ಹಣ ಡಬಲ್ ಮಾಡಿಕೊಡುವುದಾಗಿ 110 ಕೋಟಿ ಪಂಗನಾಮ

Published : Feb 12, 2017, 11:21 AM ISTUpdated : Apr 11, 2018, 12:57 PM IST
ಹಣ ಡಬಲ್ ಮಾಡಿಕೊಡುವುದಾಗಿ 110 ಕೋಟಿ ಪಂಗನಾಮ

ಸಾರಾಂಶ

ಬೆಳಗಾವಿ (ಫೆ.12): ಹಣ ಡಬಲ್ ಮಾಡಿಕೊಡುತ್ತೆನೆ ಎಂದು ಬೆಳಗಾವಿಯ ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಕೆಲವು ನಗರ ಸೇವಕರಿಗೆ 110 ಕೋಟ್ಯಂತರ ರೂ ಟೋಪಿ ಹಾಕಲಾಗಿದೆ. ಭಟ್ಕಲ್ ಮೂಲದ ಝುಲ್ಫಿ ಖತೀಬ ಎಂಬಾತನೇ  ಕೋಟಿ ರೂಗಳ ಪಂಗನಾಮ ಹಾಕಿದ ಆರೋಪಿ, ಇನ್ನು ಹಣ ಡಬಲ್ ಆಗುತ್ತೆ ಎಂಬ ಆಸೆಯಿಂದ ಅನೇಕ  ರಿಯಲ್ ಎಸ್ಟೇಟ್ ಕುಳಗಳು,  ನಗರ ಸೇವಕರು ಝುಲ್ಫಿ ಖತೀಬನನ್ನು ನಂಬಿ ಕೋಟ್ಯಾಂತರ ರೂಪಾಯಿಗಳನ್ನು ಇವನಿಗೆ ನೀಡಿದ್ದಾರೆ.

ಆದರೆ ಇವನು ಮಾತ್ರ ಹಣ ನೀಡದೇ ಮೋಸ ಮಾಡಿದ್ದಾನೆ ಮೋಸ ಹೋದವರು ಮಾತ್ರ ಈ ಅಸಾಮಿಯನ್ನ ಸುಮ್ಮನೆ ಬಿಟ್ಟಿಲ್ಲ.  ಝುಲ್ಫಿಯನ್ನ ಹಿಡಿದು ಹಣ ಕೇಳಿದ್ದಾರೆ.  ಹಣವನ್ನು ಅಸಾಮಿ ನೀಡದೆ ಇದ್ದಾಗ  ಅಜ್ಞಾತ ಸ್ಥಳಕ್ಕೆ ಕೊಂಡೊಯ್ದು  ಆತನಿಗೆ ಮನಬಂದಂತೆ ಥಳಿಸಿದ್ದಾರೆ. ದೇಹದ ತುಂಬೆಲ್ಲ ಬರೆಹಾಕಿ, ಪಾದಗಳಿಗೆ ಲೈಟರ್’ನಿಂದ  ಬರೆ ಎಳೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಎಲ್ಲಾ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.  ಇನ್ನು ಮೋಸ ಹೋದವರು ಹಾಗೂ ಮೋಸಮಾಡಿದ ಝುಲ್ಫಿ ಖತೀಬ ಇದುವರೆಗೆ ಪೊಲೀಸರಿಗೆ ದೂರು ನೀಡಿಲ್ಲ. ಆದ್ರಿಂದ  ಝುಲ್ಫಿ ಪ್ರಕರಣ ಇನ್ನುವರೆಗೆ ಗಾಳಿ ಸುದ್ದಿಯಾಗಿದೆ. ಇನ್ನಾದ್ರೂ ಬೆಳಗಾವಿ ಪೊಲೀಸರು ಈ ಝುಲ್ಪಿ ಯಾರು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದರೆ ಮಾತ್ರ ಎಲ್ಲದಕ್ಕೂ ಉತ್ತರ ಸಿಗುತ್ತದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೋವಿನ ಕೂಗು ಕೇಳಲಿಲ್ಲ, ಕೆನಡಾ ಆಸ್ಪತ್ರೆ ನಿರ್ಲಕ್ಷ್ಯಕ್ಕೆ 8 ಗಂಟೆ ನರಳಾಡಿ ಹೃದಯಾಘಾತದಿಂದ ಭಾರತೀಯನ ಸಾವು!
ಅಧಿಕಾರ ಶಾಶ್ವತವಲ್ಲ: ಸಿಎಂ ಬದಲಾವಣೆ ಬಗ್ಗೆ ಮೌನ ಮುರಿದ ಯತೀಂದ್ರ ! ಡಿಕೆಶಿ ಹೇಳಿಕೆಗೆ ನೀಡಿದ ಉತ್ತರವೇನು?