ ವಿರುದ್ಧ ವಾಗ್ದಾಳಿಯನ್ನ ಮಾಡಿದ್ದಾರೆ. ಶಾಸಕ ಎಂಟಿಬಿ ನಾಗರಾಜ್ ಮನೆಯಲ್ಲಿ 120 ಕೋಟಿ ಅಕ್ರಮ ಹಣ ಸಿಕ್ಕಿದೆ  ಈಗ ಶಾಸಕರ ವಿರುದ್ಧ  ಏನು ಕ್ರಮ ಕೈಗೊಳ್ಳುತ್ತೀರಿ ಎಂದು ಬಿ.ಎಸ್ ಯಡಿಯೂರಪ್ಪ , ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೋವಿನ ಕೂಗು ಕೇಳಲಿಲ್ಲ, ಕೆನಡಾ ಆಸ್ಪತ್ರೆ ನಿರ್ಲಕ್ಷ್ಯಕ್ಕೆ 8 ಗಂಟೆ ನರಳಾಡಿ ಹೃದಯಾಘಾತದಿಂದ ಭಾರತೀಯನ ಸಾವು!
ಅಧಿಕಾರ ಶಾಶ್ವತವಲ್ಲ: ಸಿಎಂ ಬದಲಾವಣೆ ಬಗ್ಗೆ ಮೌನ ಮುರಿದ ಯತೀಂದ್ರ ! ಡಿಕೆಶಿ ಹೇಳಿಕೆಗೆ ನೀಡಿದ ಉತ್ತರವೇನು?