ನವದೆಹಲಿ[ಅ.14]: ಆರ್ಥಿಕ ತಜ್ಞ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗಂಡ ಪರಾಕಲ ಪ್ರಭಾಕರ್ ದೇಶದ ಆರ್ಥಿಕ ಸ್ಥಿತಿ ಕುಸಿಯುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮೋದಿ ಸರ್ಕಾರ ಸೂಕ್ತ ನೀತಿ ಜಾರಿಗೊಳಿಸುವಲ್ಲಿ ವಿಫಲಗೊಂಡಿದೆ ಎಂದು ಕಿಡಿ ಕಾರಿರುವ ಪ್ರಭಾಕರ್, ಸರ್ಕಾರ ಇನ್ನಾದರೂ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.

GST ಕುರಿತ ನಿರ್ಮಾಲಾ ಸೀತಾರಾಮನ್ ಹೇಳಿಕೆ: ಚೆನ್ನೈನಲ್ಲಿರುವ ಮೋದಿ ಕೇಳ್ಬೇಕೆ?

ಆಂಗ್ಲ ಪತ್ರಿಕೆಯೊಂದಕ್ಕೆ ಬರೆದ ಅಂಕಣದಲ್ಲಿ ಈ ಕುರಿತು ಬರೆದಿರುವ  ಪರಾಕಲ ಪ್ರಭಾಕರ್ 'ಭಾರತದ ಅರ್ಥ ವ್ಯವಸ್ಥೆ ಹದಗೆಟ್ಟಿದೆ. ಸರ್ಕಾರ ಈ ಮಾತನ್ನು ನಿರಾಕರಿಸಿದರೂ, ಅಂಕಿ ಅಂಶಗಳನ್ನು ಕಡೆಗಣಿಸಲು ಸಾಧ್ಯವಿಲ್ಲ. ಹಲವಾರು ಕ್ಷೇತ್ರಗಳು ಸಂಕಷ್ಟದಲ್ಲಿರುವುದು ಸ್ಪಷ್ಟವಾಗಿದೆ' ಎಂದಿದ್ದಾರೆ. 

ಇದೇ ವೇಳೆ ಲೋಕಸಭಾ ಚುನಾವಣೆ ಕುರಿತಾಗಿಯೂ ಉಲ್ಲೇಖಿಸಿರುವ ಪ್ರಭಾಕರ್ 'ಆರ್ಥಿಕ ಕುಸಿತವನ್ನು ಸರಿಪಡಿಸಲು ಸರ್ಕಾರದ ಬಳಿ ಯೋಜನೆಗಳಿವೆ ಎಂಬುವುದಕ್ಕೆ ಯಾವುದೇ ಸಾಕ್ಷಿ ಇಲ್ಲ. ಬಹುಶಃ ಬಿಜೆಪಿ ಪಕ್ಷದ ನಾಯಕರಿಗೆ ಈ ಸತ್ಯ ತಿಳಿದಿತ್ತು. ಇದೇ ಕಾರಣದಿಂದ ಲೋಕಸಭಾ ಚುನಾವಣಾ ಪ್ರಚಾರದಕಲ್ಲಿ ಪಕ್ಷ ಎಲ್ಲಿಯೂ ಆರ್ಥಿಕ ವಿಚಾರವನ್ನು ಪ್ರಸ್ತಾಪಿಸಲಿಲ್ಲ. ಬುದ್ಧಿವಂತಿಕೆಯಿಂದ ಕೇವಲ ರಾಷ್ಟ್ರವಾದಿ ಹಾಗೂ ಭದ್ರತೆಯ ಅಂಜೆಂಡಾ ಮುಂದಿಟ್ಟಿತ್ತು' ಎಂದು ಕಿಡಿ ಕಾರಿದ್ದಾರೆ.

ಪಿಎಂಸಿ ಹಗರಣ: ಸಚಿವೆ ನಿರ್ಮಲಾಗೆ ಬ್ಯಾಂಕ್‌ ಠೇವಣಿದಾರರಿಂದ ಮುತ್ತಿಗೆ

ಇನ್ನು ಈ ಸಂಬಂಧ ಮೋದಿ ಸರ್ಕಾರಕ್ಕೆ ಕಿವಿ ಮಾತು ಹೇಳಿರುವ ಪ್ರಭಾಕರ್ 'ಬಿಜೆಪಿ ನೆಹರೂ ಸರ್ಕಾರವನ್ನು ದೂಷಿಸುವುದನ್ನು ನಿಲ್ಲಿಸಿ. ಬದಲಾಗಿ ನರಸಿಂಹ ರಾವ್ ಹಾಗೂ ಮನಮೋಹನ್ ಸಿಂಗ್ ಸರ್ಕಾರ ರೂಪಿಸಿಸದ್ದ ಆರ್ಥಿಕ ಮಾದರಿ ಅಂದರೆ ಉದಾರೀಕರಣವನ್ನು ಅಳವಡಿಸಿಕೊಳ್ಳಬೇಕು' ಎಂದಿದ್ದಾರೆ.

ಅಕ್ಟೋಬರ್ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: