
ನವದೆಹಲಿ (ಡಿ.14): ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಕ್ರಮ ಸಂಪಾದನೆ ಮಾಡಿದ್ದಾರೆನ್ನುವ ಆರೋಪಕ್ಕೆ ಸೂಕ್ತ ಪುರಾವೆ ಒದಗಿಸಿ ಎಂದು ಸುಪ್ರೀಂ ಕೋರ್ಟ್ ಎನ್ ಜಿಓಗೆ ಸೂಚಿಸಿದೆ.
ನಾವು ಉನ್ನತ ಹುದ್ದೆಯಲ್ಲಿರುವವರ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ. ಹಾಗಾಗಿ ನೀವು ಬಲವಾದ ಸಾಕ್ಷಿಯನ್ನು ತರಬೇಕು ಎಂದು ನ್ಯಾ. ಜಗದೀಶ್ ಸಿಂಗ್ ಖೇಹರ್ ಹಾಗೂ ಅರುಣ್ ಮಿಶ್ರಾ ಪೀಠವು ಎನ್ ಜಿಓ ಪರ ವಕೀಲ ಪ್ರಶಾಂತ್ ಭೂಷಣ್ ಗೆ ಹೇಳಿದೆ. ಜೊತೆಗೆ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.
ಸೂಕ್ತ ಪುರಾವೆ ಒದಗಿಸಲು ಪ್ರಶಾಂತ್ ಭೂಷಣ್ ಕಾಲಾವಕಾಶ ಕೇಳಿದ್ದಾರೆ.
ಕಳೆದ ಬಾರಿ ನಡೆದ ವಿಚಾರಣೆಯಲ್ಲಿ ಹಿರಿಯ ವಕೀಲ ಶಾಂತಿ ಭೂಷಣ್ ಮತ್ತು ರಾಮ್ ಜೇಠ್ಮಲಾನಿ ಕಾಲಾವಕಾಶ ಕೇಳಿದ್ದರು. ನಾವು ಡಿ.11 ರವರೆಗೆ ಸಮಯ ನೀಡಿದ್ದೆವು. ನಮ್ಮ ಬಳಿ ಸಾಕ್ಷಿ ಇದೆ ಎಂದು ಜೇಠ್ಮಲಾನಿ ಹೇಳಿದ್ದಾರೆ. ಆದರೆ ಇಂದು ಅವರು ಹಾಜರಾಗಿಲ್ಲ. ನೀವು ಇನ್ನಷ್ಟು ಸಮಯ ಕೇಳುತ್ತಿದ್ದೀರಿ ಎಂದು ನ್ಯಾ. ಖೇಹರ್ ಪ್ರಶಾಂತ್ ಭೂಷನ್ ಗೆ ಕೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.