BSY ಕಾಲಬುಡದಲ್ಲಿ ಕೊರೋನಾ, ಈ ವರ್ಷ IPL ಸಾಧ್ಯಾನಾ? ಜು.10ರ ಟಾಪ್ 10 ಸುದ್ದಿ!

Published : Jul 10, 2020, 04:55 PM ISTUpdated : Jul 10, 2020, 04:56 PM IST
BSY ಕಾಲಬುಡದಲ್ಲಿ ಕೊರೋನಾ, ಈ ವರ್ಷ IPL ಸಾಧ್ಯಾನಾ? ಜು.10ರ ಟಾಪ್ 10 ಸುದ್ದಿ!

ಸಾರಾಂಶ

ಕೇಂದ್ರ ಸರ್ಕಾರ ನೌಕರರಿಗೆ ಕನಿಷ್ಠ ವೇತನ ನಗಿದಿ ಮಾಡಲು ಮುಂದಾಗಿದೆ. ಈ ಮೂಲಕ 50 ಕೋಟಿ ನೌಕರರಿಗೆ ನೆರವಾಗಲಿದೆ. ತಾಯಿ ತನ್ನ ಮಗುವನ್ನು ಕಟ್ಟಡದ ಮೇಲಿಂದ ಎಸೆದಾಗ ಯುವಕನೋರ್ವ ಓಡೋಡಿ ಬಂದು ಮಗುವಿನ ಪ್ರಾಣ ಉಳಿಸಿದ್ದಾನೆ. ಸಿಎಂ ಬಿಎಸ್ ಯಡಿಯೂಪ್ಪ ಕಾರು ಚಾಲಕನಿಗೆ ಕೊರೋನಾ ದೃಢಪಟ್ಟ ಹಿನ್ನಲೆಯಲ್ಲಿ ಬಿಎಸ್‌ವೈ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಚೀನಾ ಉತ್ಪನ್ನ ಜಾಹೀರಾತು ರದ್ದು ಮಾಡಿದ ನಟ, ಐಪಿಎಲ್ ಆಯೋಜನೆ ತಯಾರಿಯಲ್ಲಿ ಬಿಸಿಸಿಐ ಸೇರಿದಂತೆ ಜುಲೈ 10ರ ಟಾಪ್ 10 ನ್ಯೂಸ್ ಇಲ್ಲಿವೆ.

ಕೊರೋನಾ ಸಂಕಷ್ಟದ ನಡುವೆ ಮೋದಿಯಿಂದ ಬಂಪರ್ ಗಿಫ್ಟ್; ನೌಕರರಿಗೆ ಕನಿಷ್ಠ ವೇತನ ನಿಗದಿ?

ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ಕಾರ್ಮಿಕರ ನಿಯಮದಲ್ಲಿ ಮಹತ್ತರ ತಿದ್ದುಪಡಿ ಮಾಡುತ್ತಿದೆ. ತಿದ್ದುಪಡಿಯಲ್ಲಿನ ಪ್ರಮುಖ ಅಂಶ ತಿಂಗಳ ಸಂಬಳ ಪಡೆಯುವ ನೌಕರರಿಗೆ ಕನಿಷ್ಠ ವೇತನ ನಿಗದಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಚೀನಾ ಉತ್ಪನ್ನದೊಂದಿಗೆ ಒಪ್ಪಂದ ಕ್ಯಾನ್ಸಲ್ ಮಾಡಿಕೊಂಡ ಮೊದಲ ಭಾರತೀಯ ನಟ

ಚೀನಾ ವಸ್ತುಗಳನ್ನು ಭಾರತೀಯರು ನಿಷೇಧಿಸುತ್ತಿರುವ ಬೆನ್ನಲ್ಲೇ ಇದೀಗ ಬಾಲಿವುಡ್ ಯುವನಟ ಕಾರ್ತಿಕ್ ಆರ್ಯನ್ ಚೈನೀಸ್ ಫೋನ್‌ ಜೊತೆಗಿನ ಕೋಟಿ ಬೆಲೆ ಬಾಳುವ ಡೀಲ್ ಒಂದನ್ನು ಕ್ಯಾನ್ಸಲ್ ಮಾಡಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.

ಮಗುವನ್ನು ಕಟ್ಟಡದ ಮೇಲಿಂದ ಎಸೆದ ತಾಯಿ, ಓಡಿ ಬಂದು ಕ್ಯಾಚ್ ಹಿಡಿದ ಯುವಕ...

ಬರಿಗಾಲಲ್ಲಿ ಓಡಿ ಬಂದ ಯುವಕ ತಾಯಿ ಮಗುವನ್ನು ಕಟ್ಟಡದ ಮೇಲಿಂದ ಎಸೆಯುವಾಗ ಸರಿಯಾದ ಸಮಯಕ್ಕೆ ಬಂದು ಮಗುವನ್ನು ಹಿಡಿದುಕೊಂಡಿದ್ದಾನೆ.

ಕೊರೋನಾ ಔಷಧ ಕಂಡು ಹಿಡಿಯುವ ಪೈಪೋಟಿ ಮಧ್ಯೆ ಸಿಕ್ತು ಏಡ್ಸ್‌ಗೆ ಮದ್ದು!.

ಮಹಾಮಾರಿ ಕೊರೋನಾಗೆ ಔಷಧ ಕಂಡು ಹಿಡಿಯುವಲ್ಲಿ ತಲ್ಲೀನರಾಗಿದ್ದಾರೆ. ಆದರೀಗ ಈ ಎಲ್ಲಾ ಪೈಪೋಟಿ ನಡುವೆ ಕೊರೋನಾಗೆ ಔ‍ಷಧಿ ಹುಡುಕುವ ವೇಳೆ ಏಡ್ಸ್‌ ಗುಣಪಡಿಸುವ ಔಷಧ ಸಿದ್ಧವಾಗಿದ್ದು, ಸದ್ಯ ಇದನ್ನು ಮಾನವರ ಮೇಲೆ ಪ್ರಯೋಗ ನಡೆಸಲಾಗುತ್ತದೆ.

ಫ್ಲಿಪ್ ಕಾರ್ಟ್‌ ಡಿಲೆವರಿಗೆ ಕೊಟ್ಟಿದ್ದ ಅಡ್ರೆಸ್ ಕಂಡು ದಂಗಾದವರು ಒಬ್ರಾ..ಇಬ್ರಾ!

ಡಿಲೆವರಿ ಮಾಡುವ ಹುಡುಗರು ಅಡ್ರೆಸ್ ತಪ್ಪಿಸಿಕೊಳ್ಳುವುದು, ಆರ್ಡರ್ ಮಾಡಿದ್ದು ಒಂದು ಬಂದಿದ್ದು ಒಂದು... ಸಾಮಾನ್ಯ ಬಾಡಿಲೋಶನ್ ಗೆ ದುಬಾರಿ ವಸ್ತುವೊಂದು ಬಂದು ಅದನ್ನು ನೀವೇ ಇಟ್ಟುಕೊಳ್ಳಿ ಎಂದು  ಹೇಳಿದ್ದು ಎಲ್ಲವನ್ನು ಕೇಳಿದ್ದೇವೆ. ಆದರೆ ಇದು ಅದೆಲ್ಲದಕ್ಕಿಂತ ಭಿನ್ನವಾದ ಸ್ಟೋರಿ

ಸಿಎಂ ಬದಲಿ ಕಾರು ಚಾಲಕನಿಗೆ ವಕ್ಕರಿಸಿದ ಕೊರೋನಾ;  BSY ಸೆಲ್ಫ್ ಕ್ವಾರಂಟೈನ್

ಸಿಎಂ ಯಡಿಯೂರಪ್ಪ ಅವರಿಗೆ ಕೊರೋನಾ ಕಂಟಕ ಕಾಡತೊಡಗಿದೆ. ಬಿಎಸ್‌ ಯಡಿಯೂರಪ್ಪ ಸುತ್ತಲಿರುವವರಿಗೆ ಕೊರೋನಾ ತಗುಲಿರುವುದು ಆತಂಕಕ್ಕೆ ಕಾರಣವಾಗಿದೆ.

2021ರ ಜೂನ್‌ವರೆಗೂ ಏಷ್ಯಾ​ಕಪ್‌ ಮುಂದೂ​ಡಿ​ಕೆ..! ಐಪಿಎಲ್ ಆಯೋಜನೆಗೆ ಮರುಜೀವ.

ನಿರೀಕ್ಷೆಯಂತೆ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯು ಜೂನ್ 2021ರವರೆಗೆ ಮುಂದೂಡಲ್ಪಟ್ಟಿದೆ. ಗುರುವಾರವಷ್ಟೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಬಗ್ಗೆ ತುಟಿಬಿಚ್ಚಿದ್ದರು. ಇದೀಗ ಎಸಿಬಿ ಅಧಿಕೃತ ಹೇಳಿಕೆ ನೀಡಿದೆ. 

ಸುಶಾಂತ್ ಆತ್ಮಹತ್ಯೆ: ಕರಣ್, ಸಲ್ಮಾನ್ ಖಾನ್ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸಲ್ಮಾನ್‌ ಖಾನ್ ಹಾಗೂ ಕರಣ್ ಜೋಹರ್ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಬಿಹಾರ ಹೈಕೋರ್ಟ್ ವಜಾಗೊಳಿಸಿದೆ.

8 ಪೊಲೀಸರ ಹತ್ಯೆಗೈದಿದ್ದ ವಿಕಾಸ್ ದುಬೆ ಎನ್‌ಕೌಂಟರ್‌ಗೆ ಬಲಿ! 

ಉತ್ತರ ಪ್ರದೇಶದ ಕಾನ್ಪುರದಲ್ಲಿ ಡಿವೈ ಎಸ್​ಪಿ ಸೇರಿದಂತೆ 8 ಮಂದಿ ಪೊಲೀಸರ ಹತ್ಯೆಗೈದು ತಲೆ ಮರೆಸಿಕೊಂಡಿದ್ದ ಗ್ಯಾಂಗ್‌ಸ್ಟರ್  ವಿಕಾಸ್ ದುಬೆ| ಕಾರು ಪಲ್ಟಿಯಾಗಿ ವಿಕಾಸ್‌ ದುಬೆ ಮತ್ತೆ ಪರಾರಿಯಾಗಲು ಯತ್ನ| ವಿಕಾಸ್‌ ದುಬೆ ಎನ್​ಕೌಂಟರ್‌ಗೆ ಬಲಿ

ನಾನು ವೇಶ್ಯಾವಾಟಿಕೆ ನಡೆಸುತ್ತೇನೆ, ಏನೀವಾಗ? ಮಹಿಳೆ ಆವಾಜ್

ಮುಂಬೈ-ಪುಣೆಯಿಂದ ಯುವತಿಯರನ್ನು ಕರೆಸಿಕೊಂಡು ಮಹಿಳೆಯೊಬ್ಬರು ಮಾಂಸದಂಧೆ ಮಾಡುತ್ತಿದ್ದಾರೆ. ವಿಜಯಪುರದ ಗಾಂಧಿನಗರದಲ್ಲಿ ಇಂತಹದ್ದೊಂದು ಅನೈತಿಕ ಚಟುವಟಿಕೆ ನಡೆಯುತ್ತಿದೆ. ಪ್ರಶ್ನಿಸಲು ಹೋದ ಸ್ಥಳೀಯರ ವಿರುದ್ಧವೇ ಮಹಿಳೆ ಆವಾಜ್ ಹಾಕಿದ್ದಾಳೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೈಲು ಟಿಕೆಟ್ ಬುಕಿಂಗ್‌ನಿಂದ ಪ್ರಯಾಣ , ಹಿರಿಯ ನಾಗರೀಕರಿಗಿದೆ ಭರ್ಜರಿ ವಿನಾಯಿತಿ
ಡಾ ಜಿ ಪರಮೇಶ್ವರ ರಾಜ್ಯದ ಸಿಎಂ ಆಗಬೇಕು, ರಾಜಕೀಯದಲ್ಲಿ ಸಂಚಲನ ಮೂಡಿಸೋ ಹೇಳಿಕೆ ಕೊಟ್ಟ ಕೇಂದ್ರ ಸಚಿವ ವಿ. ಸೋಮಣ್ಣ!