
ಡೆಹ್ರಾಡೂನ್ : ಪುಲ್ವಾಮದಲ್ಲಿ ಭೀಕರ ಉಗ್ರರ ದಾಳಿ ನಡೆದು 44 ಯೋಧರು ಹುತಾತ್ಮರಾದ ಬೆನ್ನಲ್ಲೇ, ಜಮ್ಮು ಕಾಶ್ಮೀರದ ನೌಶೆರಾದಲ್ಲಿ ನಡೆದ ದಾಳಿಯಲ್ಲಿ ಐಇಡಿ ಸ್ಫೋಟವಾಗಿ ಹುತಾತ್ಮರಾದ ಮೇಜರ್ ಚಿತ್ರೇಶ್ ಸಿಂಗ್ ಬಿಸ್ತ್ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಆಗಮಿಸಿದೆ.
ಸಾವಿರಾರು ಜನರ ಸಮ್ಮುಖದಲ್ಲಿ ಮೇಜರ್ ಬಿಸ್ತ್ ಅವರಿಗೆ ಅಂತಿಮ ನಮನ ಸಲ್ಲಿಸಲಾಗಿದೆ. ಈ ಘಟನೆಗೆ ಕೋಟ್ಯಂತರ ಜನರು ಕಂಬನಿ ಮಿಡಿದಿದ್ದಾರೆ.
31 ವರ್ಷದ ಮೇಜರ್ ಬಿಸ್ತ್ ಅವರಿಗೆ ಮಾರ್ಚ್ 7ರಂದು ವಿವಾಹ ನಿಶ್ಚಯವಾಗಿತ್ತು. ಮದುಮಗನಾಗಿ ಮನೆಗೆ ಆಗಮಿಸಬೇಕಿದ್ದ ಮಗ ಪಾರ್ಥಿವ ಶರೀರ ರೂಪದಲ್ಲಿ ಆಗಮಿಸಿದ್ದಾರೆ.
ಫೆ. 14 ರ ರಾತ್ರಿ ನೌಶೆರಾ ಪ್ರದೇಶದಲ್ಲಿ ಉಗ್ರರು ಇರಿಸಿದ್ದ ಐಇಡಿ ಸ್ಫೋಟದಲ್ಲಿ ಮೇಜರ್ ಬಿಸ್ತ್ ಹುತಾತ್ಮರಾಗಿದ್ದರು. ಐಇಡಿ ನಿಷ್ಕ್ರೀಯಗೊಳಿಸುವ ವೇಳೆ ಸ್ಫೋಟಗೊಂಡು ಈ ದುರಂತ ಸಂಭವಿಸಿತ್ತು.
ಇನ್ನು ಅವರ ವಿವಾಹಕ್ಕೆ 19 ದಿನಗಳಷ್ಟೇ ಬಾಕಿ ಉಳಿದ ಸಂದರ್ಭದಲ್ಲಿ ಜೈಶ್ ಸಂಘಟನೆಯ ಉಗ್ರರ ಪಾತಕಿ ಕೃತ್ಯಕ್ಕೆ ಬಲಿಯಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ