ಪಾಕ್ ಕಲಾವಿದರಿಗೆ ಬಾಲಿವುಡ್ ನಿಷೇಧ

By Web DeskFirst Published Feb 18, 2019, 1:41 PM IST
Highlights

ಪುಲ್ವಾಮಾದಲ್ಲಿ ಭೀಕರ ಉಗ್ರರ ದಾಳಿ ನಡೆದು 44 ಯೋಧರು ಹುತಾತ್ಮರಾದ ಬೆನ್ನಲ್ಲೇ ಬಾಲಿವುಡ್ ಮಹತ್ವದ ನಿರ್ಧಾರ ಕೈಗೊಂಡಿದ್ದು, ಬಾಲಿವುಡ್ ನಲ್ಲಿ ಪಾಕ್ ಕಲಾವಿದರಿಗೆ ನಿಷೇಧ ಹೇರಲಾಗಿದೆ. 

ಮುಂಬೈ : ಪುಲ್ವಾಮಾದಲ್ಲಿ ರಾಷ್ಟ್ರಕ್ಕೆ ಆಘಾತ ನೀಡೋ ಭೀಕರ ಉಗ್ರರ ದಾಳಿ ನಡೆದು 44 ಯೋಧರು ಹುತಾತ್ಮರಾದ ಬೆನ್ನಲ್ಲೇ ಇದೀಗ ಬಾಲಿವುಡ್ ನಲ್ಲಿ  ಮಹತ್ವದ ನಿರ್ಧಾರವೊಂದನ್ನು ಕೈಗೊಳ್ಳಲಾಗಿದೆ. 

"

ಬಾಲಿವುಡ್ ಚಿತ್ರಗಳಲ್ಲಿ ನಟಿಸುವುದು ಹಾಗೂ ಹಾಡುವುದಕ್ಕೆ ಪಾಕ್ ಮೂಲದ ಕಲಾವಿದರಿಗೆ ನಿಷೇಧ ಹೇರಲಾಗಿದೆ. All Indian Cine Workers Association ಈ ಬಗ್ಗೆ ಅಧಿಸೂಚನೆ ಹೊರಡಿಸಿದೆ. 

2016ರಲ್ಲಿ ನಡೆದ ಉರಿ ದಾಳಿ  ಸಂದರ್ಭದಲ್ಲೇ ನಟರಿಗೆ ನಿಷೇಧ ಹೇರುವ ಬಗ್ಗೆ ಸಾಕಷ್ಟು ಚರ್ಚೆ ನಡೆದಿದ್ದು ಇದೀಗ ಅಂತಿಮವಾಗಿ ಪಾಕ್ ಕಲಾವಿದರಿಗೆ ನಿಷೇಧ ಹೇರಲಾಗಿದೆ. 

POK ಪಾಕಿಸ್ತಾನಕ್ಕೆ: ಜನಾಭಿಪ್ರಾಯ ಸಂಗ್ರಹವಾಗಲಿ ಎಂದ ಕಮಲ್ ಹಾಸನ್

ಈ ಹಿಂದೆ ಪಾಕ್ ಕಲಾವಿದರನ್ನು ನಿಷೇಧಿಸುವ ಬಗ್ಗೆ  ಭಾರೀ ಪ್ರಮಾಣದಲ್ಲಿ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಇದೀಗ ನಟರಿಗೆ ನಿಷೇಧ ಹೇರಲು ಹಲವೆಡೆಯಿಂದ ಬೆಂಬಲ ದೊರಕಿದೆ. 

ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ಪಾಕ್  ಕಲಾವಿದರಿಗೆ ನಿಷೇಧ ಹೇರಲು ಅನೇಕರಿಂದ ಬೆಂಬಲ ವ್ಯಕ್ತವಾಗಿದೆ.

ಒಂದು ದಿನದ ವೇತನ CRPFಗೆ: ರಾಜ್ಯದ IPS ಅಧಿಕಾರಿಗಳ ನಿರ್ಧಾರ

ಈ ಬಗ್ಗೆ ಫಿಲ್ಮ್ ಸೆನ್ಸಾರ್ ಬೋರ್ಡ್ ಸದಸ್ಯರಾದ ಗುರಪ್ರೀತ್ ಕೌರ್ ಚಧಾ ಪಾಕ್ ನಟರಿಗೆ ಕಟ್ಟುನಿಟ್ಟಾಗಿ ಬಾಲಿವುಡ್ ಚಿತ್ರಗಳಲ್ಲಿ ನಟಿಸುವುದನ್ನು ನಿಷೇಧಿಸಲಾಗಿದೆ. ಅಲ್ಲದೇ ಹಾಡುಗಾರರಿಗೂ ಕೂಡ ನಿಷೇಧ ನೀತಿ ಅನ್ವಯವಾಗಲಿದೆ ಎಂದು ಹೇಳಿದ್ದಾರೆ.

click me!