
ಜೈಪುರ : ಪುಲ್ವಾಮದಲ್ಲಿ ಭೀಕರ ಉಗ್ರರ ದಾಳಿಯಲ್ಲಿ 44 ಯೋಧರು ಹುತಾತ್ಮರಾಗಿದ್ದು, ಇದರಲ್ಲಿ ರಾಜಸ್ಥಾನದ ಐವರು ಯೋಧರು ವೀರಮರಣವನ್ನಪ್ಪಿದ್ದರು.
ಈ ಐವರು ಯೋಧರ ಬಗ್ಗೆ ಪಠ್ಯದಲ್ಲಿ ಶೀಘ್ರ ಸೇರಿಸುವುದಾಗಿ ರಾಜಸ್ಥಾನ ಶಿಕ್ಷಣ ಸಚಿವ ಗೋವಿಂದ್ ಸಿಂಗ್ ದೊತಾಸ್ತ್ರ ಹೇಳಿದ್ದಾರೆ. ಈ ಬಗ್ಗೆ ಪಠ್ಯಪುಸ್ತಕ ಸಮಿತಿಗೂ ಸಚಿವರು ಸೂಚನೆ ನೀಡಿದ್ದಾರೆ. ಶೀಘ್ರವೇ ಮಕ್ಕಳ ಕೈಗೆ ಈ ಪಠ್ಯ ಲಭ್ಯವಾಗಲಿದೆ ಎಂದು ಸಚಿವರು ಹೇಳಿದ್ದಾರೆ.
ರಾಜಸ್ಥಾನ ಹುತಾತ್ಮರ ನಾಡಾಗಿದ್ದು, ಪ್ರತೀ ಜಿಲ್ಲೆಯಲ್ಲಿಯೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅನೇಕರಿದ್ದಾರೆ. ಇಂತವರ ವಿಚಾವರನ್ನು ಮಕ್ಕಳಿಗೆ ತಿಳಿಸುವ ಅಗತ್ಯವಿದ್ದು, ದೇಶಕ್ಕಾಗಿ ಪ್ರಾಣತೆತ್ತ ಯೋಧರ ಬಗ್ಗೆ ಮಕ್ಕಳು ತಿಳಿದುಕೊಳ್ಳುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಪಠ್ಯವನ್ನಾಗಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
POK ಪಾಕಿಸ್ತಾನಕ್ಕೆ: ಜನಾಭಿಪ್ರಾಯ ಸಂಗ್ರಹವಾಗಲಿ ಎಂದ ಕಮಲ್ ಹಾಸನ್
ಈ ಬಗ್ಗೆ ರಾಜಸ್ತಾನ ವಿಪಕ್ಷವಾದ ಬಿಜೆಪಿಯೂ ಕೂಡ ಅಂಕಿತ ನೀಡಿದ್ದು, ಇದೊಂದು ಒಳ್ಳೆಯ ನಿರ್ಧಾರ ಎಂದು ಸ್ವಾಗತಿಸಿದೆ. ಇನ್ನೂ ಅನೇಕ ಹುತಾತ್ಮರದ ವಿಚಾರಗಳ ಬಗ್ಗೆ ಮಕ್ಕಳು ತಿಳಿದುಕೊಳ್ಳುವ ಅಗತ್ಯವಿದೆ. ಈ ಬಗ್ಗೆ ಪಠ್ಯ ರೂಪಿಸುತ್ತಿರುವುದು ಒಳ್ಳೆಯ ನಿರ್ಧಾರವೆಂದು ವಿಪಕ್ಷ ಮುಖಂಡರು ಹೇಳಿದ್ದಾರೆ.
ಒಂದು ದಿನದ ವೇತನ CRPFಗೆ: ರಾಜ್ಯದ IPS ಅಧಿಕಾರಿಗಳ ನಿರ್ಧಾರ
ಪುಲ್ವಾಮದಲ್ಲಿ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ನಡೆಸಿದ ಭೀಕರ ದಾಳಿಯಲ್ಲಿ ರಾಜಸ್ಥಾನದ ಐವರು ಯೊಧರಾದ ರೋಹಿತಾಶ್ ಲಾಂಬ, ಭಗೀರತ್ ಸಿಂಗ್, ಹೇಮರಾಜ್ ಮೀನ, ನಾರಾಯಣ್ ಗುರ್ಜರ್, ಗೀತಾರಾಮ್ ಗುರ್ಜರ್ ಹುತಾತ್ಮರಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ