BSYಗೆ ಸಂಪುಟ ಟೆನ್ಶನ್, ಭಾರತಕ್ಕೆ ಬಂತು ಕೊರೊನಾ ವೈರಸ್; ಜ.30ರ ಟಾಪ್ 10 ಸುದ್ದಿ!

By Suvarna News  |  First Published Jan 30, 2020, 4:54 PM IST

ಸಚಿವ ಸ್ಥಾನಕ್ಕಾಗಿ ಒತ್ತಡ ಹೆಚ್ಚಾಗುತ್ತಿದ್ದಂತೆ,  ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿಗೆ ತೆರಳಿದ್ದಾರೆ.  ಸಿಎಎ ವಿರೋಧಿ ಪ್ರದರ್ಶನಕಾರರತ್ತ ಆಗುಂತಕನೋರ್ವ ಗುಂಡು ಹಾರಿಸಿದ ಘಟನೆ ದೆಹಲಿಯ ಜಾಮಿಯಾ ಮಿಲ್ಲಿಯಾ ವಿವಿ ಬಳಿ ನಡೆದಿದೆ. ಗಲ್ಲು ಶಿಕ್ಷೆ ಮುಂದೂಡಲು ನಿರ್ಭಯಾ ಹತ್ಯಾಚಾರಿ ಮಾಡಿದ ಪ್ರಯತ್ನಕ್ಕೆ ಸುಪ್ರೀಂ ಕೋರ್ಟ್ ಶಾಕ್ ನೀಡಿದೆ. ರಶ್ಮಿಕಾ ಮಂದಣ್ಣ ಹಾಟ್ ಲುಕ್, ಅಪಘಾತಕ್ಕೀಡಾದ ಕೊಬೆ ಬ್ರಿಯಾಂಟ್ ಹೆಲಿಕಾಪ್ಟರ್ ಸೇರಿದಂತೆ ಜನವರಿ 30ರ ಟಾಪ್ 10 ಸುದ್ದಿ ಇಲ್ಲಿವೆ.


ಭಾರತಕ್ಕೆ ಕಾಲಿಟ್ಟ ಕೊರೋನಾ ವೈರಸ್: ಕೇರಳದಲ್ಲಿ ಮೊದಲ ರೋಗಿ ಪತ್ತೆ!

Tap to resize

Latest Videos

undefined

ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ಭಾರತಕ್ಕೂ ಕಾಲಿಟ್ಟಿದೆ. ವುಹಾನ್ ನಲ್ಲಿ ವ್ಯಾಸಂಗ ನಡೆಸುತ್ತಿದ್ದ, ಸದ್ಯ ತವರುನಾಡು ಕೇರಳಕ್ಕೆ ಮರಳಿರುವ ವಿದ್ಯಾರ್ಥಿಯಲ್ಲಿ ಸೋಂಕು ಪತ್ತೆಯಾಗಿದೆ. ವೈದ್ಯರು ಹಾಗೂ ಸರ್ಕಾರಿ ಅಧಿಕಾರಿಗಳು ಇದನ್ನು ಖಚಿತಪಡಿಸಿದ್ದಾರೆ. 

'ಏ ಲೋ ಆಜಾದಿ..'ಸಿಎಎ ವಿರೋಧಿಗಳತ್ತ ಗುಂಡು ಹಾರಿಸಿದ ಆಗುಂತಕ!

ಸಿಎಎ ವಿರೋಧಿ ಪ್ರದರ್ಶನಕಾರರತ್ತ ಆಗುಂತಕನೋರ್ವ ಗುಂಡು ಹಾರಿಸಿದ ಘಟನೆ ದೆಹಲಿಯ ಜಾಮಿಯಾ ಮಿಲ್ಲಿಯಾ ವಿವಿ ಬಳಿ ನಡೆದಿದೆ. ಸಿಎಎ ವಿರೋಧಿ ಪ್ರತಿಭಟನಾಕಾರರು ಮೆರವಣಿಗೆ ಹೊರಟಿದ್ದಾಗ ಏಕಾಏಕಿ ನುಗ್ಗಿದ ಆಗುಂತಕ, ತನ್ನ ಬಳಿಯಿದ್ದ ಪಿಸ್ತೂಲಿನಿಂದ ಪ್ರದರ್ಶನಕಾರರತ್ತ ಗುಂಡು ಹಾರಿಸಿದ್ದಾನೆ.

ಗದಗ: ಕನ್ನಡ ಚಿತ್ರಂಗದ ಹಿರಿಯ ನಟ ದೊಡ್ಡಣ್ಣನ ಪುತ್ರನ ಮದುವೆಯ ಸಂಭ್ರಮ...

ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಅವರ ಪುತ್ರನ ಮದುವೆ ಇಂದು(ಗುರುವಾರ) ನಗರದಲ್ಲಿ ನಡೆದಿದೆ. ಗದಗ ನಗರದ ಗುಗ್ಗರಿ ಕುಟುಂಬದ ಮಧು ಅವರನ್ನ ದೊಡ್ಡಣ್ಣ ಅವರ ಸುಪುತ್ರ ಸುಗುರೇಶ ವರಿಸಿದ್ದಾರೆ. 


ನಿರ್ಭಯಾ ಹತ್ಯಾಚಾರಿ ಅಕ್ಷಯ್‌ಗೆ ಸುಪ್ರೀಂ ಶಾಕ್: ಆಟ ಆರಂಭಿಸುವ ಮೊದಲೇ ಅಂತ್ಯ!

ಗಲ್ಲು ಶಿಕ್ಷೆ ದಿನಾಂಕ ಮುಂದೂಡಲು ನಾನಾ ಪ್ರಯತ್ನ ನಡೆಸುತ್ತಿರುವ ನಿರ್ಭಯಾ ಅತ್ಯಾಚಾರಿಗಳಿಗೆ ಸುಪ್ರೀಂ ಕೋರ್ಟ್ ಶಾಕ್ ನೀಡಿದೆ. ಅಪರಾಧಿಗಳಲ್ಲೊಬ್ಬನಾದ ಮುಕೇಶ್ ಕುಮಾರ್ ಸಲ್ಲಿಸಿದ್ದ ಅರ್ಜಿ ವಜಾಗೊಂಡ ಬೆನ್ನಲ್ಲೇ, ಮತ್ತೊಬ್ಬ ದೋಷಿ ಅಕ್ಷಯ್ ಸಿಂಗ್ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸರ್ವೋಚ್ಛ ನ್ಯಾಯಾಲಯ ವಜಾಗೊಳಿಸಿದೆ.


ಸಂಪುಟ ವಿಸ್ತರಣೆ: ಬ್ರೇಕಿಂಗ್ ನ್ಯೂಸ್ ಕೊಟ್ಟು ದೆಹಲಿ ವಿಮಾನ ಏರಿದ ಬಿಎಸ್‌ವೈ

 ಸಂಪುಟ ವಿಸ್ತರಣೆ ಸಂಬಂಧ ಸಚಿವಾಕಾಂಕ್ಷಿ ಒತ್ತಡ ಬಿಎಸ್‌ ಯಡಿಯೂರಪ್ಪಗೆ ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆಗೆ ಹೈಕಮಾಂಡ್‌ನಿಂದ ಒಪ್ಪಿಗೆ ಪಡೆದುಕೊಡು ಬರಲು ಇಂದು (ಗುರುವಾರ) ದೆಹಲಿಗೆ ತೆರಳಿದರು.

ಸೂಪರ್ ಗೆಲುವಿನ ಹೀರೋ ಯಾರು? ಶಮಿ ಅಥವಾ ರೋಹಿತ್!

ನ್ಯೂಜಿಲೆಂಡ್ ವಿರುದ್ದದ ಟಿ20 ಸರಣಿಯನ್ನು  ಇನ್ನೂ 2 ಪಂದ್ಯ ಬಾಕಿ ಇರುವಂತೆ ಗೆದ್ದುಕೊಂಡಿದೆ. ಈ ಪಂದ್ಯವನ್ನು ಸೂಪರ್ ಓವರ್ ಮೂಲಕ ಗೆದ್ದುಕೊಂಡ ಭಾರತ ಇತಿಹಾಸ ರಚಿಸಿದೆ. ಭಾರತದ ಸೂಪರ್ ಗೆಲುವಿನ ಹೀರೋ ಯಾರು? ಮೊಹಮ್ಮದ್ ಶಮಿ ಅಥವಾ ರೋಹಿತ್ ಶರ್ಮಾ? ಈ ಸ್ಟೋರಿಯಲ್ಲಿ ಪಂದ್ಯ ಹೀರೋ ವಿವರ ಲಭ್ಯ.

'ಭೀಷ್ಮ' ಚಿತ್ರದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಫೋಸ್ ನೀಡಿದ ರಶ್ಮಿಕಾ!

ಕರ್ನಾಟಕ ಸ್ಟೇಟ್‌ ಕ್ರಶ್‌ ರಶ್ಮಿಕಾ ಮಂದಣ್ಣಗೆ ಕಾಲಿವುಡ್‌ನಲ್ಲಿ ಅವಕಾಶಗಳು ಒಂದರ ಮೇಲೊಂದು ಹುಡುಕಿಕೊಂಡು ಬರುತ್ತಿವೆ. ಕೆಲವು ದಿನಗಳ ಹಿಂದೆ ಟ್ಟಿಟರ್‌ ಖಾತೆಯಲ್ಲಿ 'ಭೀಷ್ಮ' ಚಿತ್ರದ 'Whattey Beauty' ವಿಡಿಯೋ ಪ್ರೊಮೋ ಬಿಡುಗಡೆ ವಿಚಾರವನ್ನು ಬೋಲ್ಡ್‌ ಫೋಟೋ ಮೂಲಕವೇ ರಿವೀಲ್‌ ಮಾಡಿದ್ದರು.

ಮೋದಿ ಸರ್ಕಾರದ ಹಿಂದಿನ 6 ಬಜೆಟ್‌ ಹೇಗಿದ್ದವು?

ಈ ಬಾರಿಯ ಬಹು ನಿರೀಕ್ಷಿತ ಕೇಂದ್ರ ಬಜೆಟ್‌ ಇದೇ ಫೆ.1ರಂದು ಮಂಡನೆಯಾಗಲಿದೆ. ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮಂಡಿಸುತ್ತಿರುವ 8ನೇ ಬಜೆಟ್‌ (2019ರ ಮಧ್ಯಂತರ ಬಜೆಟ್‌ ಸೇರಿದಂತೆ) ಹಾಗೂ ವಿತ್ತ ಸಚಿವೆಯಾಗಿ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸುತ್ತಿರುವ 2ನೇ ಬಜೆಟ್‌. ಈ ಹಿನ್ನೆಲೆಯಲ್ಲಿ ಮೋದಿ ಸರ್ಕಾರದ ಈ ಹಿಂದಿನ ಬಜೆಟ್‌ ಹೇಗಿದ್ದವು, ಅವುಗಳ ಆದ್ಯತೆ ಏನಾಗಿತ್ತು ಎಂಬ ಕಿರು ಹಿನ್ನೋಟ ಇಲ್ಲಿದೆ.

ವಿಶ್ವದಲ್ಲೇ ಅತ್ಯಂತ ಸುರಕ್ಷಿತ ಹೆಲಿಕಾಪ್ಟರ್; ಕೊಬೆಗೆ ಸಾವು ತಂದಿತು ಇದೇ ಚಾಪರ್!

ಹೆಲಿಕಾಪ್ಟರ್ ಅಪಘಾತದಲ್ಲಿ ಬಾಸ್ಕೆಟ್ ಬಾಲ್ ದಿಗ್ಗಜ ಕೊಬೆ ಬ್ರಯಾಂಟ್ ಹಾಗೂ ಪುತ್ರಿ 13 ವರ್ಷದ ಗಿಯಾನ್ನ ಸಾವಿನಿಂದ ಯಾರೂ ಹೊರಬಂದಿಲ್ಲ. ಈ ಸಾವು ಮತ್ತೆ ಮತ್ತೆ ಅಭಿಮಾನಿಗಳ ಹೃದಯವನ್ನು ಘಾಸಿಗೊಳಿಸುತ್ತಿದೆ. ಇದರ ಬೆನ್ನಲ್ಲೇ ಹೆಲಿಕಾಪ್ಟರ್ ಇತಿಹಾಸ ಕೇಳಿದಾಗ ಈ ಸಾವು ನ್ಯಾಯವೇ? ಅನ್ನೋ ಮಾತು ಎಲ್ಲರಿಂದಲೂ ಕೇಳಿಬರುತ್ತಿದೆ. 

ರಾಜ್‌ಕುಮಾರ್ ಜೊತೆ ಹೆಜ್ಜೆ ಹಾಕಿದ 'ಹೊಸ ಬೆಳಕು' ಸರಿತಾ ಹೇಗಿದ್ದಾರೆ ನೋಡಿ!

250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ 90ರ ದಶಕದಲ್ಲಿ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟಿ ಸರಿತಾ ರಿಯಲ್‌ ಲೈಫ್‌ ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ. ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗಿರುವ ಅವರ  ಫೋಟೋಗಳಿಂದ ಕನ್ನಡ ಚಿತ್ರರಂಗದ ಹಳೆಯ ಸಮಧುರ ನೆನಪುಗಳನ್ನು ಒಮ್ಮೆ ಮೆಲಕು ಹಾಕೋಣ.

click me!