BSY ಬೆಂಬಲಿಗರಿಗೆ ಗೇಟ್‌ಪಾಸ್, BCCIಗೆ ನೂತನ ಪ್ರಸಿಡೆಂಟ್; ಇಲ್ಲಿವೆ ಅ.14ರ ಟಾಪ್ 10 ಸುದ್ದಿ!

By Web Desk  |  First Published Oct 14, 2019, 5:12 PM IST

ಬಿ.ಎಸ್​. ಯಡಿಯೂರಪ್ಪ ಅವರನ್ನುಸೈಡ್‌ ಲೈನ್ ಮಾಡಲು ಎಲ್ಲಾ ರೀತಿ ಪ್ರಯತ್ನಗಳು ನಡೆಯುತ್ತಿವೆ ಎನ್ನುವ ಮಾತುಗಳಿಗೆ ಪುಷ್ಠಿ ಸಿಗುತ್ತಿದೆ. BSY ಅವರ ಬೆಂಬಲಿಗರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೇಟ್ ಪಾಸ್ ನೀಡಿದ್ದಾರೆ. ಬಿಸಿಸಿಐ ಅಧ್ಯಕ್ಷನಾಗಿ ಮಾಜಿ ನಾಯಕ ಸೌರವ್ ಗಂಗೂಲಿ ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ. ಬಿಗ್‌ಬಾಸ್‌ನಿಂದ ಒಂದೇ ದಿನದಲ್ಲಿ ಹೊರಬಿದ್ದು, ಮತ್ತೆ ಮನೆ ಸೇರಿದ ರವಿ ಬೆಳಗೆರೆ. ಅ.14ರಂದು ಓದುಗರ ಗಮನಸೆಳೆದ ಟಾಪ್ 10 ಸುದ್ದಿ ಇಲ್ಲಿವೆ.


1) ಬಿಜೆಪಿಯಲ್ಲಿ ಬಣ ರಾಜಕೀಯ: BSY ಬೆಂಬಲಿಗರಿಗೆ ಕಚೇರಿಯಿಂದ ಗೇಟ್ ಪಾಸ್!

Tap to resize

Latest Videos

undefined

ಬಿಎಸ್‌ವೈ ಹಾಗೂ ನಳೀನ್ ಕುಮಾರ್ ಕಟೀಲ್ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. 
ಬಿ.ಎಸ್​. ಯಡಿಯೂರಪ್ಪ ಅವರನ್ನುಸೈಡ್‌ ಲೈನ್ ಮಾಡಲು ಎಲ್ಲಾ ರೀತಿ ಪ್ರಯತ್ನಗಳು ನಡೆಯುತ್ತಿವೆ ಎನ್ನುವ ಬಿಎಸ್‌ವೈ ಬೆಂಬಲಿಗರ ಮಾತುಗಳು ಎಲ್ಲೋ ಒಂದು ಕಡೆ ನಿಜವೇನೋ ಅನ್ನಿಸುತ್ತಿವೆ. ಯಾಕಂದ್ರೆ ಯಡಿಯೂರಪ್ಪ ಅವರನ್ನು ಹೈಕಮಾಂಡ್ ಮೊದಲಿನ ರೀತಿಯಲ್ಲಿ ಟ್ರೀಟ್ ಮಾಡುತ್ತಿಲ್ಲ.

2) ಪರಮೇಶ್ವರ್‌ ಆಪ್ತ ರಮೇಶ್ ನೇಣಿಗೆ ಕೊರಳೊಡಿದ್ದೇಕೆ?, ಆತ್ಮಹತ್ಯೆಗೆ ಕಾರಣ ಬಹಿರಂಗ

 ಐಟಿ ದಾಳಿ ಮಾಡಿದ್ದಕ್ಕೆ ಹದರಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಆಪ್ತ ಸಹಾಯ ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.  ಅಷ್ಟಕ್ಕೂ ಪರಮೇಶ್ವರ್ ಪರಮಾಪ್ತ ರಮೇಶ್ ಆತ್ಮಹತ್ಯೆಗೆ ಕಾರಣವೇನು? ಐಟಿ ವಿಚಾರಣೆಗೆ ರಮೇಶ್ ಹೆದರಿದ್ದೇಕೆ ಗೊತ್ತಾ? ಐಟಿ ವಿಚಾರಣೆ ಬಳಿಕ ರಮೇಶ್ ನೇಣಿಗೆ ಕೊರಳೊಡಿದ್ದೇಕೆ? ಈ ಎಲ್ಲಾ ವಿಚಾರಗಳು ಇದೀಗ ಬಹಿರಂಗವಾಗಿದೆ.

3) ಡಿಕೆ ಶಿವಕುಮಾರ್ ಪತ್ನಿ, ತಾಯಿಗೂ ಇಡಿ ಬುಲಾವ್..!

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಇಡಿ ವಿಚಾರಣೆ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಅವರ ನಿವಾಸ, ಕಚೇರಿಗಳ ಮೇಲೆ ಕಳೆದ ಹಲವು ದಿನಗಳ ಹಿಂದೆ ನಡೆದ ಐಟಿ ದಾಳಿಗೆ ಸಂಬಂಧಿಸಿದಂತೆ ಜಾರಿ ಇರ್ದೇಶನಾಲಯ ಡಿಕೆಶಿ ಕುಟುಂಬದ ಬೆನ್ನುಬಿದ್ದಿದೆ, ದಾಳಿ ವೇಳೆ ಪತ್ತೆಯಾದ ಆಸ್ತಿ ಬಗ್ಗೆ ವಿವರಣೆ ನೀಡಲು ವಿಚಾರಣೆಗೆ ಹಾಜರಾಗುವಂತೆ ಅತ್ತ, ಸೊಸೆಗೆ ಇಡಿ ಸಮನ್ಸ್ ನೀಡಿದೆ.

4) ಮುಗಿಯದ ಜೈಲು ವಾಸ: ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ!

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ನಾಳೆ, ಮಂಗಳವಾರ ಮಧ್ಯಾಹ್ನ 03.30ಕ್ಕೆ ಮುಂದೂಡಿದೆ.

5) ಸೌರವ್ ಗಂಗೂಲಿಗೆ ಬಿಸಿಸಿಐ ಅಧ್ಯಕ್ಷ ಗಾದಿ; ಟ್ರೋಲ್ ಆದ ಕೋಚ್ ಶಾಸ್ತ್ರಿ!

ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಹಾಗೂ ಟ್ರೋಲಿಗರಿಗೂ ಅವಿನಾಭಾವ ಸಂಬಂಧವಿದೆ. ಕ್ರಿಕೆಟ್‌ನಲ್ಲಿ ಗೆದ್ದರೂ ಸೋತರೂ, ದೇಶದಲ್ಲೇ ಏನೇ ಆದರೂ ಮೊದಲು ಟ್ರೋಲ್ ಆಗುವುದು ಶಾಸ್ತ್ರಿ. ಇದೀಗ ಸೌರವ್ ಗಂಗೂಲಿಗೆ ಬಿಸಿಸಿಐ ಅಧ್ಯಕ್ಷ ಹುದ್ದೆ ಬಹುತೇಕ ಖಚಿತವಾಗುತ್ತಿದ್ದಂತೆ ಶಾಸ್ತ್ರಿ ಟ್ರೋಲ್ ಆಗಿದ್ದಾರೆ.

6) ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ರವಿ ಬೆಳಗೆರೆ

ಅನಾರೋಗ್ಯ ನಿಮಿತ್ತ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದ ಪತ್ರಕರ್ತ ರವಿ ಬೆಳೆಗೆರೆ ಈಗ ಆರಾಮಾಗಿದ್ದು ಮತ್ತೆ ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾರೆ ಎನ್ನಲಾಗಿದೆ.  ರಾತ್ರಿ ಬಾತ್ ರೂಮ್ ಗೆ ಹೋದ ವೇಳೆ ಕಾಲು ಜಾರಿ ಬಿದ್ದಿದ್ದರು. ಶುಗರ್ ಲೆವೆಲ್ ಹೆಚ್ಚು ಕಡಿಮೆ ಆಗಲು ಶುರುವಾಗಿತ್ತು. ಕೂಡಲೇ ಅವರನ್ನು ಪದ್ಮನಾಭ ನಿವಾಸಕ್ಕೆ ಕರೆ ತರಲಾಗಿತ್ತು. ಇದೀಗ ಆರೋಗ್ಯದಲ್ಲಿ ಚೇತರಿಕೆಯಾಗಿದ್ದು ಮತ್ತೆ ಅವರು ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾರೆ.

7) ನಂ 1 ಸೀರಿಯಲ್ ‘ಜೊತೆ ಜೊತೆಯಲಿ’ಗೂ ತಟ್ಟಿತು ಕಳಂಕ; ಇದನ್ನೂ ಕದ್ಬಿಟ್ರಾ?

ನವಿರಾದ ಪ್ರೇಮ ಕಥೆ, ಮಧ್ಯಮ ವರ್ಗ ಕುಟುಂಬದಲ್ಲಿ ನಡೆಯುವ ಸಾಂಸಾರಿಕ ತಾಪತ್ರಯಗಳು, ಹೊಸ ರೀತಿಯ ನಿರೂಪಣೆ, ಕತೆ ಇವೆಲ್ಲವೂ ಜೊತೆ ಜೊತೆಯಲಿ ಪ್ಲಸ್ ಪಾಯಿಂಟ್. ಪ್ರೇಕ್ಷಕರಿಗೂ ಕೂಡಾ ಆರ್ಯವರ್ಧನ್- ಅನು ನಡುವಿನ ಪ್ರೀತಿ ಇಷ್ಟವಾಗಿದೆ. ಎಲ್ಲ ಧಾರಾವಾಹಿಯಂತೆ ಒಂದೇ ರೀತಿ ಕಥೆ ಇದಲ್ಲ. ಎಲ್ಲಿಯೂ ಬೋರ್ ಹೊಡೆಸುವುದಿಲ್ಲ ಎನಿಸಿದ್ದಂತೂ ಸುಳ್ಳಲ್ಲ. ಆದರೆ ಈ ಧಾರಾವಾಹಿ ಸ್ವಮೇಕ್ ಅಲ್ಲ. ಮರಾಠಿ ಧಾರಾವಾಹಿ  ‘ತುಲ ಪಹತೆ ರೆ’ ರಿಮೇಕ್ ಎಂಬ ಮಾತು ಕೇಳಿ ಬರುತ್ತಿದೆ. 

8) ಮಂಡ್ಯ : DYSP ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಶ್ರೀರಂಗಪಟ್ಟಣದ dysp ಯೋಗೇಂದ್ರನಾಥ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದೆ.   ನಾನು ಆತ್ಮಹತ್ಯೆಗೆ ಯತ್ನಿಸಿಲ್ಲ, ನಾನು ಚೆನ್ನಾಗಿ ಇದ್ದೇನೆ. ಕೆಲವು ಪಟ್ಟಭದ್ರ ಹಿತಾಶಕ್ತಿಗಳು ಈ ಪ್ರಕರಣವನ್ನು ಬೇರೆ ರೀತಿ ತಿರುಗಿಸಿದ್ದಾರೆ ಎಂದು ಮೈಸೂರಿನಲ್ಲಿಂದು ಯೋಗೇಂದ್ರನಾಥ್ ಹೇಳಿದರು.

9) ಬಿಜೆಪಿ ಸರ್ಕಾರಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಗಂಡ ತಪರಾಕಿ!

ದೇಶದ ಅರ್ಥಿಕ ಸ್ಥಿತಿ ಕುಸಿತ ಕಳವಳ ವ್ಯಕ್ತಪಡಿಸಿದ ಸಚಿವೆ ನಿರ್ಮಲಾ ಸೀತಾರಾಮನ್ ಗಂಡ| ದೇಶದ ಆರ್ಥಿಕತೆ ಮೇಲೆತ್ತುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ| ಇನ್ನಾದರೂ ಸರ್ಕಾರ ಎಚ್ಚೆತ್ತುಕಿಒಳ್ಳಬೇಕು ಎಂದ ಪರಾಕಲ ಪ್ರಭಾಕರ್

10) ಮಾರುತಿ ಎರ್ಟಿಗಾ ಟೂರ್ M ಡೀಸೆಲ್ ಕಾರು ಬಿಡುಗಡೆ!

ಮಾರುತಿ ಸುಜುಕಿ ಬಿಡುಗಡೆ ಮಾಡಿದ ನೂತನ ಎರ್ಟಿಗಾ ಕಾರು ಯಶಸ್ಸು ಸಾಧಿಸಿದೆ. ಇದೀಗ ಎರ್ಟಿಗಾ ಟೂರ್ M ಕಾರು ಮಾರುಕಟ್ಟೆ ಪ್ರವೇಶಿಸಿದೆ. ಈಗಾಗಲೇ ಎರ್ಟಿಗೂ ಟೂರ್ M ಪೆಟ್ರೋಲ್ ಹಾಗೂ CNG ವೇರಿಯೆಂಟ್ ಬಿಡುಗಡೆಯಾಗಿದೆ. ಇದೀಗ ಡೀಸೆಲ್ ವೇರಿಯೆಂಟ್ ಲಾಂಚ್ ಆಗಿದೆ. ನೂತನ ಕಾರಿನ ಬೆಲೆ 9.8 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ ದೆಹಲಿ).
 

click me!