ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಅಗ್ನಿ ಶ್ರೀಧರ್ ಪತ್ರಿಕಾಗೋಷ್ಟಿ

Published : Feb 12, 2017, 11:07 AM ISTUpdated : Apr 11, 2018, 01:09 PM IST
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಅಗ್ನಿ ಶ್ರೀಧರ್ ಪತ್ರಿಕಾಗೋಷ್ಟಿ

ಸಾರಾಂಶ

ಬೆಂಗಳೂರು (ಫೆ.12): ನೆನ್ನೆಯಷ್ಟೆ ಅಗ್ನಿ ಶ್ರೀಧರ್ ಮಾಧ್ಯಮದ ವಿರುದ್ಧ ಸಿಡಿದೆದ್ದಿದ್ದರು. ಇಂದು ಅವರೇ ಸುದ್ಧಿಗೊಷ್ಟಿ ನಡೆಸಿ ಅಸ್ಪತ್ರೆ ಸೇರೋಕೆ ಮುಂಚೆ ನಡೆದ ಸತ್ಯದ ಬಗ್ಗೆ ವಿವರವಾಗಿ ಹೇಳಿದರು. ನಿಜಕ್ಕೂ ತನಿಖೆ ವೇಳೆ ನಡೆದಿದ್ದೇನು ಅದರ ಡೀಟೇಲ್ಸ್​ ಇಲ್ಲಿದೆ.

ಬೆಂಗಳೂರು (ಫೆ.12): ನೆನ್ನೆಯಷ್ಟೆ ಅಗ್ನಿ ಶ್ರೀಧರ್ ಮಾಧ್ಯಮದ ವಿರುದ್ಧ ಸಿಡಿದೆದ್ದಿದ್ದರು. ಇಂದು ಅವರೇ ಸುದ್ಧಿಗೊಷ್ಟಿ ನಡೆಸಿ ಅಸ್ಪತ್ರೆ ಸೇರೋಕೆ ಮುಂಚೆ ನಡೆದ ಸತ್ಯದ ಬಗ್ಗೆ ವಿವರವಾಗಿ ಹೇಳಿದರು. ನಿಜಕ್ಕೂ ತನಿಖೆ ವೇಳೆ ನಡೆದಿದ್ದೇನು ಅದರ ಡೀಟೇಲ್ಸ್​ ಇಲ್ಲಿದೆ.

ಸತತ ಮುಕ್ಕಾಲು ಗಂಟೆ ಮಾತನಾಡಿದ ಅಗ್ನಿ ಶ್ರೀಧರ್ ಅಂದು ಶೂಟೌಟ್​ ಪ್ರಕರಣದ ಶಂಕಿತ ಆರೋಪಿ  ರೋಹಿತ್ ತನ್ನ ಮನೆಗೆ ಬಂದಿರೋದು ನಿಜ ಆದರೆ ಶೂಟೌಟ್​ ಬಗ್ಗೆ ನನಗೇನು ಮಾಹಿತಿ ಇಲ್ಲ. ಟಿವಿ ನೋಡಿದಾಗಲೇ ನನಗೂ ಗೊತ್ತಾಗಿದ್ದು ಎಂದರು. ಇನ್ನು  ಸರ್ಚ್​ ವಾರೆಂಟ್​ ತೆಗೆದುಕೊಂಡು ಬಂದಿದ್ದ ಪೊಲೀಸ್​ ಅಧಿಕಾರಿಗಳು​ ಶ್ರೀಧರ್​ ಗನ್​ ಮ್ಯಾನ್​ಗೆ ಥಳಿಸಿದ್ದರಂತೆ .  ಇದರಿಂದ ಅಗ್ನಿ ಕೋಪಗೊಂಡಿದ್ದಕ್ಕೆ ಅವರ ಕಪಾಳಕ್ಕೆ ಹೊಡೆದಿದ್ದಾರೆ ಎಂದು ಅವರೇ ಒಪ್ಪಿಕೊಂಡಿದ್ದಾರೆ . ಇನ್ನು  ಮನೆಯಲ್ಲಿ ಸಿಕ್ಕಿದ್ದ ಗಾಂಜಾ ತನ್ನ ಸೇವನೆಗೆಂದು ಒಪ್ಪಿಕೊಂಡಿರುವ ಅಗ್ನಿ, ಅದಕ್ಕೆ  ಸೈದ್ಧಾಂತಿಕ  ವಿವರಣೆ ಕೂಡ  ನೀಡಿದರು. ಇನ್ನು ಸುನೀಲ ಮತ್ತು ರೋಹಿತ್​ನನ್ನ ಪೊಲೀಸರು ಹೇಳಿದ ತಕ್ಷಣ ಸರಂಡರ್​ ಮಾಡಿಸಿದ್ದೂ ನಾನೆ ಎಂದು ಒಪ್ಪಿಕೊಂಡಿರುವ ಅಗ್ನಿ , ನಾನೀ ಪ್ರಕರಣದ ಆರೋಪಿಯಲ್ಲ ಎಂದು ಸಾರಿ ಸಾರಿ ಹೇಳಿದರು.

ಸದ್ಯಕ್ಕೆ ಮಧ್ಯಂತರ ಜಾಮೀನು ಪಡೆದಿರುವ ಅಗ್ನಿ  ಶ್ರೀಧರ್​ ಈ ಪ್ರಕರಣದಲ್ಲಿ ನಾನು ತಪ್ಪಿತಸ್ಥನೇ ಆಗಿದ್ರೆ ನನ್ನನ್ನ ಬಂಧಿಸಿ ಮತ್ತು ಆರೊಪಿ ನನ್ನ ತಮ್ಮನೇ ಆಗಿದ್ರೂ ಆತನನ್ನ ಶೂಟ್​ ಮಾಡಿ ಎಂದು ಓಪನ್​ ಚಾಲೆಂಜ್​ ಹಾಕಿದ್ರು. ಸದ್ಯಕ್ಕೆ  ಅಗ್ನಿ ಶ್ರೀಧರ್​ ಅವರ ಮುಂದಿನ ನಡೆ ಎನು ಎಂದು ಕಾದು ನೊಡಬೇಕಿದೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ರಸ್ತೆ-ಚರಂಡಿ ನಿರ್ಮಾಣದಿಂದ ಬಡವರು ಉದ್ದಾರ ಆಗ್ತಾರಾ?' ಗ್ಯಾರಂಟಿ ಸ್ಕೀಂ ಟೀಕೆಗೆ ಗೃಹಸಚಿವ ಪರಂ ತಿರುಗೇಟು!
ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನ, ದಾವಣಗೆರೆ ವ್ಯಾಪ್ತಿಯ ಶಾಲೆಗಳಿಗೆ ನಾಳೆ ರಜೆ