ರಕ್ಷಣಾ ಸಾಮಾಗ್ರಿ ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ

By Suvarna Web DeskFirst Published Dec 14, 2016, 3:31 PM IST
Highlights

ವಿದೇಶಿ ಕಂಪನಿಗಳು ಭಾರತದ ಮೇಲೆ ಹೂಡಿಕೆ ಮಾಡಲು ಆಸಕ್ತಿ ಹೊಂದಿಲ್ಲ, ಆದರೆ ತಂತ್ರಜ್ಞಾನಗಳನ್ನು ರಫ್ತು ಮಾಡಲು ಸಿದ್ಧವಿದೆ.

- ರಾಜ್'ನಾಥ್ ಸಿಂಗ್

ನವದೆಹಲಿ(ಡಿ.14): ರಕ್ಷಣಾ ಸಾಮಾಗ್ರಿಗಳ ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು, ಹಿಂದಿನ ಸರ್ಕಾರ ಇದಕ್ಕೆ ಪ್ರಾಶಸ್ತ್ಯ ನೀಡದಿದ್ದರಿಂದಲೇ ರಕ್ಷಣಾ ಒಪ್ಪಂದಗಳಲ್ಲಿ ಭ್ರಷ್ಟಾಚಾರ ಹೆಚ್ಚಲು ಕಾರಣವಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಟೀಕಿಸಿದ್ದಾರೆ.

ವಿದೇಶಿ ಕಂಪನಿಗಳು ಭಾರತದ ಮೇಲೆ ಹೂಡಿಕೆ ಮಾಡಲು ಆಸಕ್ತಿ ಹೊಂದಿಲ್ಲ, ಆದರೆ ತಂತ್ರಜ್ಞಾನಗಳನ್ನು ರಫ್ತು ಮಾಡಲು ಸಿದ್ಧವಿದೆ ಎಂದಿದ್ದಾರೆ.

‘‘ಹಿಂದೆ ರಕ್ಷಣಾ ಸಾಮಾಗ್ರಿಗಳ ಉತ್ಪಾದನೆಗೆ ನೀಡಬೇಕಿದ್ದ ಪ್ರಾಧಾನ್ಯತೆ ನೀಡಿಲ್ಲ. ಇದರಿಂದ ಉತ್ಪಾದನೆಯಲ್ಲಿ ಸ್ಪರ್ಧೆ ನೀಡುವ ಬದಲು ಭ್ರಷ್ಟಾಚಾರ ಹೆಚ್ಚಿಸಿತು. ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದ್ದು ಸ್ಪರ್ಧೆ ಹೆಚ್ಚಿಸಲಿದೆ, ಪಾರದರ್ಶಕತೆ ತರಲಿದೆ,’’ ಎಂದು ಭರವಸೆ ನೀಡಿದ್ದಾರೆ.

click me!